- Home
- Entertainment
- TV Talk
- Bigg Boss ಮನೆಯಲ್ಲಿ ಹೇಳಿದಂತೆ ಮಾಡಿದ ರಕ್ಷಿತಾ ಶೆಟ್ಟಿ; ಉದ್ಘಾಟನೆಗೆ ಬಂದು ಕಿತ್ತಾಡಿಕೊಂಡ ಅಣ್ಣ-ತಂಗಿ
Bigg Boss ಮನೆಯಲ್ಲಿ ಹೇಳಿದಂತೆ ಮಾಡಿದ ರಕ್ಷಿತಾ ಶೆಟ್ಟಿ; ಉದ್ಘಾಟನೆಗೆ ಬಂದು ಕಿತ್ತಾಡಿಕೊಂಡ ಅಣ್ಣ-ತಂಗಿ
Bigg Boss Mutant Raghu Supports Rakshitha Shetty: ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಒಂದಿಷ್ಟು ಜಗಳ, ಬುದ್ಧಿವಂತಿಕೆ, ಮುಗ್ಧತೆ, ಅಡುಗೆ ಮಾಡಿ ಫೇಮಸ್ ಆಗಿದ್ದ ರಕ್ಷಿತಾ ಶೆಟ್ಟಿ, ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಇದಕ್ಕೆ ಸಹಸ್ಪರ್ಧಿ ಮ್ಯೂಟಂಟ್ ರಘು ಕೂಡ ಸಾಥ್ ನೀಡಿದ್ದಾರೆ. ಅದೇನು?

ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಆಸೆ ಇತ್ತು
ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಅವರು, ಕಾಡಿನಲ್ಲಿ ಒಂದು ಗುಡಿಸಲು ಕಟ್ಟಬೇಕು, ಅಲ್ಲಿ ನನ್ನ ಎಲ್ಲ ಕುಟುಂಬಸ್ಥರು, ಸ್ನೇಹಿತರ ಜೊತೆ ಸಮಯ ಕಳೆಯಬೇಕು, ಅಡುಗೆ ಮಾಡಬೇಕು ಎಂದು ಹೇಳಿದ್ದರು.
ಉದ್ಘಾಟನೆಗೆ ಬಂದ ರಘು
ಗುಡಿಸಲು ರೆಡಿ ಆಗಿದ್ದು, ಇದನ್ನು ಮ್ಯೂಟೆಂಟ್ ರಘು ಅವರು ಉದ್ಘಾಟನೆಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ರಘು, ರಕ್ಷಿತಾ ಅಣ್ಣ-ತಂಗಿಯ ಥರ ಇದ್ದರು, ಈ ಬಾಂಧವ್ಯ ಹೊರಗಡೆ ಬಂದಮೇಲೂ ಮುಂದುವರೆದಿದೆ.
ರಘು ಯುಟ್ಯೂಬ್ ಚಾನೆಲ್‌ಗೂ ಯಶಸ್ಸು
ಬಿಗ್ ಬಾಸ್ ಶೋ ಮುಗಿದ್ಮೇಲೆ ರಘು ಅವರ ಮನೆಗೆ ಹೋಗಿ ರಕ್ಷಿತಾ ಅಡುಗೆ ಮಾಡಿದ್ದುಂಟು. ಈ ವಿಡಿಯೋವನ್ನು ರಘು ಅವರು ಹೊಸದಾದ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದಾಗಿ ಒಂದು ದಿನಕ್ಕೆ ಮಾನಿಟೈಸೇಶನ್ ಆಗಿತ್ತು.
ರಕ್ಷಿತಾಗೆ ವಿಶ್ ಮಾಡಿದ ರಘು
ಆ ಬಳಿಕ ರಘು ಅವರ ಜಿಮ್‌ಗೂ ರಕ್ಷಿತಾ ಹೋಗಿದ್ದರು. ಈಗ ಪಟಾಕಿ ಕಿಚನ್ ಎಂಬ ಹೆಸರಿನ ಗುಡಿಸಲು ಕಟ್ಟಿದ್ದಾರೆ. ಕಾಡಿನ ಮಧ್ಯೆ ಈ ಒಂದು ವ್ಯವಸ್ಥೆ ಮಾಡಲಾಗಿದೆ. ಇನ್ಮುಂದೆ ಇಲ್ಲಿಯೇ ವಿಡಿಯೋ ಮಾಡಿ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರಂತೆ. ರಘು ಕೂಡ ರಕ್ಷಿತಾಗೆ ಮುಂದೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.
ಕೋಳಿ ಜಗಳ ಆಯ್ತು
ನಮ್ಮ ವ್ಯಕ್ತಿತ್ವಕ್ಕೆ ಹೊಂದಿಕೆ ಆಗುವಂತೆ ಹೆಸರು ಕೊಡಿ ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಪಟಾಕಿ ರಕ್ಷಿತಾ ಎಂದು ನನಗೆ ನಾನೇ ಕರೆದುಕೊಂಡೆ ಎಂದು ರಕ್ಷಿತಾ ಹೇಳಿದ್ದರು. ಆಮೇಲೆ ನಾನೇ ಹೆಸರು ಕೊಟ್ಟಿದ್ದು ಎಂದು ರಘು ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಕೋಳಿ ಜಗಳ ಆಗಿದೆ.
ಹೆಸರು ಸೂಚಿಸಿದ್ರು
ಪಟಾಕಿ ರಕ್ಷಿತಾ ಎಂದು ಬೋರ್ಡ್ ಹಾಕಿರೋದು ಚಿಕ್ಕದಾಗಿದೆ, ಇದು ಇನ್ನೂ ದೊಡ್ಡದಾಗಿ ಹಾಕು ಎಂದು ರಘು ಅವರು ಸೂಚನೆ ನೀಡಿದ್ದಾರೆ. ಇದನ್ನು ರಕ್ಷಿತಾ ಕೂಡ ಸ್ವೀಕರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

