ಜನಪ್ರಿಯ ಬಿಗ್ ಬಾಸ್ ಶೋ ಒಟಿಟಿ ಬಹುತೇಕ ರದ್ದು, ಅಧಿಕೃತ ಘೋಷಣೆಯೊಂದೆ ಬಾಕಿ
ಜನಪ್ರಿಯ ಬಿಗ್ ಬಾಸ್ ಶೋ ಒಟಿಟಿ ಬಹುತೇಕ ರದ್ದು, ರಿಯಾಲಿಟಿ ಶೋ ಕಾರ್ಯಕ್ರಮ ಇತರ ಎಲ್ಲಾ ಕಾರ್ಯಕ್ರಮಗಳಿಗಿಂತ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಆದರೆ ಒಟಿಟಿ ಬಿಗ್ ಬಾಸ್ ಶೋ ಮುಂದುವರಿಯುವ ಸಾಧ್ಯತೆ ಇಲ್ಲ.

ಬಿಗ್ ಬಾಸ್ ಜನಪ್ರಿಯತೆ
ಬಿಗ್ ಬಾಸ್ ಕಾರ್ಯಕ್ರಮ ಪ್ರತಿ ಭಾಷೆಯಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಕನ್ನಡ ಬಿಗ್ ಬಾಸ್ ಇತ್ತೀಚೆಗಷ್ಟೆ ಮುಕ್ತಾಯಗೊಂಡಿದೆ. ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ. ಗಿಲ್ಲಿ ಅಭಿಮಾನಿಗಳ ಸಂಭ್ರಮ ಇನ್ನು ನಡೆಯುತ್ತಲೇ ಇದೆ. ಇದರ ನಡುವೆ ಜನಪ್ರಿಯ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮ ಬಹುತೇಕ ರದ್ದಾಗಿದೆ.
ಬಿಗ್ ಬಾಸ್ ಒಟಿಟಿ
ಹೌದು, ಬಿಗ್ ಬಾಸ್ ಹಿಂದಿ ರಿಯಾಲಿಟಿ ಶೋ ಅದ್ದೂರಿಯಾಗಿ ಅಂತ್ಯಕಂಡಿದೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಹಿಂದಿ ಒಟಿಟಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಆದರೆ ಕಳೆದ ಐದು ಆವೃತ್ತಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಬಾರಿ ಬಿಗ್ ಬಾಸ್ ಹಿಂದಿ ಒಟಿಟಿ ಶೋ ಬಹುತೇಕ ರದ್ದಾಗಿದೆ ಎಂದು ಮೂಲಗಳು ಹೇಳಿವೆ.
2021ರಲ್ಲಿ ಆರಂಭಗೊಂಡ ಒಟಿಟಿ ಶೋ
ಹಿಂದಿ ಬಿಗ್ ಬಾಸ್ ಜನಪ್ರಿಯತೆ ಬೆನ್ನಲ್ಲೇ ಯುವ ಪ್ರೇಕ್ಷರ ಸೆಳೆಯಲು ಒಟಿಟಿ ಮೂಲಕ ಹಿಂದಿ ಬಿಗ್ ಬಾಸ್ ಶೋ ಆರಂಭಗೊಂಡಿತ್ತು. ಆರಂಭದಲ್ಲಿ ವೂಟ್ ಪ್ಲಾಟ್‌ಫಾರ್ಮ್ ಮೂಲಕ ಆರಂಭಗೊಂಡಿತ್ತು. ಬಳಿಕ ಜಿಯೋ ಸಿನಿಮಾ (ಇದೀಗ ಜಿಯೋ ಹಾಟ್‌ಸ್ಟಾರ್) ಮೂಲಕ ಪ್ರಸರವಾಗುತ್ತಿತ್ತು. 2021ರಲ್ಲಿ ಒಟಿಟಿ ಕಾರ್ಯಕ್ರಮ ಆರಂಭಗೊಂಡಿತ್ತು.
ವೀಕ್ಷಕರ ಕ್ಲಾಶ್
ಹಿಂದಿ ಬಿಗ್ ಬಾಸ್ ಟಿವಿ ಕಾರ್ಯಕ್ರಮ ಹಾಗೂ ಒಟಟಿ ಕಾರ್ಯಕ್ರಮ ಎರಡೂ ಕೆಲ ವಾರಗಳ ಕಾಲ ಏಕಕಾಲದಲ್ಲಿ ಪ್ರಸಾರವಾಗಲಿದೆ. ಇದರಿಂದ ವೀಕ್ಷಕರು ಒಂದು ಕಾರ್ಯಕ್ರಮ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಎರಡೂ ಕಾರ್ಯಕ್ರಮಗಳ ಟಿಆರ್‌ಪಿ ಸಮಸ್ಸೆ ಎದುರಾಗಲಿದೆ . ಇದೇ ಕಾರಣದಿಂದ ಒಟಿಟಿ ಬಿಗ್ ಬಾಸ್ ಕಾರ್ಯಕ್ರಮ ರದ್ದುಗೊಳಿಸಲು ಆಯೋಜಕರು ಮುಂದಾಗಿದ್ದಾರೆ.
ಮೂರು ಆವೃತ್ತಿ ಸಂಪೂರ್ಣ
ಹಿಂದಿ ಒಟಿಟಿ ಬಿಗ್ ಬಾಸ್ ಶೋ ಕೇವಲ ಮೂರು ಆವೃತ್ತಿಗಳು ಪೂರ್ಣಗೊಂಡಿದೆ. 2021ರಲ್ಲಿ ಮೊದಲ ಆವೃತ್ತಿ ನಡೆದರೆ, 2021, 2022 ಹಾಗೂ 2023ರಲ್ಲಿ ಮೂರು ಆವೃತ್ತಿಗಳು ನಡೆದಿದೆ.
ಮೂರು ಆವೃತ್ತಿ ಸಂಪೂರ್ಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

