Bharti Singh Welcome Second Baby Boy: ಕಪಿಲ್ ಶರ್ಮಾ ಶೋ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋ, ಅವಾರ್ಡ್ ಫಂಕ್ಷನ್‌ಗಳಿಗೆ ನಿರೂಪಣೆ ಮಾಡಿದ್ದ ನಟಿ, ನಿರೂಪಕಿ ಭಾರತಿ ಸಿಂಗ್ ಅವರು ಎರಡನೇ ಬಾರಿಗೆ ತಾಯಿಯಾಗಿದ್ದಾರೆ. ಇವರ ಮನೆಯಲ್ಲಿ ಖುಷಿ ಮನೆ ಮಾಡಿದೆ.
ಖ್ಯಾತ ಹಾಸ್ಯನಟಿ, ನಿರೂಪಕಿ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಡಿಸೆಂಬರ್ 19 ರಂದು 'ಲಾಫ್ಟರ್ ಶೆಫ್' ಸೆಟ್‌ನಲ್ಲಿ ಆರೋಗ್ಯ ಹದಗೆಟ್ಟ ನಂತರ ಭಾರತಿ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿ ಇನ್ನೂ ಈ ಬಗ್ಗೆ ಅಧಿಕೃತವಾಗಿ ಖಚಿತಪಡಿಸಿಲ್ಲ.
ಹಿಂದಿ ಕಿರುತೆರೆಯ ಖ್ಯಾತ ಜೋಡಿ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ಮನೆಯಲ್ಲಿ ಮತ್ತೆ ಸಂತಸ ಮನೆಮಾಡಿದೆ. ಈ ಜೋಡಿ ಎರಡನೇ ಬಾರಿಗೆ ಪಾಲಕರಾಗಿದ್ದಾರೆ. ಡಿಸೆಂಬರ್ 19 ರಂದು ಭಾರತಿ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ತುಂಬಾ ಖುಷಿಯಾಗಿದ್ದು, ದಂಪತಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಆದರೆ, ಈ ಬಗ್ಗೆ ದಂಪತಿ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
'ಲಾಫ್ಟರ್ ಶೆಫ್' ಸೆಟ್‌ನಲ್ಲಿ ಭಾರತಿ ಆರೋಗ್ಯದಲ್ಲಿ ಏರುಪೇರು
ಇಂಡಿಯಾ ಟುಡೇ ಪ್ರಕಾರ, ಭಾರತಿ ಸಿಂಗ್ ಡಿಸೆಂಬರ್ 19 ರಂದು ಬೆಳಿಗ್ಗೆ 'ಲಾಫ್ಟರ್ ಶೆಫ್' ಶೂಟಿಂಗ್‌ನಲ್ಲಿದ್ದರು. ಈ ಸಮಯದಲ್ಲಿ ಅವರ ವಾಟರ್ ಬ್ಯಾಗ್ ಒಡೆದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಭಾರತಿ ತಮ್ಮ ಮಗನಿಗೆ ಜನ್ಮ ನೀಡಿದರು. ಹೆರಿಗೆಯ ಸಮಯದಲ್ಲಿ ಅವರ ಪತಿ ಹರ್ಷ್ ಲಿಂಬಾಚಿಯಾ ಭಾರತಿ ಸಿಂಗ್‌ರ ಜೊತೆಗಿದ್ದರು. ಈ ಜೋಡಿ ಇದೇ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಪ್ರಗ್ನೆನ್ಸಿ ಬಗ್ಗೆ ಘೋಷಿಸಿದ್ದರು. ಭಾರತಿ ತಮ್ಮ ಸಂಪೂರ್ಣ ಗರ್ಭಾವಸ್ಥೆಯಲ್ಲಿಯೂ ಕೆಲಸ ಮಾಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಗ ಕೂಡ ಅವರು ಸಂಪೂರ್ಣವಾಗಿ ಕೆಲಸ ಮಾಡಿದ್ದರು. ಈಗ ಅವರು 'ಲಾಫ್ಟರ್ ಶೆಫ್ ಸೀಸನ್ 3' ಎಂಬ ಅಡುಗೆ ಕಾಮಿಡಿ ಶೋನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಶೂಟಿಂಗ್ ವೇಳೆ ಒಮ್ಮೆ ಭಾರತಿ ತಮಗೆ ಅವಳಿ ಮಕ್ಕಳು ಬೇಕು ಎಂದು ಹೇಳಿದ್ದರು. ಆದರೆ, ಹಾಗಾಗಲಿಲ್ಲ.
ಭಾರತಿ ಹಾಗೂ ಹರ್ಷ್ ಅವರು ಹೆಣ್ಣು ಮಗು ಬೇಕು ಎಂದು ಬಯಸಿದ್ದರು, ಅಂದಹಾಗೆ ಕಳೆದ ಏಪ್ರಿಲ್‌ನಲ್ಲಿ Laughter Chefs 2 ಶೋನಲ್ಲಿ ಜ್ಯೋತಿಷಿ ಸಂಜೀವ್ ಠಾಕೂರ್, ಸಾಕ್ಷಿ ಠಾಕೂರ್ ಅವರು ಭಾರತಿಗೆ ಎರಡನೇ ಮಗು ಆಗಲಿದೆ ಎಂದು ಹೇಳಿದ್ದರು. ಅದರಂತೆ ಮಗು ಆಗಿದೆ. ಈ ಬಾರಿಗೂ ಗಂಡಾದರೆ, ನಾವು ಪ್ರಯತ್ನ ಬಿಡೋದಿಲ್ಲ, ಮೂರನೇ ಮಗು ಪ್ಲ್ಯಾನ್ ಮಾಡೋದಾಗಿ ತಮಾಷೆಯಾಗಿ ಹೇಳಿತ್ತು.
ಭಾರತಿ-ಹರ್ಷ್ ಮೊದಲ ಭೇಟಿ ಹೇಗಿತ್ತು?
ಭಾರತಿ ಸಿಂಗ್ ಭಾರತೀಯ ಕಿರುತೆರೆಯಲ್ಲಿ ತಮ್ಮ ಕಾಮಿಕ್ ಟೈಮಿಂಗ್‌ಗೆ ಹೆಸರುವಾಸಿ. ಹರ್ಷ್ ಲಿಂಬಾಚಿಯಾ ತಮ್ಮ ವೃತ್ತಿಜೀವನವನ್ನು ಬರಹಗಾರರಾಗಿ ಪ್ರಾರಂಭಿಸಿದರು. ನಂತರ ಅವರು ನಿರೂಪಕ ಮತ್ತು ವಿಡಿಯೋ ಕ್ರಿಯೇಟರ್ ಆದರು. ಇಬ್ಬರೂ 2009 ರಲ್ಲಿ 'ಕಾಮಿಡಿ ಸರ್ಕಸ್' ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದರು. ದೀರ್ಘಕಾಲದ ಡೇಟಿಂಗ್ ನಂತರ 2017 ರಲ್ಲಿ ಗೋವಾದಲ್ಲಿ ಮದುವೆಯಾದರು. ನಂತರ 2022 ರಲ್ಲಿ, ದಂಪತಿ ತಮ್ಮ ಮೊದಲ ಮಗ ಲಕ್ಷ್ ಸಿಂಗ್ ಲಿಂಬಾಚಿಯಾ ಅವರನ್ನು ಬರಮಾಡಿಕೊಂಡರು. ಯುಟ್ಯೂಬರ್ ಆಗಿರುವ ಈ ಜೋಡಿ vlogs ಮೂಲಕ ಲೈಫ್‌ಸ್ಟೈಲ್ ಬಗ್ಗೆ ವಿಡಿಯೋ ಮಾಡಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಭಾರತಿ ಮತ್ತು ಹರ್ಷ್ ಒಟ್ಟಿಗೆ ಪಾಡ್‌ಕಾಸ್ಟ್ ಕೂಡ ಹೋಸ್ಟ್ ಮಾಡುತ್ತಾರೆ. ಇದಲ್ಲದೆ, ಭಾರತಿ ಮತ್ತು ಹರ್ಷ್ 'ಹುನರ್‌ಬಾಜ್: ದೇಶ್ ಕಿ ಶಾನ್', 'ಖತ್ರಾ ಖತ್ರಾ ಖತ್ರಾ', 'ಹಮ್ ತುಮ್ ಔರ್ ದೆಮ್' ಮತ್ತು 'ಲಾಫ್ಟರ್ ಶೆಫ್ಸ್' ನಂತಹ ಶೋಗಳಲ್ಲಿ ಕೆಲಸ ಮಾಡಿ ಹೆಸರು ಮಾಡಿದ್ದಾರೆ.


