- Home
- Entertainment
- TV Talk
- BBK 12: ಕಾವ್ಯ ಶೈವಗೆ ಸಮಸ್ಯೆಯಾಗ್ತಿದೆ ಎಂದು ಗೊತ್ತಿದ್ರೂ ಕೂಡ, ಮನೆಯವ್ರು ವಿರೋಧಿಸಿದ್ದು ಯಾಕೆ?
BBK 12: ಕಾವ್ಯ ಶೈವಗೆ ಸಮಸ್ಯೆಯಾಗ್ತಿದೆ ಎಂದು ಗೊತ್ತಿದ್ರೂ ಕೂಡ, ಮನೆಯವ್ರು ವಿರೋಧಿಸಿದ್ದು ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ಅವರ ಸ್ನೇಹವೇ ಹೈಲೈಟ್ ಆಗಿದೆ. ಈ ಮಧ್ಯೆ ಕಾವು ಕಾವು ಎಂದು ಗಿಲ್ಲಿ ಕರೆಯೋದು, ಕಾವ್ಯ ತನ್ನ ಹುಡುಗಿ ಎನ್ನುವಂತೆ ಮಾತನಾಡೋದು, ವರ್ತಿಸೋದು ಕಾವ್ಯಗೆ ಇರಿಟೇಟ್ ಆಗಿತ್ತು. ಇದನ್ನು ಅವರು ವಿರೋಧಿಸಿದರೆ, ಮನೆಯವರು ಬೆಂಬಲ ಕೊಟ್ಟರು.

ಇದೆಲ್ಲವೂ ತಮಾಷೆ
ಬಿಗ್ ಬಾಸ್ ಮನೆಯಲ್ಲಿ ಕಾವ್ಯಳನ್ನು ನಾನು ಮಾತ್ರ ನಗಿಸಬಹುದು, ಅವಳು ನನ್ನ ಜೊತೆ ಮಾತ್ರ ಡ್ಯಾನ್ಸ್ ಮಾಡಬೇಕು ಎಂದು ಹೇಳೋದು, ವೀಕೆಂಡ್ ಎಪಿಸೋಡ್‌ನಲ್ಲಿ ಕೂಡ ಕಿಚ್ಚ ಸುದೀಪ್ ಮುಂದೆ ಪ್ರೇಮ ನಿವೇದನೆ ಮಾಡೋದು ಮಾಡುತ್ತಿದ್ದರು. ಇದೆಲ್ಲವೂ ತಮಾಷೆ ಎನ್ನೋದು ಎಲ್ಲರಿಗೂ ಗೊತ್ತಿದೆ.
ಕಾವ್ಯ ಭಾವನೆಗೆ ಮಾತ್ರ ಬೆಲೆ
ಕಾವ್ಯ ಶೈವ ಜೊತೆ ಗಿಲ್ಲಿ ನಟ ಅವರು ಕಾಮಿಡಿ ಮಾಡೋದು, ರೇಗಿಸೋದು, ಯಾವಾಗಲೂ ಅವರ ಪರವಾಗಿ ಇರೋದು, ಕಾವ್ಯ ಭಾವನೆಗಳಿಗೆ ಮಾತ್ರ ಬೆಲೆ ಕೊಡ್ತಾರೆ ಎನ್ನೋದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಬಿಗ್ ಬಾಸ್ ಟಾಸ್ಕ್ ಕೊಟ್ಟಾಗ ಅಥವಾ ನಾಮಿನೇಶನ್ ಇದ್ದಾಗ ಅನೇಕ ಸ್ಪರ್ಧಿಗಳು ಈ ಬಗ್ಗೆ ಮಾತನಾಡಿದ್ದುಂಟು.
ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದರು.
ಗಿಲ್ಲಿ ನಟ ಈ ರೀತಿ ಮಾಡುತ್ತಿರೋದು ಹೊರಗಡೆ ಬೇರೊಂದು ಹೆಸರು ಕೊಡುತ್ತದೆ ಅಥವಾ ಜನರು ತಪ್ಪಾಗಿ ತಿಳಿದುಕೊಳ್ಳಬಹುದು ಅಥವಾ ತನ್ನ ಆಟವನ್ನು ಗುರುತಿಸದೆ ಇರಬಹುದು ಎಂಬ ಕಾರಣಕ್ಕೆ ಕಾವ್ಯ ಶೈವ ಅವರು ಇದನ್ನು ತಡೆಯುವ ಯತ್ನ ಮಾಡಿದ್ದರು. ಇದೇ ಕಾರಣ ನೀಡಿ ಗಿಲ್ಲಿಯನ್ನು ನಾಮಿನೇಟ್ ಕೂಡ ಮಾಡಿದ್ದರು.
ಅಣ್ಣಾ ಎಂದು ಕರೆದಿದ್ದ ಕಾವ್ಯ
ಗಿಲ್ಲಿ ನಟನನ್ನು ಕಾವ್ಯ ಅವರು ಅಣ್ಣಾ ಎಂದು ಕರೆದಿದ್ದರು. ಅಷ್ಟೇ ಅಲ್ಲದೆ ರಾಖಿ ಕಟ್ಟಲು ಮುಂದಾಗಿದ್ದರು. ಸುದೀಪ್ ಅವರು ಗಿಲ್ಲಿ ಬಳಿ ನಿಮ್ಮ ತಂಗಿ ಕಾವ್ಯಾ ಎಂದಾಗಲೂ ಅವರು ಕೇಳಿಸಲಿಲ್ಲ ಎಂದು ಹೇಳಿದ್ದರು.
ಅಣ್ಣಾ ಅಂತ ಕರಿಬೇಡ
ಈಗ ಕಾವ್ಯ ಶೈವ ಫ್ಯಾಮಿಲಿ ಬಿಗ್ ಬಾಸ್ ಮನೆಗೆ ಬಂದಿದ್ದು, ಮಗಳ ಆಟದ ಬಗ್ಗೆ ಚರ್ಚೆ ಮಾಡಿದ್ದರು. “ಗಿಲ್ಲಿ ನಟನ ಜೊತೆಗಿನ ಸ್ನೇಹ ಚೆನ್ನಾಗಿದೆ, ಗಿಲ್ಲಿಯನ್ನು ನಾಮಿನೇಟ್ ಮಾಡಬಾರದಿತ್ತು. ಗಿಲ್ಲಿ ನಟನಿಗೆ ಮೊಟ್ಟೆ, ಹಣ್ಣು ಕೊಡು, ಗಿಲ್ಲಿ ನಟನನ್ನು ಅಣ್ಣಾ ಅಂತ ಕರೆಯಬೇಡ” ಎಂದೆಲ್ಲ ಹೇಳಿದ್ದರು. ಇದು ಯಾವ ಥರಹದ ಲೆಕ್ಕಾಚಾರ? ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ, ಚರ್ಚೆ ಆಗ್ತಿದೆ.
ಗಿಲ್ಲಿ ನಟನಿಗೆ ಕಾವ್ಯ ಕುಟುಂಬದವರು ಬೆಳ್ಳಿಯ ಬ್ರಾಸ್‌ಲೈಟ್ ಗಿಫ್ಟ್ ಆಗಿ ಕೊಟ್ಟಿದ್ದು ಕೂಡ ಚರ್ಚೆಯಾಗಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

