- Home
- Entertainment
- TV Talk
- ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ Bigg Boss ರಕ್ಷಿತಾ ಶೆಟ್ಟಿ ಸ್ಯಾರಿ ಪಿನ್: ಏನಿದು ವಿಷ್ಯ?
ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ Bigg Boss ರಕ್ಷಿತಾ ಶೆಟ್ಟಿ ಸ್ಯಾರಿ ಪಿನ್: ಏನಿದು ವಿಷ್ಯ?
ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ತಮ್ಮ ಸೀರೆಗೆ ತಾವೇ ಪಿನ್ ಹಾಕಿಕೊಂಡಿದ್ದು ಅವರ ಸ್ವಾಭಿಮಾನದ ಸಂಕೇತ ಎಂಬ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏನಿದು ವಿಷ್ಯ?

ರಕ್ಷಿತಾ ಶೆಟ್ಟಿ ಹವಾ
ಬಿಗ್ ಬಾಸ್ (Bigg Boss 12) ರಕ್ಷಿತಾ ಶೆಟ್ಟಿ ಸದ್ಯ ಬಿಗ್ಬಾಸ್ ಮನೆಯಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಇದೀಗ ಪತ್ರದ ವಿಚಾರದಲ್ಲಿಯೂ ರಕ್ಷಿತಾ ಶೆಟ್ಟಿ ಒಂದು ರೀತಿಯಲ್ಲಿ ಟಾರ್ಗೆಟ್ ಆಗಿದ್ದಾರೆ.
ಅರೆಬರೆ ಕನ್ನಡದಿಂದ ಫೇಮಸ್
ಅದೇನೇ ಇದ್ದರೂ ರಕ್ಷಿತಾ ಶೆಟ್ಟಿ ಮಾತ್ರ ತಮ್ಮ ಅರೆಬರೆ ಕನ್ನಡದಿಂದಲೇ ಫೇಮಸ್ ಆಗುತ್ತಿದ್ದಾರೆ. ಉಳಿದ ಟೈಮ್ನಲ್ಲಿ ಸೌಮ್ಯವಾಗಿದ್ದು, ಜಗಳಕ್ಕೆ ನಿಂತರೆ ಕಾಳಿ ಅವತಾರ ತಾಳುವುದನ್ನೂ ನೋಡಬಹುದು. ಆದರೂ ರಕ್ಷಿತಾ ಶೆಟ್ಟಿಯ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿಯೂ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
ಏನೇ ಮಾಡಿದ್ರೂ ಸದ್ದು
ಇಂತಿಪ್ಪ ರಕ್ಷಿತಾ ಶೆಟ್ಟಿ (Bigg Boss Rakshitha Shetty) ಸೋಷಿಯಲ್ ಮೀಡಿಯಾದಲ್ಲಿಯೂ ಹವಾ ಸೃಷ್ಟಿಸುತ್ತಲೇ ಇದ್ದಾರೆ. ಅವರು ಏನೇ ಮಾಡಿದರೂ ಅದು ಸದ್ದು ಮಾಡುತ್ತದೆ. ಇದೀಗ ಅವರ ಸ್ಯಾರಿ ಪಿನ್ ಚರ್ಚೆಯ ವಿಷಯವಾಗಿದೆ.
ಸ್ಯಾರಿ ಪಿನ್ ವೈರಲ್
ಅಷ್ಟಕ್ಕೂ ಆಗಿರೋದು ಏನೆಂದರೆ, ಅವರ ಸ್ಯಾರಿ ಪಿನ್ ಅವರೇ ಹಾಕಿಕೊಂಡಿದ್ದು, ಅದು ಅವರ ಸ್ವಾಭಿಮಾನದ ಸಂಕೇತ ಎಂಬ ಪೋಸ್ಟ್ ಒಂದು ವೈರಲ್ ಆಗಿದೆ. ಅವರು ಸೀರೆಗೆ ಹಾಕಿರುವ ಪಿನ್ ಸ್ವಲ್ಪ ಮೇಲೆ ಕಾಣಿಸುತ್ತಿರುವ ಕಾರಣ ಈ ಪೋಸ್ಟ್ ಹಾಕಲಾಗಿದೆ. ನಿತಿನ್ ಪುತ್ತೂರು ಎನ್ನುವವರು ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಇವ್ಳ ಸೀರೆಗೂ ಇವಳೇ ಪಿನ್ ಹಾಕೊತಾಳೆ ಅನ್ಸುತ್ತೆ, ಯಾರ ಹೆಲ್ಪ್ ಕೇಳ್ದೆ. ಕಿಡಿ ನಾವೇ ಹಚ್ಚಿದ್ರೆ... ಅದು ಕಿಚ್ಚು, ಕಿಡಿ ತಾನಾಗೇ ಹತ್ಕೊಂಡ್ರೆ...ಅದು ಕಾಡ್ಗಿಚ್ಚು ಎಂದು ಅದಕ್ಕೆ ಶೀರ್ಷಿಕೆ ಕೊಟ್ಟಿದ್ದಾರೆ.
ಸಮಜಾಯಿಷಿ
ಬಿಗ್ಬಾಸ್ನಲ್ಲಿ ಪರಸ್ಪರ ಹೆಲ್ಪ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಕ್ಷಿತಾಳನ್ನು ಒಬ್ಬಂಟಿ ಮಾಡಿದ್ದಾರೆ. ಅದಕ್ಕೇ ಬೇಸರವಿದೆ. ಆದರೆ ಆಕೆ ಯಾರ ಸಹಾಯವನ್ನೂ ಪಡೆಯದೇ ಪಿನ್ ಹಾಕಿಕೊಂಡಿದ್ದಾಳೆ ಎಂದು ಅವರು ಸಮಜಾಯಿಷಿ ಕೊಟ್ಟಿದ್ದಾರೆ.
ಇದೆಂಥ ಮಾತು?
ಅವರೇನೋ ರಕ್ಷಿತಾ ಶೆಟ್ಟಿಯ ಫ್ಯಾನ್ ಆಗಿದ್ದು, ಅವರ ಪರವಾಗಿ ಬರೆದಿದ್ದಾರೆ. ಆದರೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೂ ಹಲವು ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ಕೋಪಗೊಂಡಂತಿದೆ. ಅಷ್ಟಕ್ಕೂ ಹೆಚ್ಚಿನ ಮಹಿಳೆಯರು ಯಾರೂ ತಮ್ಮ ಸ್ಯಾರಿ ಪಿನ್ ಬೇರೆಯವರ ಬಳಿ ಹಾಕಿಸುವುದೇ ಇಲ್ಲ. ಎಲ್ಲರೂ ಅವರ ಸ್ಯಾರಿಪಿನ್ ಅವರೇ ಹಾಕಿಕೊಳ್ಳುವುದು. ಅದರಲ್ಲಿ ವಿಶೇಷ ಏನಿದೆ ಎನ್ನುವುದು ಅವರ ಪ್ರಶ್ನೆ.
ಮಹಿಳೆಯರ ಕೋಪ
ನಾವು ಬಹಳಷ್ಟು ಹೆಂಗಸರು ನಮ್ಮ ಸೀರೆಗೆ ನಾವೇ ಪಿನ್ ಹಾಕಿಕೊಳ್ತೇವೆ, ಬ್ಲೌಸ್ ಹಿಂದಿನ ಕುಚ್ಚನ್ನೂ ನಾವೇ ಕಟ್ಟಿಕೊಳ್ತೇವೇ, ನೆರಿಗೆಯ ತುದಿಯನ್ನೂ ನಾವೇ ಹಿಡಿದುಕೊಳ್ತೇವೆ. ಸೀರೆ ಉಡಲು ನಿಜ ಹೇಳಬೇಕೆಂದರೆ ಯಾರ ಸಹಾಯ ಬೇಕಿಲ್ಲ . ಒಂದು ಸೀರೆ ಪಿನ್ ಕಂಡಿದ್ದಕ್ಕೆ ಇಷ್ಟೆಲ್ಲಾನಾ ಎಂದು ಒಬ್ಬರು ಬರೆದಿದ್ದರೆ, ಇದರಲ್ಲಿ ನಿಮಗೆ ಏನು ವಿಶೇಷ ಕಂಡಿತು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಎಲ್ಲರೂ ಅವರವರೇ ಹಾಕ್ಕೊಳ್ಳುದು. ನೀವು ಎಂತ ಮಾರಾಯ್ರೇ ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಹಲ್ಚಲ್ ಸೃಷ್ಟಿಸ್ತಿರೋ ಪೋಸ್ಟ್
ಇಂಥ ಪೋಸ್ಟ್ ನಿಮ್ಮಂಥವರು ಹಾಕಿದ್ರೆ ಚೆನ್ನಾಗಿ ಇರಲ್ಲ. ಇವೆಲ್ಲಾ ಕೆಲಸಕ್ಕೆ ಬಾರದ ಪೋಸ್ಟ್ಗಳು. ಇದು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗುತ್ತದೆ ಎಂದು ನೆಟ್ಟಿಗರೊಬ್ಬರು ಬುದ್ಧಿಮಾತು ಹೇಳಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ.