ಬಾಲಿಯಲ್ಲಿ ಸಂಗೀತಾ ಶೃಂಗೇರಿ ಕೊಟ್ಟ ಸೀರೆ ಧರಿಸಿದ ಬಿಗ್ ಬಾಸ್ ಸಿರಿ; ಹನಿಮೂನ್‌ಗೆ ಹೋದ್ರೂ ಆವಮ್ಮ ಬಿಡಲ್ವಾ ಎಂದ ನೆಟ್ಟಿಗರು!
ಬಾಲಿ ಟ್ರಿಪ್ ಎಂಜಾಯ್ ಮಾಡುತ್ತಿರುವ ಸಿರಿ ಪ್ರಭಾಕರ್. ಹನಿಮೂನ್ ಎಂಜಾಯ್ ಮಾಡಿ ಎಂದು ಸಲಹೆ ಕೊಟ್ಟ ನೆಟ್ಟಿಗರು....
ಕನ್ನಡ ಕಿರುತೆರೆಯ ಜನ ಮೆಚ್ಚಿದ ನಾಯಕಿ, ಬಿಗ್ ಬಾಸ್ ಸುಂದರಿ ಸಿರಿ ಮತ್ತು ಪತಿ ಪ್ರಭಾಕರ್ ಬಾಲಿ ಟ್ರಿಪ್ ಎಂಜಾಯ್ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಜೂನ್ 13, 2024ರಂದು ಸಿರಿ (Bigg boss Siri) ಮತ್ತು ನಿರ್ದೇಶಕ ಕಮ್ ನಟ ಪ್ರಭಾಕರ್ ಬೋರೇಗೌಡ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದೀಗ ಬಾಲಿ ಟ್ರಿಪ್ ಮಾಡುತ್ತಿರುವ ಕಾರಣ ಹನಿಮೂನ್ ಎಂದು ನೆಟ್ಟಿಗರು ಗೆಸ್ ಮಾಡಿ ಕಾಮೆಂಟ್ಸ್‌ನಲ್ಲಿ ಜಾಲಿ ಮಾಡಿ ಎನ್ನುತ್ತಿದ್ದಾರೆ.
ಬಾಲಿಯಲ್ಲಿ ಇರುವ ಪ್ರತಿಷ್ಠಿತ ಸ್ವಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಆಗ ಬಿಗ್ ಬಾಸ್ ಸ್ನೇಹಿತೆ ಸಂಗೀತಾ ಶೃಂಗೇರಿ ಗಿಫ್ಟ್ ಕೊಟ್ಟ ಸೀರೆಯನ್ನು ಧರಿಸಿದ್ದಾರೆ.
'ಸಂಗೀತಾ ಶೃಂಗೇರಿ ನೀವು ಕೊಟ್ಟಿರುವ ಸೀರೆಯನ್ನು ಧರಿಸಲು ನಾನು ಒಂದೊಳ್ಳೆ ದಿನಕ್ಕಾಗಿ ಕಾಯುತ್ತಿದೆ, ಈಗ ಆ ಸೀರೆಯನ್ನು ಬಾಲಿಯಲ್ಲಿ ಧರಿಸಿದ್ದೀನಿ' ಎಂದು ಸಿರಿ ಬರೆದುಕೊಂಡಿದ್ದಾರೆ.
ಕಾರ್ತಿಕ್ ಮಹೇಶ್ ನಿಮ್ಮ ಒಳ್ಳೆಯ ಸ್ನೇಹಿತ ಆತನನ್ನು ನನಪು ಮಾಡಿಕೊಳ್ಳಿ ಯಾಕೆ ಎಲ್ಲಿ ಹೋದರು ಸಂಗೀತಾ ಶೃಂಗೇರಿ? ಹನಿಮೂನ್‌ಗೆ ಹೋದ್ರು ಆವಮ್ಮನ ಬಿಡಲ್ವಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.