ಬಿಗ್‌ಬಾಸ್ ಮನೆಗೆ ಹೋಗೋ ಮುನ್ನ ಸ್ಪರ್ಧಿಗಳ ಮೆಡಿಕಲ್ ಚೆಕಪ್ ಆಗುತ್ತಾ? ಯಾವ ಟೆಸ್ಟ್ ಮಾಡ್ತಾರೆ?
ಬಿಗ್‌ಬಾಸ್. ನೋಡಲು ಅರಮನೆಯಂತಿದ್ದರೂ ಅದೊಂಥರಾ ಸೆರೆಮನೆ. ಮೆಂಟಲಿ ಸ್ಟ್ರಾಂಗ್ ಇರೋರು ನಾರ್ಮಲ್ ಆಗಿ ಬಿಹೇವ್ ಮಾಡಲು ಸಾಧ್ಯ. ಮೊದ ಮೊದಲು ಹಿಂದಿಯಲ್ಲಿ ಮಾತ್ರ ಬರುತ್ತಿದ್ದ ಬಿಗ್‌ಬಾಸ್ ಇದೀಗ ಎಲ್ಲ ಭಾಷೆಗಳಲ್ಲೂ ಬರ್ತಿದೆ. ತೆಲುಗಿನಲ್ಲಿ ಸೆ.31ರಿಂದ ಬಿಗ್ ಬಾಸ್ ರಿಯಾಲಿಟ್ ಶೋ ಆರಂಭವಾಗಲಿದ್ದು, ಕನ್ನಡದಲ್ಲಿಯೂ ಪ್ರೋಮೋ ಶೂಟಿಂಗ್ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಈಗಾಗಲೇ ಶುರುವಾಗಿದ್ದು, ಸುದೀಪ್ ಆ್ಯಂಕರಿಂಗ್ ಮಾಡ್ತಾರೋ, ಇಲ್ಲವೋ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ತೆಗಲುಗಿನಲ್ಲಿ ನಾಗರ್ಜುನ ನಡೆಸೋ ಬಿಗ್‌ಬಾಸ್‌ನಲ್ಲಿ ಅನೇಕ ಕನ್ನಡಿಗರೂ ಇರಲಿದ್ದಾರೆಂಬ ಸುದ್ದಿ ಇದೆ. ಅಷ್ಟಕ್ಕೂ ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಯಾವ ಯಾವ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ?
ಬಿಗಾ ಬಾಸ್ ತೆಲುಗು ಆರಂಭಗೊಳ್ಳುತ್ತಿದ್ದು, 100 ದಿನಗಳ ಕಾಲ ಸ್ಪರ್ಧಿಗಳು ಮನೆಯೊಂದರಲ್ಲಿ ಸೆರೆಯಾಗುತ್ತಿದ್ದಾರೆ. ಹೊರ ಜಗತ್ತಿನೊಂದಿಗೆ ಡಿಸ್‌ಕನೆಕ್ಟ್ ಆಗಿ, ತಮ್ಮ ಕೆಲಸಗಳನ್ನು ತಾವೇ ಮಾಡ್ಕೊಂಡು, ಕೊಟ್ಟ ಟಾಸ್ಕ್, ಸ್ಪರ್ಧೆ, ಜಗಳ ಅದೂ ಇದು ಅಂತ ಎಂಗೇಜ್ ಆಗಿರುತ್ತಾರೆ. ದಿನಾ ಪೂರ್ತಿ ಒಂದಲ್ಲೊಂದು ಆ್ಯಕ್ಟಿವಿಟೀಸ್‌ನಲ್ಲಿ ತೊಡಗಿಕೊಳ್ಳುವ ಈ ಸ್ಪರ್ಧಿಗಳ ಕೆಲವೇ ಕೆಲವೇ ದೃಶ್ಯಗಳನ್ನು ವೀಕ್ಷಕರಿಗೆ ತೋರಿಸುತ್ತಾರೆ. ಆದರೆ, ಅವರಲ್ಲಿ ಅನೇಕರಿಗೆ ಒಮ್ಮೊಮ್ಮೆ ಆರೋಗ್ಯ ಕೈ ಕೊಡುತ್ತೆ. ಇಲ್ಲವೇ ಫಿಸಿಕಲ್ ಟಾಸ್ಕ್ ಮಾಡುವಾಗ ಗಾಯಗಳಾಗುವ ಸಾಧ್ಯತೆಯೂ ಇರುತ್ತದೆ. ಇಂಥ ಸಂದರ್ಭದಲ್ಲಿ ವೈದ್ಯ ತಪಾಸಣೆ ಹೇಗೆ ನಡೆಯುತ್ತದೆ.
ಕನ್ನಡ ಬಿಗ್ ಬಾಸ್‌ನಲ್ಲಿ ಒಮ್ಮೆ ಹುಚ್ಚ ವೆಂಕಟ್ ಪ್ರಥಮ್‌ಗೆ ಹೊಡೆದಿದ್ದು ದೊಡ್ಡ ಇಶ್ಯೂ ಆಗಿತ್ತು. ಅಷ್ಟೇ ಅಲ್ಲ ಡ್ರೋನ್ ಪ್ರತಾಪ್ ಆರೋಗ್ಯವೂ ಕಳೆದ ಬಿಗ್ ಬಾಸ್‌ನಲ್ಲಿ ಹದಗೆಟ್ಟಿತ್ತು. ಸೋಪಿನ ನೀರಿನೊಂದಿಗೆ ಆಡುವಾಗ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಕಣ್ಣಿಗೆ ಪೆಟ್ಟಾಗಿತ್ತು. ತನೀಷಾ ಕುಪ್ಪಂಡಗೆ ಸಹ ಕಾಲು ಫ್ಯಾಕ್ಚರ್ ಆಗಿತ್ತು. ಮನೆಯಿಂದ ಹೊರ ಬಂದಿದ್ದರು. ಮಾಳವಿಕಾಗೂ ಆರೋಗ್ಯ ಹದಗೆಟ್ಟಿತ್ತು. ಹೀಗೆ ಹುಷಾರಿಲ್ಲ ಆಗೋದು ಕಾಮನ್. ಆದರೆ, ಮನೆಗೆ ಹೊಕ್ಕುವ ಮುನ್ನವೇ ಒಮ್ಮೆ ಬಿಪಿ, ಶುಗರ್ ಎಲ್ಲ ಚೆಕ್ ಮಾಡಿ ಕಳುಹಿಸಿದರೆ ಒಳ್ಳೇದು ಅಲ್ವಾ?
100 ದಿನ ತಮ್ಮವರನ್ನು ಬಿಟ್ಟು, ಹೊರ ಪ್ರಪಂಚದೊಂದಿಗೆ ಡಿಸ್‌ಕನೆಕ್ಟ್ ಆಗಿರುವಾಗ ತಲೆ ಕೆಟ್ಟ ಹಾಗೂ ಆಗೋದು ಸಹಜ. ಅದಕ್ಕೆ ಕೆಲವರು ದುಡ್ಡೂ ಬೇಡ, ಖ್ಯಾತಿಯೂ ಬೇಡವೆಂದು ವಾರ, ತಿಂಗಳಲ್ಲಿ ಮನೆಯಿಂದ ಹೊರ ಬರೋದೂ ಇದೆ. ಅಲ್ಲದೇ ಗಂಭೀರ ಕಾಯಲೆಯಿಂದ ಬಳಲೋರು ಈ ಶೋಗೆ ಹೋಗದಿದ್ದರೆ ಒಳ್ಳೇದು. ಇದೇ ಕಾರಣಕ್ಕೆ ಖ್ಯಾತ ಪತ್ರಕರ್ತ ರವಿ ಬೆಳಗೆರೆ ವಾರದಲ್ಲಿಯೇ ಮನೆಯಿಂದ ಹೊರ ಬಂದರು. ಅಲ್ಲದೇ ಹೃದಯ ಸಂಬಂಧ ರೋಗ ಇರೋರು ಈ ಮನೆಗೆ ಎಂಟ್ರಿ ಕೊಡದಿರುವುದೇ ಸೇಫ್.
ಬಿಪಿ, ಶುಗರ್ ಜೊತೆ ಸಣ್ಣ ಪುಟ್ಟ ಆರೋಗ್ಯ ತಪಾಸಣೆಯನ್ನು ಸ್ಪರ್ಧಿಗಳಿಗೆ ಮೊದಲಿಂದಲೂ ಮಾಡಲಾಗುತ್ತಿತ್ತು. ಆದರೆ, ಕೊರೋನಾ ಕಾರಣದಿಂದ ಈ ಆರೋಗ್ಯ ತಪಾಸಣೆ ಪ್ರೊಸಿಜರ್ ಮತ್ತಷ್ಟು ಕಟ್ಟುನಿಟ್ಟಾಗಿದ್ದು, ಹೆಲ್ದೀ ಆ್ಯಂಡ್ ಫಿಟ್ ಆಗಿರೋರು ಮಾತ್ರ ಮನೆಗೆ ಎಂಟ್ರಿ ಕೊಟ್ಟರೆ ಒಳ್ಳೇದು.
ಶ್ವಾಸಕೊಶ, ಬೆನ್ನು ಮೂಳೆ ಸಮಸ್ಯೆ, ಉಸಿರಾಟದ ಸಮಸ್ಯೆ, ಮೇಜರ್ ಬೋನ್ ಇಂಜುರಿಯಂಥ ಸಮಸ್ಯೆಗಳಿದ್ದರೂ ಬಿಗ್ ಬಾಸ್ ಮನೆಗೆ ಹೋಗದಿದ್ದರೆ ಒಳ್ಳೇದು. ಈ ಬಗ್ಗೆ ಶೋಗೆ ಕರೆ ಬಂದಾಗಲೇ ಆಯೋಜಕರಿಗೆ ಹೇಳಿ ಬಿಟ್ಟರೆ ಒಳ್ಳೇಯದು. ಒಟ್ಟಾರೆ ಸುರಕ್ಷಿತ ದೃಷ್ಟಿಯಿಂದ ಮೂಲಭೂತ ಆರೋಗ್ಯ ತಪಾಸಣೆ ಮಾಡುವುದು ಒಳ್ಳೇದು.
ಆದರೆ, ಪ್ರತೀ ಸೀಸನ್‌ನಲ್ಲಿಯೂ ಒಬ್ಬರಲ್ಲಿ ಒಬ್ಬರಿಗೆ ಆರೋಗ್ಯ ಸಮಸ್ಯೆ ಕಾಡುವುದು ಸಹಜ. ಆ ಕಾರಣದಿಂದಲೇ ಎಲಿಮನೇಟ್ ಆಗದಿದ್ದರೂ, ಅತ್ಯುತ್ತಮ ಸ್ಪರ್ಧೆ ನೀಡುತ್ತಿದ್ದರೂ, ಮನೆಯಿಂದ ಹೊರ ಬರುವ ಅನಿವಾರ್ಯ ಸೃಷ್ಟಿಯಾಗುತ್ತದೆ.
ಮನೆಗೆ ಎಂಟರ್ ಆಗೋ ಮುನ್ನ, ಬಿಗ್ ಬಾಸ್ ಶೋನಲ್ಲಿ ಎಲಿಮನೇಟ್ ಆದರೆ ಮತ್ತೆ ಮನೆಗೋ ಹೋಗುವ ಮುನ್ನ ತೂಕ ಸೇರಿ ಬೇಸಿಕ್ ಆರೋಗ್ಯ ತಪಾಸಣೆ ನಡೆಸಿಯೇ ಸ್ಪರ್ಧಿಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ.