- Home
- Entertainment
- TV Talk
- Bigg Boss Kannada: ಮೊದಲು ನನ್ನ ಹನಿಮೂನ್ ಆಗಲಿ, ಆಮೇಲೆ ಹೆಂಡ್ತಿ ತಂದೆ ಜೊತೆ ಮಾತಾಡು; ಗಿಲ್ಲಿ ನಟ ಒಪನ್ ಟಾಕ್
Bigg Boss Kannada: ಮೊದಲು ನನ್ನ ಹನಿಮೂನ್ ಆಗಲಿ, ಆಮೇಲೆ ಹೆಂಡ್ತಿ ತಂದೆ ಜೊತೆ ಮಾತಾಡು; ಗಿಲ್ಲಿ ನಟ ಒಪನ್ ಟಾಕ್
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರ ಲವ್, ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಈಗ ಗಿಲ್ಲಿ ನಟನಿಗೆ ಹೆಣ್ಣು ಕೊಡೋ ಮಾವನ ಜೊತೆ ರಘು ಅವರು ಮಾತನಾಡೋಕೆ ರೆಡಿ ಆಗಿದ್ದಾರೆ. ಈ ಬಗ್ಗೆ ಮಾತುಕತೆ ಆಗಿದೆ.

ಆರಂಭದಲ್ಲಿ ಅಷ್ಟು ಬಟ್ಟೆ ಇರಲಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನಿಗೆ ಆರಂಭದಲ್ಲಿ ಅಷ್ಟು ಬಟ್ಟೆ ಇರಲಿಲ್ಲ ಎನ್ನಲಾಗಿತ್ತು. ಆಮೇಲೆ ಗಿಲ್ಲಿ ಆಟವನ್ನು ಮೆಚ್ಚಿ ಯಾರು ಯಾರೋ ಬಕೆಟ್‌ಗಟ್ಟಲೇ ಬಟ್ಟೆ ಕಳಿಸಿದ್ದರು. ಆದರೂ ಕೂಡ ಅವರು ಯಾವಾಗಲೂ ಒಂದು ಟ್ರ್ಯಾಕ್ ಪ್ಯಾಂಟ್, ಬನಿಯನ್‌ನಲ್ಲಿ ಇರೋಕೆ ಬಯಸುತ್ತಿದ್ದರು. ಇದನ್ನು ರಘು, ಮಂಜು ಅವರು ವಿರೋಧ ಮಾಡಿದ್ದರು.
ಗಿಲ್ಲಿ ನಟನ ನಾಟಕ
ಗಿಲ್ಲಿ ನಟ ಬಡವ, ಅಮಾಯಕ ಅಂತ ಸಾಬೀತುಮಾಡೋಕೆ ಪ್ರಯತ್ನ ಮಾಡುತ್ತಿದ್ದಾನೆ. ಅವನದು ನಾಟಕ ಎಂದು ರಘು, ಮಂಜು ಹೇಳಿದ್ದರು. ಯಾರು ಎಷ್ಟೇ ಹೇಳಿದರೂ ಕೂಡ ಗಿಲ್ಲಿ ನಟ ಮಾತ್ರ ಹೊಸ ಬಟ್ಟೆ ಹಾಕುತ್ತಿರಲಿಲ್ಲ. ಆಮೇಲೆ ಬೇಸರ ಮಾಡಿಕೊಂಡ ರಘು ಅವರು, “ನೀನು ಏನಾದರೂ ಮಾಡಿಕೋ, ನಾನು ನಿನ್ನ ಬಟ್ಟೆ ಬಗ್ಗೆ ಮಾತನಾಡೋದಿಲ್ಲ” ಎಂದು ಹೇಳಿದ್ದರು.
ಚೆನ್ನಾಗಿ ಡ್ರೆಸ್ ಹಾಕಿಕೋ
ಈಗ ಅಡುಗೆ ಮನೆಯಲ್ಲಿ ಮತ್ತೆ ಈ ಬಗ್ಗೆ ಸಂಭಾಷಣೆ ನಡೆದಿದೆ. ಗಿಲ್ಲಿ ನಟಗೆ ರಘು ಅವರು “ಇವತ್ತಾದರೂ ಚೆನ್ನಾಗಿ ಡ್ರೆಸ್ ಹಾಕಿಕೋ, ರೆಡಿಯಾಗು” ಎಂದು ಹೇಳಿದ್ದರು. ಮತ್ತೆ ಗಿಲ್ಲಿ ಅವರು ರಘು ಮಾತಿಗೆ ಬೆಲೆ ಕೊಡದೆ, ತಮಾಷೆಯಾಗಿ ಕೌಂಟರ್ ಕೊಟ್ಟಿದ್ದಾರೆ.
ಸಂಭಾಷಣೆ ಏನು?
ರಘು ಕ್ಯಾಪ್ಟನ್ಸಿ ಟಾಸ್ಕ್ ಇದೆ, ಇವತ್ತಾದರೂ ಚೆನ್ನಾಗಿ ಆಟ ಆಡು
ಗಿಲ್ಲಿ ನಟ: ಯಾರಾದರೂ ಹೆಣ್ಣು ಕೊಡೋಕೆ ಬರ್ತಿದ್ದಾರಾ?
ರಘು: ನಿನಗೆ ಹೆಣ್ಣು ಕೊಡೋ ಮಾವನ ಹತ್ರ ಮಾತನಾಡಬೇಕು
ಗಿಲ್ಲಿ ನಟ: ನೀನು ಯಾಕೆ ಮಾತನಾಡಬೇಕು? ನಾನು ಮಾತನಾಡಬೇಕು
ರಘು: ಫ್ರೆಂಡ್ಸ್‌ನಲ್ಲೆಲ್ಲ ಕೇಳ್ತಾರೆ ಗಿಲ್ಲಿ ಹೇಗೆ ಅಂತ, ಆಗ ನಾನು ಹೆಣ್ಣು ಕೊಡೋ ಮಾವನ ಬಗ್ಗೆ ಮಾತನಾಡಬೇಕು. ನೀನು ಎಲ್ಲವನ್ನು ಬೇರೆಯವರ ತಲೆಗೆ ತುಂಬುತ್ತೀಯಾ, ನಾವು ಕೂಡ ಮಾತನಾಡಬೇಕು.
ಹನಿಮೂನ್ ಮುಗಿಸ್ಕೋತಿನಿ
ಗಿಲ್ಲಿ: ನಿನ್ನನ್ನು ಯಾರು ಮದುವೆಗೆ ಕರೆಯುತ್ತಾರೆ? ಹುಡುಗಿಯನ್ನು ಇಷ್ಟಪಟ್ಟದಿನವೇ ನಾನು ಮಾದಪ್ಪನ ಬೆಟ್ಟದಲ್ಲಿ ಮದುವೆ ಆಗ್ತೀನಿ.
ರಘು: ಗಿಲ್ಲಿಗೆ ಹೆಣ್ಣು ಕೊಟ್ಟರಾ? ಈ ವಿಷಯ ಹೇಳಬೇಕು, ಇಲ್ಲ ಅಂದ್ರೆ ಆ ಹುಡುಗಿ ಜೀವನ ಹಾಳಾಗುತ್ತದೆ ಎಂದು ನಾನು, ಸ್ಪಂದನಾ ಮಾತನಾಡಿಕೊಳ್ತೀವಿ
ಗಿಲ್ಲಿ ನಟ: ನಾನು ಹನಿಮೂನ್ ಮುಗಿಸ್ಕೊಂಡು ಬಂದಮೇಲೆ ಮಾತನಾಡು, ಮೂರು ದಿನ ಟೈಮ್ ಕೊಡು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

