Bigg Boss Ott ನಂದಿನಿ ಔಟ್; ಲವ್ ಬರ್ಡ್ಸ್ ದೂರ ದೂರ....
ಬಿಗ್ ಬಾಸ್ ಮನೆಯಲ್ಲಿ ಅಚ್ಚರಿ ಎಲಿಮಿನೇಶನ್. ಸ್ಟ್ರಾಂಗ್ ಸ್ಪರ್ಧಿ ನಂದಿನಿ ಹೊರ ಬರಲು ಯಾರು ಕಾರಣ?

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋ ವೋಟ್ ಆಪ್‌ನಲ್ಲಿ 24/7 ಗಂಟೆ ಪ್ರಸಾರವಾಗುತ್ತಿದೆ.
ಬಿಗ್ ಬಾಸ್ ಓಟಿಟಿ 5ನೇ ವಾರ ಮನೆಯಿಂದ ಸ್ಟ್ರಾಂಗ್ ಸ್ಪರ್ಧಿ ನಂದಿನಿ ಎಲಿಮಿನೇಟ್ ಆಗಿದ್ದಾರೆ. ದಿನೇ ದಿನೇ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತಿದೆ.
ಬಿಬಿ ಮನೆ ಪ್ರವೇಶಿಸುವಾಗ ನಂದಿನಿ ಮತ್ತು ಜಶ್ವಂತ್ ಒಂದು ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ನಿಜ ಜೀವನದಲ್ಲಿ ಇವರಿಬ್ಬರೂ ಲವರ್ಸ್. ಇತ್ತೀಚಿನ ಎಪಿಸೋಡ್‌ಗಳಲ್ಲಿ ನಂದಿನಿ ಪೊಸೆಸಿವ್‌ನೆಸ್ ಹೆಚ್ಚಿಗೆ ತೋರಿಸುತ್ತಿದ್ದ ಕಾರಣ ಟಾಸ್ಕ್‌ನಲ್ಲಿ ಫೇಲ್ ಆಗಿದ್ದಾರೆ.
ಫಿನಾಲೆ ವಾರಕ್ಕೆ ರೂಪೇಶ್, ರಾಕೇಶ್ ಮತ್ತು ಸಾನ್ಯಾ ಮೊದಲೇ ತಲುಪಿದ್ದರು. ಈಗ ವಾರ ಆರ್ಯವರ್ಧನ್, ಸೋಮಣ್ಣ, ಸೋನು ಗೌಡ, ಜಯಶ್ರೀ ಮತ್ತು ಜಶ್ವಂತ್ ಪ್ರವೇಶಿಸಿದ್ದಾರೆ.
ಹಿಂದಿ ರಿಯಾಲಿಟಿ ಶೋ ವಿನ್ನರ್ ಆಗಿರುವ ನಂದಿನಿ ಓಟಿಟಿ ಬಿಗ್ ಬಾಸ್‌ನೂ ಗೆಲ್ಲಬಹುದು ಅನ್ನೋ ನಿರೀಕ್ಷೆ ಇತ್ತು. ಆದರಿ ಅತಿ ಕಡಿಮೆ ವೋಟ್ ಪಡೆದು 5ನೇ ವಾರಕ್ಕೆ ಹೊರ ಬಂದಿದ್ದಾರೆ.
ಫಿನಾಲೆ ಮುಟ್ಟುವ ಟಾಪ್ 3 ಸ್ಪರ್ಧಿಗಳು ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 9ಕ್ಕೆ ನೇರ ಪ್ರವೇಶ ಪಡೆಯುತ್ತಾರೆ. ಈ ಮೂಲಕ ಇವರಿಗೆ ಡಬಲ್ ಅವಕಾಶ ನೀಡಲಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.