- Home
- Entertainment
- TV Talk
- ತಪ್ಪಿನ ಅರಿವಾಗಿದೆ- ವೈಲ್ಡ್ಕಾರ್ಡ್ ಕೊಟ್ರೆ ಸುಮ್ಸುಮ್ನೆ ಕೂಗಾಡ್ತೇನೆ, ಕಣ್ಣು ಕೆಂಪು ಮಾಡ್ತೇನೆ- Bigg Bogg ಅಮಿತ್!
ತಪ್ಪಿನ ಅರಿವಾಗಿದೆ- ವೈಲ್ಡ್ಕಾರ್ಡ್ ಕೊಟ್ರೆ ಸುಮ್ಸುಮ್ನೆ ಕೂಗಾಡ್ತೇನೆ, ಕಣ್ಣು ಕೆಂಪು ಮಾಡ್ತೇನೆ- Bigg Bogg ಅಮಿತ್!
ಒಂದೇ ವಾರದಲ್ಲಿ ಬಿಗ್ಬಾಸ್ ಮನೆಯಿಂದ ಹೊರಬಿದ್ದ ಆರ್.ಜೆ. ಅಮಿತ್, ಇದ್ದ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಸಿಕ್ಕರೆ ತನ್ನ ತಪ್ಪು ಸರಿಪಡಿಸಿಕೊಳ್ಳುವುದಾಗಿ ಹೇಳಿರುವ ಅವರು, ಬಿಗ್ಬಾಸ್ ಮನೆ ಸೀಜ್ ಆಗಿರುವ ಬಗ್ಗೆಯೂ ನೋವು ವ್ಯಕ್ತಪಡಿಸಿದ್ದಾರೆ.

ಒಂದೇ ವಾರದಲ್ಲಿ ಹೊರಬಂದ R.J.Amith
ಆರ್.ಜೆ. ಅಮಿತ್ ಮತ್ತು ಕರಿಬಸಪ್ಪ ಅವರನ್ನು ಒಂದನೇ ವಾರದಲ್ಲಿ ಎಲಿಮಿನೇಟ್ ಮಾಡಿದ ಬೆನ್ನಲ್ಲೇ Bigg Boss 12ಕ್ಕೆ ಆಘಾತವಾಗಿದ್ದು, ಸದ್ಯ ರಾಮನಗರ ಜಿಲ್ಲಾಧಿಕಾರಿಗಳಿಂದ ʻಬಿಗ್ ಬಾಸ್ʼ ಶೋ ನಡಿತಿದ್ದ ಜಾಲಿವುಡ್ ಸ್ಟುಡಿಯೋವನ್ನು ಸೀಜ್ ಮಾಡಿದ್ದಾರೆ. ಇದಾಗಲೇ, ಸ್ಪರ್ಧಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಪರವಾನಗಿ ಪಡೆಯಲಿಲ್ಲ ಎನ್ನುವ ಕಾರಣ ನೀಡಿ ಮನೆಗೆ ಬೀಗ ಹಾಕಲಾಗಿದೆ.
ಉದ್ಯೋಗ ಇಲ್ಲದೇ ಕಷ್ಟ
ಇದರ ಮಧ್ಯೆಯೇ, ಒಂದೇ ವಾರದಲ್ಲಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದು, ಇದ್ದ ಕೆಲಸವನ್ನೂ ಕಳೆದುಕೊಂಡಿರೋ ಆರ್.ಜೆ. ಅಮಿತ್ ಸ್ಥಿತಿ ಸದ್ಯ ಅಲ್ಲೋಲ ಕಲ್ಲೋಲವಾಗಿದೆ. ಇರುವ ಕೆಲಸ ಬಿಟ್ಟು ರಿಸೈನ್ ಮಾಡಿ ಹೋಗಿದ್ದ ಅಮಿತ್ ಅವರ ಕೈಯಲ್ಲಿ ಸದ್ಯ ಕೆಲಸವಿಲ್ಲ. ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇದೀಗ ಬಾಸ್ ಟಿವಿಗೆ ಕೊಟ್ಟಿರುವ ಸಂದರ್ಶನದಲ್ಲಿ ಅವರು, ವೈಲ್ಡ್ ಕಾರ್ಡ್ ಎಂಟ್ರಿಗೆ ಅವಕಾಶ ಸಿಕ್ಕರೆ ತಾವು ಹಿಂದೆ ಮಾಡಿರುವ ತಪ್ಪನ್ನು ಮತ್ತೆ ಮಾಡುವುದಿಲ್ಲ ಎನ್ನುತ್ತಲೇ ಬಿಗ್ಬಾಸ್ ಮನೆಯಲ್ಲಿ ಇರಬೇಕೆಂದ್ರೆ ಯಾವ ಕ್ವಾಲಿಟಿ ಇರಬೇಕು ಎನ್ನೋದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ತಪ್ಪಿನ ಅರಿವಾಗಿದೆ
ನನಗೆ ಈಗ ತಪ್ಪಿನ ಅರಿವಾಗಿದೆ. ನಾನು ಏನೇ ಸಮಸ್ಯೆ ಇದ್ದರೂ ಅದನ್ನು ಇದೇ ರೀತಿ ಸಾಫ್ಟ್ ಆಗಿ ಬಗೆಹರಿಸಿಕೊಳ್ಳುವವನು. ಆದರೆ ಬಿಗ್ಬಾಸ್ ಮನೆಯಲ್ಲಿ ಹಾಗೆ ನಡೆಯಲ್ಲ. ಕಾರಣ ಇಲ್ಲದಿದ್ದರೂ ಕಿರುಚಬೇಕು. ಎಲ್ಲರೂ ಒಂದು ಕಡೆ ಇದ್ದಾಗ ಒಬ್ಬ ಸುಮ್ಸುಮ್ನೆ ಕಿರುಚಿದ್ರೆ ಸಹಜವಾಗಿ ಕ್ಯಾಮೆರಾ ಸೇರಿದಂತೆ ಎಲ್ಲರ ಕಣ್ಣೂ ಅಲ್ಲೇ ಹೋಗತ್ತಲ್ವಾ, ಆಗ ಅಲ್ಲಿ ಡಿಮಾಂಡ್ ಜಾಸ್ತಿಯಾಗೋದು ಎಂದಿದ್ದಾರೆ.
ವೈಲ್ಡ್ಕಾರ್ಡ್ ಎಂಟ್ರಿ
ಈಗ ನನಗೆ ಅರ್ಥ ಆಗಿದೆ. ಒಂದು ವೇಳೆ ವೈಲ್ಡ್ಕಾರ್ಡ್ ಎಂಟ್ರಿ ಸಿಕ್ಕರೆ ಸಣ್ಣ ಸಣ್ಣದಕ್ಕೂ ಕಿರುಚಾಡ್ತೇನೆ, ಕೂಗಾಡ್ತೇನೆ, ದೊಡ್ಡ ದೊಡ್ಡ ಕಣ್ಣು ಬಿಡುತ್ತೇನೆ. ಒಂದು ಸಲ ಚಾನ್ಸ್ ಸಿಗಲಿ ನೋಡಿ ನನ್ನ ಪವರ್ ಎಂದಿದ್ದಾರೆ. ಸದ್ಯ ಕೆಲಸ ಇಲ್ಲ. ಬಿಗ್ಬಾಸ್ನಲ್ಲಿ ಎಷ್ಟು ಹಣ ಕೊಡುತ್ತಾರೆ ಎನ್ನುವುದನ್ನು ನಾನು ರಿವೀಲ್ ಮಾಡುವಂತಿಲ್ಲ. ಆದರೆ ಅದಕ್ಕಿಂತಲೂ ಮುಖ್ಯವಾಗಿ ನನಗೆ ಉದ್ಯೋಗ ಬೇಕಿದೆ ಎಂದಿದ್ದಾರೆ R.J.Amith.
ಕಿರುತೆರೆ-ಸಿನಿಮಾ
ಕಿರುತೆರೆ ಅಥವಾ ಸಿನಿಮಾ ಎಲ್ಲಿಯೇ ಅವಕಾಶ ಸಿಕ್ಕರೂ ಹೋಗುತ್ತೇನೆ. ನಟನೆ ಮಾಡುವುದು ನನಗೆ ಇಷ್ಟ. ಎಲ್ಲೇ ಹೋದರೂ ನನ್ನ ಆರ್ಜೆ ಉದ್ಯೋಗ ತೊರೆಯುವುದಿಲ್ಲ. ಆದರೆ ಸದ್ಯ ಉದ್ಯೋಗದ ಹುಡುಕಾಟದಲ್ಲಿ ಇದ್ದೇನೆ ಎಂದಿದ್ದಾರೆ.
ಸೀಜ್ ಬಗ್ಗೆ ನೋವು
ಅವರು ಬಿಗ್ಬಾಸ್ ಮನೆ ಸೀಜ್ ಮಾಡಿರುವ ಬಗ್ಗೆಯೂ ನೋವು ತೋಡಿಕೊಂಡಿದ್ದಾರೆ. ಷೋ ತುಂಬಾ ದೊಡ್ಡ ಹೊಡೆತ ಬಿದ್ದಿದೆ. ಇದನ್ನು ನಡೆಸೋದು ಅಷ್ಟು ಈಸಿ ಅಲ್ಲ. ಸಾವಿರಾರು ಜನ ಕೆಲಸ ಮಾಡ್ತಾರೆ. ಸಡನ್ ಆಗಿ ಹೀಗೆ ಮಧ್ಯದಲ್ಲಿ ನಿಲ್ಲಿಸಿ ಬಿಟ್ಟರೆ ತುಂಬಾ ಕಷ್ಟ ಎಂದಿದ್ದಾರೆ.