- Home
- Entertainment
- TV Talk
- BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಊಟದ ವಿಚಾರಕ್ಕೆ ಸದಾ ಜಗಳ ಆಗುವುದು. ಈಗ ಗಿಲ್ಲಿ ನಟ ಎಷ್ಟೇ ಬೇಡಿಕೊಂಡರೂ ಕೂಡ ರಘು ಮಾತ್ರ ಕೊಡದೆ ತಿನ್ನದಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಗಿಲ್ಲಿ ನಟ, ರಘು ಮಧ್ಯೆ ಸ್ನೇಹ
ಗಿಲ್ಲಿ ನಟ ಹಾಗೂ ರಘು ಮಧ್ಯೆ ಸ್ನೇಹ ಇತ್ತು. ಈ ಹಿಂದೆ ಇವರಿಬ್ಬರು ಒಂದು ಶೋನಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ರಘು ಜೊತೆ ಗಿಲ್ಲಿ ಅಂಟಿಕೊಂಡು ಇರುತ್ತಿದ್ದರು. ಕೆಲ ವಾರಗಳಿಂದ ಇಬ್ಬರ ಮಧ್ಯೆ ಮನಸ್ತಾಪ ಶುರು ಆಗಿದೆ.
ಹೊಸ ಬಟ್ಟೆ ಹಾಕಿಕೊಳ್ಳಲ್ಲ
ಗಿಲ್ಲಿ ನಟ ಬೇರೆಯವರನ್ನು ಬಾಡಿ ಶೇಮಿಂಗ್ ಮಾಡಿ, ಕೆಳಗಡೆ ಹಾಕಿ ಕಾಮಿಡಿ ಮಾಡ್ತಾನೆ. ನನಗೆ ಇದು ಇಷ್ಟ ಆಗ್ತಿಲ್ಲ, ಸಾಕಷ್ಟು ಬಾರಿ ವಾರ್ನ್ ಮಾಡಿದ್ದೇನೆ. ಬಟ್ಟೆಯಿದ್ದರೂ ಕೂಡ ಹಾಕಿಕೊಳ್ಳೋದಿಲ್ಲ, ಬನಿಯನ್, ಚಡ್ಡಿಯಲ್ಲಿ ಇರುತ್ತಾನೆ ಎಂದು ರಘು ಆರೋಪ ಮಾಡಿದ್ದರು.
ಚಪಾತಿ ತಿನ್ನುತ್ತಿದ್ದ ರಘು
ರಘು ಅವರು ಚಪಾತಿ ತಿನ್ನುತ್ತಿದ್ದರು. ಆಗ ಗಿಲ್ಲಿ ನಟ ಬಂದು ನನಗೆ ಸ್ವಲ್ಪ ಕೊಡಿ ಎಂದು ಮನವಿ ಮಾಡುತ್ತಾರೆ. ಆದರೆ ರಘು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ತಿನ್ನುತ್ತಿದ್ದಾರೆ. ಓರ್ವ ವ್ಯಕ್ತಿ ಇಷ್ಟೆಲ್ಲ ಗೋಗರೆದರೂ ಕೂಡ ಕೊಟ್ಟಿಲ್ಲ ಎಂದು ಬೇಸರ ಹೊರಹಾಕುತ್ತಿದ್ದಾರೆ.
ಚಪಾತಿ ಕೊಡದ ಗಿಲ್ಲಿ ನಟ
ಚಪಾತಿಯನ್ನು ವಿಶೇಷವಾಗಿ ಮಾಡಲಾಗಿದೆ. ಒಂದು ತುತ್ತು ಕೊಡು ಎಂದರೂ ಕೂಡ ಗಿಲ್ಲಿ ನಟನಿಗೆ ಕೊಟ್ಟಿಲ್ಲ. ಆಮೇಲೆ ಗಿಲ್ಲಿ ಅವರು ರಕ್ಷಿತಾಗೆ, “ಎಷ್ಟೇ ಹೇಳಿದರೂ ಕೂಡ ರಘು ಅಣ್ಣ ಕೊಟ್ಟಿಲ್ಲ. ನನಗೂ ಆ ಥರದ್ದೇ ಮಾಡಿಕೊಡು” ಎಂದು ಹೇಳಿದ್ದರು. ಆದರೆ ಆಮೇಲೆ ರಾಶಿಕಾಗೆ ಚಪಾತಿ ಕೊಟ್ಟರು.
ವೀಕ್ಷಕರು ಹೇಳಿದ್ದೇನು?
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ವೀಕ್ಷಕರು ಕಾಮೆಂಟ್ ಮಾಡಿ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
- ಕೊಡದೆ ಇದ್ದದ್ದು ತಪ್ಪಲ್ಲ, ಅವನಿಗೆ ಕೊಡಲ್ಲ ಅಂದು ಬೇರೆಯವರಿಗೆ ಕೊಟ್ಟಿದ್ದು ತಪ್ಪು
- ಮಾನವೀಯತೆ ದೃಷ್ಟಿಯಿಂದನಾದ್ರೂ ಈ ಟಾಪಿಕ್ ಶನಿವಾರ ಡಿಸ್ಕಸ್ ಆಗಬೇಕು
- ಇಲ್ಲಿ ಗಿಲ್ಲಿಯನ್ನು ಬಿಟ್ರೆ ಯಾರ್ ವ್ಯಕ್ತಿತ್ವವು ಸರಿಯಿಲ್ಲ
- ಹೊಟ್ಟೆಕಿಚ್ಚಿಗೆ ಎಂಥ ಸ್ನೇಹ ಆದ್ರೂ ಮುರಿಯೋ ಶಕ್ತಿ ಇದೆ.
- ಈ ಥರ ಸಣ್ಣಬುದ್ಧಿ ಬೇಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

