- Home
- Entertainment
- TV Talk
- Bigg Boss Season 12ರಲ್ಲಿ ಜನಮನ ಗೆದ್ದ ಇಬ್ಬರು ಸ್ಪರ್ಧಿಗಳು ಕಿರುತೆರೆಗೆ ರೀ ಎಂಟ್ರಿ ಕೊಡಲು ರೆಡಿ
Bigg Boss Season 12ರಲ್ಲಿ ಜನಮನ ಗೆದ್ದ ಇಬ್ಬರು ಸ್ಪರ್ಧಿಗಳು ಕಿರುತೆರೆಗೆ ರೀ ಎಂಟ್ರಿ ಕೊಡಲು ರೆಡಿ
Bigg Boss Season 12ರಲ್ಲಿ ಕಠಿಣ ಸ್ಪರ್ಧೆಯನ್ನು ನೀಡುವ ಮೂಲಕ ಕೊನೆಯ ದಿನದ ತನಕ ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳಾದ ಧ್ರುವಂತ್ ಮತ್ತು ಧನುಷ್ ಗೌಡ ಇಬ್ಬರೂ ಸಹ ಮತ್ತೆ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು
ಧ್ರುವಂತ್ ಮತ್ತು ಧನುಷ್ ಗೌಡ ಇಬ್ಬರೂ ಕೂಡ ಈ ವರ್ಷದ ಬಿಗ್ ಬಾಸ್ ಸೀಸನ್ 12 ರಲ್ಲಿ ಸ್ಪರ್ಧಿಸಿದ್ದ ಸ್ಪರ್ಧಿಗಳು. ಇಬ್ಬರೂ ಕೊನೆಯ ದಿನದವರೆಗೂ ಇಬ್ಬರು ಮನರಂಜನೆ, ಸ್ಪರ್ಧೆ ನೀಡುತ್ತಾ, ಮಿಂಚಿದ್ದರು. ಇದೀಗ ಇಬ್ಬರೂ ಕೂಡ ಕಿರುತೆರೆಗೆ ಕಂ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.
ಧನುಷ್ ಗೌಡ
ಗೀತಾ ಧಾರಾವಾಹಿಯಲ್ಲಿ ಅಹಂಕಾರಿ ನಾಯಕ ವಿಜಯ್ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದವರು ಧನುಷ್ ಗೌಡ. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಇದು ಮುಗಿಯುತ್ತಿದ್ದಂತೆ, ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಧನುಷ್ ನಟಿಸಿದ್ದರು. ಬಳಿಕ ಆ ಧಾರಾವಾಹಿಯಿಂದ ಅರ್ಧದಲ್ಲಿ ಹೊರ ಬಂದಿದ್ದರು.
ಧನುಷ್ ಗೌಡ ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ?
ಧನುಷ್ ಗೌಡ ನಾಯಕನಾಗಿ ಶೀಘ್ರದಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಯಾವ ಧಾರಾವಾಹಿ? ಯಾವ ವಾಹಿನಿಯ ಮೂಲಕ ಮತ್ತೆ ಬರುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲ. ಕೆಲವರು ಜಗಧಾತ್ರಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಉದಯವಾಹಿನಿ ಅಥವಾ ಸ್ಟಾರ್ ಸುವರ್ಣ ವಾಹಿನಿ ಮೂಲಕ ಬರ್ತಿದ್ದಾರೆ ಎನ್ನುತ್ತಿದ್ದಾರೆ.
ಧ್ರುವಂತ್
ಚರಿತ್ ಬಾಳಪ್ಪ, ಕನ್ನಡ ಹಾಗೂ ತೆಲುಗು ಸೀರಿಯಲ್ ನಟ. ಎಂಟಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಧ್ರುವಂತ್ ನಟಿಸಿದ್ದಾರೆ. ಮುದ್ದು ಲಕ್ಷ್ಮೀ ಧಾರಾವಾಹಿಯ ಧ್ರುವಂತ್ ಪಾತ್ರ ಜನಪ್ರಿಯತೆ ಪಡೆದು, ಅದೇ ಹೆಸರನ್ನು ಧ್ರುವಂತ್ ಆಗಿ ಬದಲಾಯಿಸಿದರು. ಬಳಿಕ ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದರು.
ಅಗ್ನಿ ಸಾಕ್ಷಿಯಲ್ಲಿ ಧ್ರುವಂತ್
ಶೀಘ್ರದಲ್ಲೇ ಶುರುವಾಗಲಿರುವ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಧ್ರುವಂತ್ ನಟಿಸಲಿದ್ದಾರೆ. ಶಮಂತ್ ಬ್ರೋ ಗೌಡ ಹಾಗೂ ವರ್ಷಿಣಿ ಗೌಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಧ್ರುವಂತ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದು, ಇದು ವಿಲನ್ ಪಾತ್ರವೇ ಆಗಿರಬಹುದು.
ಅಭಿಮಾನಿಗಳು ಫುಲ್ ಖುಷ್
ಬಿಗ್ ಬಾಸ್ ಸ್ಪರ್ಧಿಗಳೆಲ್ಲಾ, ಒಂದಲ್ಲ ಒಂದು ಸೀರಿಯಲ್ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ.ಇದೀಗ ಧ್ರುವಂತ್ ಮತ್ತು ಧನುಷ್ ಗೌಡ ಕಂ ಬ್ಯಾಕ್ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಗಿಲ್ಲಿ ಅಭಿಮಾನಿಗಳು ಮಾತ್ರ ಧನುಷ್ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

