BBK 12: ಅದೊಂದು ಪದಕ್ಕೆ ಇಡೀ ಮನೆಯನ್ನು ರಣರಂಗ ಮಾಡಿದ ಅಶ್ವಿನಿ ಗೌಡ; ವೀಕ್ಷಕರೇ ಕಂಗಾಲು
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ರಘು ಗೌಡ ಮಾತಿನಿಂದ ಅಶ್ವಿನಿ ಗೌಡ ಸಿಟ್ಟಾಗಿದ್ದಾರೆ. ಅಶ್ವಿನಿ ಗೌಡ ಅವರಂತೂ ಮನೆಯಿಂದ ಹೊರಗಡೆ ಹೋಗಲು ರೆಡಿಯಾಗಿದ್ದರು. ಇದೇ ವಿಚಾರವಾಗಿ ಮನೆಯಲ್ಲಿ ದೊಡ್ಡ ಜಗಳವೇ ನಡೆದಿದೆ. ಎಲ್ಲರಿಗೂ ಅಶ್ವಿನಿ ಅವರದ್ದೇ ತಪ್ಪು ಎಂದು ಕೂಡ ಅನಿಸಿದೆ.

ಪೌಡರ್ ರೂಮ್ ಕ್ಲೀನ್ ಮಾಡಿ
ಪೌಡರ್ ರೂಮ್ ಕ್ಲೀನ್ ಮಾಡಿ ಎಂದು ಈ ವಾರದ ಕ್ಯಾಪ್ಟನ್ ರಘು ಅವರು ಅಶ್ವಿನಿ ಗೌಡಗೆ ಹೇಳಿದರು. ಆದರೆ ಅಶ್ವಿನಿ ಮಾತು ಕೇಳಲಿಲ್ಲ. “ನನಗೆ ಬೆನ್ನು ನೋವಿದೆ” ಎಂದು ಅಶ್ವಿನಿ ಹೇಳುತ್ತಾರೆ. ರಘು ಅವರು, “ಹತ್ತು ನಿಮಿಷ ಆದ್ಮೇಲೆ ಬೆನ್ನು ನೋವು ಹೋದರೆ ಮಾಡ್ತೀನಿ” ಎಂದು ಹೇಳಿದ್ದಾರೆ. ಇದು ರಘುಗೆ ಬೇಸರ ತಂದಿದೆ. “ಹತ್ತು ನಿಮಿಷದಲ್ಲಿ ನೋವು ಹೋಗತ್ತಾ?” ಎಂದು ರಘು ಪ್ರಶ್ನೆ ಮಾಡಿದಾಗ, “ನೀವು ಹಾಗೆಲ್ಲ ಮಾತಾಡೋ ಹಾಗಿಲ್ಲ” ಎಂದಿದ್ದಾರೆ.
ನೀವು ಏನು ಕಿತ್ತಾಕಿದ್ದೀರಾ?
“ನೀಟ್ ಆಗಿ ಮಾತಾಡೋಕೆ ಬರಲ್ವಾ? ವಾಯ್ಸ್ ರೇಸ್ ಮಾಡಿದ್ರಿ. ನೀವು ಕ್ಯಾಪ್ಟನ್ ಆದಾಗ ನಾವು ಹೀಗೆ ಮಾಡ್ತೀವಿ. ಬರೀ ಮಾತು, ಬೇರೆ ಏನೂ ಮಾಡೋಕೆ ಆಗಲ್ಲ. ನೀವು ಏನು ಕಿತ್ತಾಕಿದ್ದೀರಾ ಅಂತ ಗೊತ್ತಿದೆ” ಎಂದು ರಘು ಹೇಳಿದ್ದಾರೆ.
ಅಶ್ವಿನಿ ಗೌಡ: ನೀವು ಏನು ಕಿತ್ತಾಕಿದ್ದೀರಾ? ಅಂತ ಗೊತ್ತಿದೆ?
ರಘು: ರಿಕ್ವೆಸ್ಟ್ ಹೇಗೆ ಮಾಡೋದು ಅಂತ ಗೊತ್ತಿದೆ. ವಾಯ್ಸ್ ರೇಸ್ ಮಾಡಿದ್ರೆ?
ಎಂಟು ವಾರದಲ್ಲಿ ಏನು ಮಾಡಿದ್ಯಾ?
ಅಶ್ವಿನಿ: ನಾನು ಮಾಡೋದಿಲ್ಲ ಹೋಗ್ರಿ
ರಘು: ಮಾಡಬೇಡ ಹೋಗು
ಅಶ್ವಿನಿ: ನೀನು ಏನು ಮಾಡಿದ್ಯಾ ಅಂತ ಗೊತ್ತಿದೆ.
ರಘು: ನೀನು ಇಲ್ಲಿ ಇದ್ದು ಎಂಟು ವಾರದಲ್ಲಿ ಏನು ಮಾಡಿದ್ಯಾ ಅಂತ ಗೊತ್ತಿದೆ? ನಾನು ಮೂರೇ ವಾರದಲ್ಲಿ ಫೋಟೋ ಬಂತು.
ಅಶ್ವಿನಿ: ಹೋಗು ಅಂತ ಏಕವಚನದಲ್ಲಿ ಮಾತನಾಡಿಸೋಕೆ ಯಾರು? ಹೋಗೋ ಲೇ. ನೀನು, ತಾನು ಅಂತ ಮನೆಯಲ್ಲಿಟ್ಟುಕೋ.
ಗಿಲ್ಲಿ ನಟ: ನನಗೂ ನೀನು, ತಾನು ಅಂತ ಮಾತನಾಡ್ತಾರೆ.
ಅಶ್ವಿನಿ ಅವರೇ ಅಂತ ಕರೀರಿ
ಅಶ್ವಿನಿ: ನಾನು ಮೊದಲಿನಿಂದಲೂ ನೀನು, ತಾನು ಅಂತ ಮಾತಾಡಬೇಡ ಎಂದು ಹೇಳಿದೆ. ಅಶ್ವಿನಿ ಅವರೇ ಅಂತಲೇ ಕರೆಯಬೇಕು. ಹೆಣ್ಣು ಮಕ್ಕಳಿಗೆ ನಿಂದನೆ ಮಾಡಬಾರದು. ಇವನ ಹತ್ರ ಅನಿಸಿಕೊಳ್ಳೋಕೆ ನನ್ನ ತಂದೆ-ತಾಯಿ ಹುಟ್ಟಿಸಿದ್ರಾ? ಅಶ್ವಿನಿ ಗೌಡ ಬುದ್ಧಿ ಕಲಿಸಿಲ್ಲ ಅಂದ್ರೆ ಯಾರೂ ಕಲಿಸೋಕೆ ಆಗಲ್ಲ. ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ನೀನು, ತಾನು ಅಂತ ಕರೆಯುತ್ತಾನೆ. ಇದು ನಿಲ್ಲಬೇಕು. ಮೊದಲು ವಾರ್ನಿಂಗ್ ಕೊಟ್ಟರೂ ಕೂಡ ಅವರು ತಿದ್ದುಕೊಂಡಿಲ್ಲ. ನನಗೆ ಐಡೆಂಟಿಟಿ ಇದೆ, ನನಗೆ ಗೌರವ ಕೊಡಬೇಕು. ಇಂಥ ವುಕ್ತಿ ಹೀಗೆ ಕರೆದಾಗ, ನನ್ನ ವ್ಯಕ್ತಿತ್ವಕ್ಕೆ ಚ್ಯುತಿ ಬರುತ್ತದೆ.
ಏನು ದಬ್ಬಾಕಿದ್ದೀಯಾ?
ರಘು: ನೀವು ಮರ್ಯಾದೆ ಕೊಡಿ, ಬೇರೆಯವರು ಮರ್ಯಾದೆ ಕೊಡುತ್ತಾರೆ, ಗಿಲ್ಲಿ ನಟನಿಗೆ ಹೇಗೆ ಮಾತಾಡ್ತೀರಾ ಅಂತ ಗೊತ್ತಿದೆ.
ರಘು ಅವರು ಏನು ಕಿತ್ತಾಕಿದ್ದೀಯಾ ಎಂದು ಕೇಳಿದ್ದು ಕೂಡ ಅಶ್ವಿನಿ ಗೌಡಗೆ ಸಿಟ್ಟು ಬಂದಿತ್ತು. ಸುದ್ದಿಗೋಷ್ಠಿ ಟಾಸ್ಕ್‌ವೊಂದರಲ್ಲಿ ಅಶ್ವಿನಿ ಗೌಡ ಅವರು, ಗಿಲ್ಲಿ ನಟನಿಗೆ “ಗಿಲ್ಲಿ ಇಷ್ಟುದಿನ ಏನು ದಬ್ಬಾಕಿದ್ದೀಯಾ?” ಎಂದು ಕೇಳಿದ್ದರು. ಈಗ ರಘು ಅವರು, “ಏನು ಕಿತ್ತಾಕಿದ್ದೀರಾ?” ಎಂದು ಕೇಳಿದ್ದಕ್ಕೆ ಅಶ್ವಿನಿಗೆ ಸಿಟ್ಟು ಬಂದಿತು. ಕಾಕ್ರೋಚ್ ಸುಧಿ ಅವರಯ, ಆ ಯಮ್ಮ ಎಂದು ಹೇಳಿದ್ದಕ್ಕೆ ಸಿಟ್ಟು ಬಂದಿತು. ಅದಾದ ಬಳಿಕ ಕಾಕ್ರೋಚ್ ಸುಧಿ ಬಗ್ಗೆ ಅಶ್ವಿನಿ ಅವರೇ ಜಾಹ್ನವಿ ಬಳಿ ಮಾತನಾಡುವಾಗ, “ಆ ಯಪ್ಪ” ಎಂದಿದ್ದರು. ಅಶ್ವಿನಿ ಗೌಡ ಅವರು ನಾಟಕ ಮಾಡುತ್ತಿದ್ದಾರೆ, ಅವರೇ ಮೊದಲು ಜಗಳ ಮಾಡ್ತಿದ್ದಾರೆ ಎಂದು ಮನೆಯವರು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

