- Home
- Entertainment
- TV Talk
- ಅಬ್ಬಬ್ಬಾ! ಎಷ್ಟು ಗ್ರಾಂಡ್ ಆಗಿತ್ತು ನೋಡಿ ಮಂಜು ಪಾವಗಡ-ನಂದಿನಿ ರಿಸೆಪ್ಶನ್; ಫೋಟೋ ವೈರಲ್
ಅಬ್ಬಬ್ಬಾ! ಎಷ್ಟು ಗ್ರಾಂಡ್ ಆಗಿತ್ತು ನೋಡಿ ಮಂಜು ಪಾವಗಡ-ನಂದಿನಿ ರಿಸೆಪ್ಶನ್; ಫೋಟೋ ವೈರಲ್
ಅದ್ಧೂರಿಯಾಗಿ ನಡೆಯಿತ್ತು ಲ್ಯಾಗ್ ಮಂಜು ಆರತಕ್ಷತೆ. ಸೂಟೂ ಬೂಟು ಧರಿಸಿ ಸಖತ್ ಮಿಂಚಿದ ಬಿಗ್ ಬಾಸ್ ಸ್ಪರ್ಧಿ.....

ಮಜಾ ಭಾರತ ಕಾಮಿಡಿ ಶೋ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ಮಂಜು ಪಾವಗಡ ಸಖತ್ ಹೆಸರು ಮಾಡಿದ್ದು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ.
ಲ್ಯಾಗ್ ಮಂಜು ಎಂದೇ ಖ್ಯಾತಿ ಪಡೆದಿರುವ ಮಂಜು ಪಾವಗಡ ಗಿಚ್ಚಿ ಗಿಲಿಗಿಲಿ ಹಾಸ್ಯ ಕಾರ್ಯಕ್ರಮದಲ್ಲಿ ತಂಡ ಕಟ್ಟಿಕೊಂಡು ಸಖತ್ ಮನೋರಂಜನೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಮಂಜು ಪಾವಗಡ ಮತ್ತು ನಂದಿನಿ ಎಂಬುವವರ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು, ಅಲ್ಲಿಂದ ಮದುವೆ ಬಗ್ಗೆ ಗಾಸಿಪ್ ಹರಡಿತ್ತು.
ಇದೀಗ ನವೆಂಬರ್ 13 ಮತ್ತು14ರಂದು ಮಂಜು ಪಾವಗಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಂಜು ಕೈ ಹಿಡಿಯುತ್ತಿರುವ ಹುಡುಗಿ ಹೆಸರು ನಂದಿನಿ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇನ್ನು ಆರತಕ್ಷತೆಯಲ್ಲಿ ಕಪ್ಪು ಬಣ್ಣದ ಡಿಸೈನರ್ ಸೂಟ್‌ನಲ್ಲಿ ಮಂಜು ಕಾಣಿಸಿಕೊಂಡರೆ, ಕೆಂಪು ಬಣ್ಣದ ದುಬಾರಿ ಲೆಹೆಂಗಾದಲ್ಲಿ ನಂದಿನಿ ಸೂಪರ್ ಆಗಿ ಮಿಂಚಿದ್ದಾರೆ.
ಮಂಜು ಮದುವೆಯಲ್ಲಿ ಗಣ್ಯರು ಭಾಗಿಯಾಗಿದ್ದರು. ಅದರಲ್ಲೂ ರೀಲ್ಸ್ ರೇಶ್ಮಾ ಆಂಟಿ ಮದುವೆ ಸ್ಟೇಜ್ ಮೇಲೂ ಹಾಯ್ ಫ್ರೆಂಡ್ ಇವತ್ತು ಮಂಜು ಮದುವೆ ಎಂದು ಕೂಗುತ್ತಾ ಮಾಡಿರುವ ರೀಲ್ಸ್ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.