10:10 PM (IST) Apr 28

Karnataka News Live 28 April 2026 Bigg Boss ರಜತ್​ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ

ಬಿಗ್​ಬಾಸ್​ ಖ್ಯಾತಿಯ ರಜತ್ ಇದೀಗ ಸಾರ್ವಜನಿಕ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟದ ವಿಡಿಯೋ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.  ಮಚ್ಚು ಹಿಡಿದು ರೀಲ್ಸ್ ಹಾಗೂ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಈಗ ಹೀಗೊಂದು ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ.

Read Full Story
09:48 PM (IST) Apr 28

Karnataka News Live 28 April 2026 ಕೆಎಎಸ್‌ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ - ಸಿಎಂ ಸಿದ್ದರಾಮಯ್ಯ

ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್‌ (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Read Full Story
09:34 PM (IST) Apr 28

Karnataka News Live 28 April 2026 ಮುಂಬೈಗೆ ಹೋಗೋರ ಗಮನಕ್ಕೆ ರೈಲು ಸೇವೆಯಲ್ಲಿ 1ತಿಂಗಳು ಅನಿರೀಕ್ಷಿತ ಬದಲಾವಣೆ, ಕೊಂಕಣ-ದಕ್ಷಿಣ ರೈಲ್ವೆ ಜಂಟಿ ಪ್ರಕಟಣೆ

ಮುಂಬೈನ ಸಿಎಸ್‌ಎಂಟಿ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣಾ ಕಾಮಗಾರಿಯಿಂದಾಗಿ ಮೇ 19ರವರೆಗೆ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು-ಮುಂಬೈ ಸೂಪರ್‌ಫಾಸ್ಟ್ ಮತ್ತು ತೇಜಸ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ದಾದರ್ ಮತ್ತು ಥಾಣೆಯಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ. ಜೊತೆಗೆ, ಪರಶುರಾಮ್ ಎಕ್ಸ್‌ಪ್ರೆಸ್ ಸೇವೆಯನ್ನೂ ಭಾಗಶಃ ರದ್ದುಪಡಿಸಲಾಗಿದೆ.
Read Full Story
09:05 PM (IST) Apr 28

Karnataka News Live 28 April 2026 ಪಂಜಾಬ್ ರೈಲು ಸ್ಫೋಟಕ್ಕೆ ಉಗ್ರರ ಬೃಹತ್ ಸಂಚು - ವಿಫಲವಾದ ಭಯಾನಕ ಯತ್ನ, ಓರ್ವ ಉಗ್ರ ಸಾವು

ಪಂಜಾಬ್‌ನ ಪಟಿಯಾಲಾ ಬಳಿ ರೈಲು ಹಳಿ ಸ್ಫೋಟಿಸುವ ಸಂಚು ವಿಫಲವಾಗಿದ್ದು, ಸ್ಫೋಟಕ ಅಳವಡಿಸುತ್ತಿದ್ದ ಶಂಕಿತ ಉಗ್ರನೇ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದ್ದು, ಇದರ ಹಿಂದೆ ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನಿ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
Read Full Story
08:46 PM (IST) Apr 28

Karnataka News Live 28 April 2026 ಬೈಕ್ ಟ್ಯಾಕ್ಸಿ ಫೈಟ್ ಈಗ ಸುಪ್ರೀಂ ಅಂಗಳಕ್ಕೆ! ಹೈಕೋರ್ಟ್ ತೀರ್ಪು ಪ್ರಶ್ನಿಸಿ ದೆಹಲಿ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧವನ್ನು ತೆರವುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಬೈಕ್ ಟ್ಯಾಕ್ಸಿ ನಿಷೇಧವನ್ನು ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿತ್ತು.

Read Full Story
07:45 PM (IST) Apr 28

Karnataka News Live 28 April 2026 ಬೆಂಗಳೂರಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ವಿವಾದ, ಬಿಜೆಪಿ ಪ್ರತಿಭಟನೆ, ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ

ದೆಹಲಿ ದಂಗೆ ಆರೋಪಿ ಉಮರ್ ಖಾಲಿದ್ ಕುರಿತ 'ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್' ಕಾರ್ಯಕ್ರಮವು ಬೆಂಗಳೂರಿನಲ್ಲಿ ತೀವ್ರ ವಿವಾದ ಮತ್ತು ಪ್ರತಿಭಟನೆಗಳ ನಡುವೆ ನಡೆಯಿತು. ಬಿಜೆಪಿ ಕಾರ್ಯಕರ್ತರ ವಿರೋಧದ ಮಧ್ಯೆಯೂ, ನಟ ಪ್ರಕಾಶ್ ರಾಜ್ ಭಾಗವಹಿಸಿದ್ದ ಈ ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
Read Full Story
06:26 PM (IST) Apr 28

Karnataka News Live 28 April 2026 ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವಿವಾದ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಘ ಸ್ಪಷ್ಟನೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸಿಸಿಟಿವಿ ಸಮಸ್ಯೆಯು ಖಾಸಗಿ ಮಾರಾಟಗಾರರ ಆಂತರಿಕ ವಿವಾದವಾಗಿದ್ದು, ಪೊಲೀಸ್ ಭದ್ರತಾ ವ್ಯವಸ್ಥೆಯ ಭಾಗವಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಘ ಸ್ಪಷ್ಟಪಡಿಸಿದೆ. ಸಾರ್ವಜನಿಕ ಪ್ರವೇಶಕ್ಕೂ ಮುನ್ನವೇ ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸಂಘವು ಖಚಿತಪಡಿಸಿದೆ.
Read Full Story
06:06 PM (IST) Apr 28

Karnataka News Live 28 April 2026 ಸಿದ್ದರಾಮಯ್ಯ ನಂತರ ಸಿಎಂ ರೇಸ್‌ನಲ್ಲಿರೋದು ಡಿಕೆಶಿ ಮಾತ್ರ - ಶಾಸಕ ಎಚ್.ಸಿ.ಬಾಲಕೃಷ್ಣ

ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ರೇಸ್‌ನಲ್ಲಿರೋದು ಡಿ.ಕೆ.ಶಿವಕುಮಾರ್ ಮಾತ್ರ‌. ಬೇರೆಯವರೂ ರೇಸ್‌ನಲ್ಲಿ ಇರಬಹುದು. ಆದರೆ ಅದು ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

Read Full Story
05:51 PM (IST) Apr 28

Karnataka News Live 28 April 2026 ದೆಹಲಿ ಟ್ರಿಪ್‌ನಲ್ಲಿರುವ ರಾಜ್ಯ ಸರ್ಕಾರ ಬರಗಾಲ ನಿರ್ವಹಣೆಯಲ್ಲಿ ವಿಫಲ - ನಿಖಿಲ್‌ ಕುಮಾರಸ್ವಾಮಿ

ಖುರ್ಚಿಗಾಗಿ ದೆಹಲಿ ಪ್ರವಾಸದ ಬಿಸಿಯಲ್ಲಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಬಿಸಿಯನ್ನು ರಾಜ್ಯದ ಜನತೆ ಮುಟ್ಟಿಸಲಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

Read Full Story
05:44 PM (IST) Apr 28

Karnataka News Live 28 April 2026 ಬೆಂಗಳೂರು-ತುಮಕೂರು ರೈಲು ಮಾರ್ಗ ಚತುಷ್ಪಥ, ಯಲಹಂಕದಿಂದ ಅರಸೀಕೆರೆಗೆ ಹೊಸ ಮೆಮು, ಏನಿದು ಮಹಾಯೋಜನೆ?

ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು-ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ಯಲಹಂಕದಿಂದ ಅರಸೀಕೆರೆವರೆಗೆ ಹೊಸ ಮೆಮು ರೈಲು ಸೇವೆ ಮತ್ತು ತುಮಕೂರಿನಲ್ಲಿ ಪಾದಚಾರಿ ಸುರಂಗ ಮಾರ್ಗಗಳ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ, ಇದು ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಯನ್ನು ಹೆಚ್ಚಿಸಲಿದೆ.
Read Full Story
05:17 PM (IST) Apr 28

Karnataka News Live 28 April 2026 ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ ಆರ್ಭಟ - 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಹೆಚ್ಚಾಗುವ ಎಚ್ಚರಿಕೆ ನೀಡಿದೆ. ರಾಜ್ಯದ 22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರಿನಲ್ಲೂ ಮಳೆಯ ನಿರೀಕ್ಷೆಯಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.
Read Full Story
04:35 PM (IST) Apr 28

Karnataka News Live 28 April 2026 ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ - ಸಚಿವ ದಿನೇಶ್ ಗುಂಡೂರಾವ್

ಸಚಿವ ಸಂಪುಟ ಪುನರ್‌ ರಚನೆ ಅಗತ್ಯವಿದ್ದು, ಇತರರಿಗೆ ಕೂಡ ಅವಕಾಶ ಸಿಗಬೇಕು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Read Full Story
04:33 PM (IST) Apr 28

Karnataka News Live 28 April 2026 ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲು - ವೇಳಾಪಟ್ಟಿ, ನಿಲುಗಡೆ ಬಗ್ಗೆ ಸಂಪೂರ್ಣ ಮಾಹಿತಿ

ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್‌ಎಂವಿಟಿ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿಗದಿತ ದಿನಾಂಕಗಳಂದು ಸಂಚರಿಸಲಿದ್ದು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
Read Full Story
04:21 PM (IST) Apr 28

Karnataka News Live 28 April 2026 ಅಭಿವೃದ್ಧಿಯಲ್ಲಿ ಎಂಜಿನಿರ್‌ಗಳ ಕೊಡುಗೆ ಅನನ್ಯ - ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಶ್ಲಾಘನೆ

ಎಂಜಿನಿಯರ್‌ಗಳು ಈ ಸಮಾಜಕ್ಕೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಅಭಿವೃದ್ಧಿ, ನಗರದ ಸೌಂದರ್ಯತೆಗೆ ಎಂಜಿನಿಯರ್‌ಗಳ ಕೊಡುಗೆ ಅನನ್ಯವಾದುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

Read Full Story
03:57 PM (IST) Apr 28

Karnataka News Live 28 April 2026 ಸಂಧಾನದ ನಂತರವೂ ಸರಿಹೋಗದ ಸಂಸಾರ - 4 ದಿನದ ಹಿಂದಷ್ಟೇ ಮನೆಗೆ ಬಂದ ಪತ್ನಿಯ ಕೊಂದು ಮಗುವಿನೊಂದಿಗೆ ಬಾವಿಗೆ ಜಿಗಿದ ಪತಿ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ಪತ್ನಿಯನ್ನು ಕೊಂದು, ಮಗುವಿನೊಂದಿಗೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಸ್ಥಳೀಯರು ಕೂಡಲೇ ಮಗುವನ್ನು ರಕ್ಷಿಸಿದರೂ, ಪತಿ ಪತ್ನಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

Read Full Story
03:17 PM (IST) Apr 28

Karnataka News Live 28 April 2026 ನಿವೃತ್ತ ಡಿಜಿ ಓಂಪ್ರಕಾಶ್ ಹತ್ಯೆ ಪ್ರಕರಣ - ಆರೋಪಿ ಪತ್ನಿ ನೋಡಲು ಬರದ ಮಕ್ಕಳು, ವಿಚಿತ್ರ ವರ್ತನೆಗೆ ಬೇಸತ್ತ ಜೈಲಾಧಿಕಾರಿಗಳು!

ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ಆರೋಪಿ ಪಲ್ಲವಿ, ಜೈಲಿನಲ್ಲಿ ಒಂದು ವರ್ಷ ಕಳೆದಿದ್ದು, ಅವರ ವರ್ತನೆ ವಿಚಿತ್ರವಾಗಿ ಬದಲಾಗಿದೆ. ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಅವರು, ಜೈಲು ಸಿಬ್ಬಂದಿ ಮತ್ತು ಸಹ ಕೈದಿಗಳಿಗೆ ತೊಂದರೆ ನೀಡುತ್ತಿದ್ದು, ಪ್ರತಿ ಹದಿನೈದು ದಿನಕ್ಕೊಮ್ಮೆ ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Full Story
03:07 PM (IST) Apr 28

Karnataka News Live 28 April 2026 ಜ್ಯೂಸ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ - ಚಾಲಕನ ನೆರವಿಗೆ ಧಾವಿಸದೇ ಬಿಟ್ಟಿಯಾಗಿ ಸಿಕ್ಕ ಜ್ಯೂಸ್‌ಗೆ ಮುಗಿಬಿದ್ದ ಜನ

ತಂಪು ಪಾನೀಯ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದ್ದು ಚಾಲಕ ಸಹಾಯಕ್ಕಾಗಿ ಬೇಡಿದರೂ, ಜನ ಆತನನ್ನು ನಿರ್ಲ್ಷಕ್ಷಿಸಿ ತಮ್ಮ ವಾಹನಗಳಲ್ಲಿ ಬಂದು ರಸ್ತೆಗೆ ಬಿದ್ದ ಜ್ಯೂಸ್ ಬಾಟಲ್‌ಗಳನ್ನು ಹೊತ್ತೊಯ್ದಿದ್ದು ಜನರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Read Full Story
02:51 PM (IST) Apr 28

Karnataka News Live 28 April 2026 ಬೆಂಗಳೂರಿನಲ್ಲಿ ಎನ್ವಿಡಿಯಾ ಬೃಹತ್ ಹೂಡಿಕೆ - 1,230 ಕೋಟಿ ರೂ. ಮೊತ್ತದ ಡೀಲ್; 7.6 ಲಕ್ಷ ಚದರಡಿ ಕಚೇರಿ ಬಾಡಿಗೆಗೆ!

ಎಐ ದೈತ್ಯ ಎನ್ವಿಡಿಯಾ, ಬೆಂಗಳೂರಿನ ಬಾಗ್ಮನೆ ಕ್ಯಾಪಿಟಲ್‌ನಲ್ಲಿ 7.6 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆದು ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ. 10 ವರ್ಷಗಳ ಈ ಒಪ್ಪಂದದ ಮೌಲ್ಯ ಸುಮಾರು 1,230 ಕೋಟಿ ರೂಪಾಯಿಗಳಾಗಿದ್ದು, ಇದು ಭಾರತದ ಎಐ ಪರಿಸರ ವ್ಯವಸ್ಥೆಗೆ ದೊಡ್ಡ ಉತ್ತೇಜನ ನೀಡಲಿದೆ.
Read Full Story
02:40 PM (IST) Apr 28

Karnataka News Live 28 April 2026 ರಾಜ್ ಸ್ಮಾರಕ ವಿವಾದ - ನಟ ಚೇತನ್ ಅಹಿಂಸಾ ವಿರುದ್ಧ ಪ್ರತಿಭಟನೆ, ಗಡಿಪಾರಿಗೆ ಆಗ್ರಹ, ಹಲವು ಗಣ್ಯರಿಂದ ಖಂಡನೆ

ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಕುರಿತು ನಟ ಚೇತನ್ ಅಹಿಂಸಾ ನೀಡಿದ ವಿವಾದಾತ್ಮಕ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರವೇ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಚೇತನ್ ಅವರನ್ನು ಚಿತ್ರರಂಗದಿಂದ ಗಡಿಪಾರು ಮಾಡುವಂತೆ ಮತ್ತು ಅವರ ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹಿಸಿವೆ.
Read Full Story
01:38 PM (IST) Apr 28

Karnataka News Live 28 April 2026 SSLC ಲೀ ಹಳಗನ್ನಡ ನಡುಗನ್ನಡ - ಮಕ್ಕಳು ಗಡಗಡ! ಕನ್ನಡ ವಿಷಯದಲ್ಲೂ ಫೇಲ್ ಆಗಲು ಇದೇ ಕಾರಣವೇ?

ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅನುತ್ತೀರ್ಣರಾಗಲು ಪಠ್ಯಪುಸ್ತಕದಲ್ಲಿನ ಅಧಿಕ ವ್ಯಾಕರಣದ ಹೊರೆ ಮತ್ತು ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಪ್ರಮುಖ ಕಾರಣವೆಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 

Read Full Story