- Home
- Entertainment
- TV Talk
- BBK 12 ಫಿನಾಲೆ ಮೊದಲ ಟಿಕೆಟ್ ಪಡೆದವರಾರು? ಟವರ್‌ನಿಂದ ಬಿದ್ದ ಸ್ಪರ್ಧಿ, ಬೆಚ್ಚಿಬಿದ್ದ ಗಿಲ್ಲಿ ನಟ
BBK 12 ಫಿನಾಲೆ ಮೊದಲ ಟಿಕೆಟ್ ಪಡೆದವರಾರು? ಟವರ್‌ನಿಂದ ಬಿದ್ದ ಸ್ಪರ್ಧಿ, ಬೆಚ್ಚಿಬಿದ್ದ ಗಿಲ್ಲಿ ನಟ
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಟಿಕೆಟ್ ಟು ಫಿನಾಲೆ ಟಾಸ್ಕ್ ಆರಂಭವಾಗಿದೆ. ಟಾಪ್ 6 ಸ್ಪರ್ಧಿಗಳು ಫಿನಾಲೆಗೆ ಬರುತ್ತಾರೆ. ಅವರಲ್ಲಿ ಯಾರಿಗೆ ಮೊದಲ ಟಿಕೆಟ್ ಸಿಗಲಿದೆ ಎಂದು ಕಾದು ನೋಡಬೇಕಿದೆ. ಹಾಗಾದರೆ ಯಾರದು?

ಟವರ್ ಹತ್ತಬೇಕು
ಒಂದಿಷ್ಟು ಕಬ್ಬಿಣದ ಎಳೆಗಳನ್ನು ಬಳಸಿ ಟವರ್ ಹತ್ತಬೇಕು, ಕೋಲು ಇಡುತ್ತ, ಟವರ್ ಕಟ್ಟುವಲ್ಲಿ ಯಾರು ಯಶಸ್ವಿಯಾಗುವರೋ ಅವರು ಫಿನಾಲೆಗೆ ಮೊದಲ ಟಿಕೆಟ್ ಪಡೆಯುತ್ತಾರೆ.
ಆಟ ಹೇಗಿದೆ?
ಧನುಷ್ ಗೌಡ, ಧ್ರುವಂತ್, ಅಶ್ವಿನಿ ಗೌಡ, ಕಾವ್ಯ ಶೈವ ಅವರು ಟವರ್ ಕಟ್ಟಲು ಮುಂದಾಗಿದ್ದಾರೆ, ಉಳಿದವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಅಲ್ಲಿದ್ದ ಕೋಲುಗಳನ್ನು ತಂದು ಕೊಡಬೇಕು. ಕೋ ಆರ್ಡಿಶನ್‌ನಲ್ಲಿ ಇವರು ಆಟ ಆಡಬೇಕು.
ಯಾರಾದರೂ ಬಿದ್ದರಾ?
ಆಟದ ವೇಳೆ ಅಶ್ವಿನಿ ಗೌಡ ಅವರು ಬೀಳುವ ಹಾಗೆ ಆಯ್ತು. ಅದನ್ನು ನೋಡಿ ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಕೂಡ ಶಾಕ್ ಆಗಿದ್ದಾರೆ. ಅವರು ಬೀಳೋ ಹಾಗೆ ಆಯ್ತು. ಅಶ್ವಿನಿ ಗೌಡ ಅವರು ಬಿದ್ದರಾ? ಗಾಯ ಆಯ್ತಾ ಎಂದು ಕಾದು ನೋಡಬೇಕಿದೆ.
ಗಿಲ್ಲಿಗೆ ಶಾಕ್
ಆಟ ಆಡುವಾಗ ಧನುಷ್ ಗೌಡ, ಅಶ್ವಿನಿ ಗೌಡ ಬಿದ್ದಿದ್ದಾರೆ. ಇದನ್ನು ನೋಡಿ ಧ್ರುವಂತ್, ಗಿಲ್ಲಿ ನಟ, ರಾಶಿಕಾ ಶಾಕ್ ಆಗಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಹೆದರಿದ್ದಾರೆ. ಇದು ಪ್ರೋಮೋ ಆಗಿದ್ದು, ಯಾರು ವಿನ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಟಿಕೆಟ್ ಯಾರಿಗೆ?
ಈ ಆಟದಲ್ಲಿ ಯಾರು ವಿನ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. ವಿನ್ ಆದವರು ಗ್ರ್ಯಾಂಡ್ ಫಿನಾಲೆಯಲ್ಲಿ ಟಾಪ್ 6 ಆಗುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

