- Home
- Entertainment
- TV Talk
- BBK 12: ಕೆರಳಿ ಕೆಂಡವಾದ ಗಿಲ್ಲಿ ನಟ; ಇದು ಎಂದೂ ನೋಡಿರದ ಅವತಾರ; ಕಿಚ್ಚ ಸುದೀಪ್ ಬಳಿ ಕ್ಲಾಸ್ ಇರುತ್ತಾ?
BBK 12: ಕೆರಳಿ ಕೆಂಡವಾದ ಗಿಲ್ಲಿ ನಟ; ಇದು ಎಂದೂ ನೋಡಿರದ ಅವತಾರ; ಕಿಚ್ಚ ಸುದೀಪ್ ಬಳಿ ಕ್ಲಾಸ್ ಇರುತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ, ಗಿಲ್ಲಿ ನಟ, ಸರಿಯಾದ ನಿರ್ಧಾರಗಳನ್ನು ತಗೊಳೋದಿಲ್ಲ, ಪರ್ಸನಲ್ ಆಗಿ ಹೋಗಿ ಮಾತಾಡ್ತಾರೆ, ಕಾವ್ಯ ಪರ ಫೇವರಿಸಂ ಮಾಡ್ತಾರೆ ಎಂಬ ಆರೋಪ ಇದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಗಿಲ್ಲಿ ನಟನ ಆಟದ ಬಗ್ಗೆ ಚರ್ಚೆ ಆಗುತ್ತಿದೆ.

ಯಾರು ಉತ್ತಮ? ಯಾರು ಕಳಪೆ?
ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿದ್ದು, ಅದರಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ ಅವರು ಜಗಳ ಆಡಿಕೊಂಡಿದ್ದಾರೆ. ಬಹುಶಃ ಯಾರು ಉತ್ತಮ? ಯಾರು ಕಳಪೆ ಎಂಬ ಟಾಸ್ಕ್ ಇರಬೇಕು. ಆಗ ಬಹುಶಃ ಗಿಲ್ಲಿ ನಟ ಅವರು ಅಶ್ವಿನಿ ಗೌಡಗೆ ಕಳಪೆ ಕೊಡುವಾಗ ನೀಡಿದ ಕಾರಣಗಳು ಅಶ್ವಿನಿ ಅವರನ್ನು ಕೆರಳಿಸಿವೆ ಎಂದು ಕಾಣುತ್ತದೆ.
ಸಂಭಾಷಣೆ ಏನು?
ಗಿಲ್ಲಿ ನಟ: ಅವರು ಹೀರೋ ಆಗೋಕೆ ಹೊರಟು, ನನ್ನ ವಿಲನ್ ಮಾಡಿದರು
ಅಶ್ವಿನಿ ಗೌಡ: ನಾನು ಹೀರೋ ಆಗೋಕೆ ಹೊರಟಿಲ್ಲ, ನೀನು ಜೋಕರ್ ಆಗಬೇಡ
ಗಿಲ್ಲಿ ನಟ: ನಾನು ಕಾಮಿಡಿಯನ್
ಅಶ್ವಿನಿ ಗೌಡ: ತಿಂದುಕೊಂಡು, ಉಂಡುಕೊಂಡು ಇರೋಕೆ ಬಿಗ್ ಬಾಸ್ ಮನೆಗೆ ಯಾಕೆ ಬರಬೇಕಿತ್ತು?
ಯೋಗ್ಯತೆ ವಿಚಾರ ಚರ್ಚೆಯಾಯ್ತು
ಗಿಲ್ಲಿ ನಟ: ತಿಂದುಕೊಂಡು, ಉಂಡುಕೊಂಡು ಇರೋಕೆ ನಾನು ಬಂದಿದೀನಿ. ಕ್ಯಾಪ್ಟನ್ ಆಗೋ ತಾಕತ್ತು ಇಲ್ಲ. ಒಂದು ಟಾಸ್ಕ್ ಗೆಲ್ಲೋಕೆ ಆಗಲಿಲ್ಲ
ಅಶ್ವಿನಿ ಗೌಡ: ನಾನು ಸಾಬೀತು ಮಾಡ್ತೀನಿ
ಗಿಲ್ಲಿ ನಟ: ಮೈಕ್ ಹಾಕಿಕೊಳ್ಳೋ ಯೋಗ್ಯತೆ ಇಲ್ಲ, ಮೂರು ಹೊತ್ತು ನಿದ್ದೆ ಮಾಡಿಕೊಂಡು ಇರ್ತಾರೆ
ಅಶ್ವಿನಿ ಗೌಡ: ಯೋಗ್ಯತೆ ಬಗ್ಗೆ ಮಾತಾಡಬೇಡ
ಈ ಜಗಳ ಮುಗಿಯೋದಿಲ್ಲ
ಒಟ್ಟಿನಲ್ಲಿ ಈ ಸೀಸನ್ ಮುಗಿದರೂ ಕೂಡ, ಅಶ್ವಿನಿ ಗೌಡ-ಗಿಲ್ಲಿ ನಟನ ಜಗಳ ಮುಗಿಯೋದಿಲ್ಲ ಎಂದು ಕಾಣುತ್ತದೆ. ಆರಂಭದಿಂದ ಇಲ್ಲಿಯವರೆಗೆ ಇವರಿಬ್ಬರೂ ಕಿತ್ತಾಡಿಕೊಂಡಲೇ ಬರುತ್ತಿದ್ದಾರೆ. ಈ ಜಗಳದ ಮಧ್ಯೆ ಬಳಸಿದ ಪದಗಳಿಂದಾಗಿ ಕಿಚ್ಚ ಸುದೀಪ್ ಕೂಡ ಕಿವಿ ಹಿಂಡಿದ್ದರು.
ಯಾರು ಟ್ರೋಫಿ ಗೆಲ್ತಾರೆ?
ಅಶ್ವಿನಿ ಗೌಡ ಅವರಿಗೆ ಯಾರೂ ಕೂಡ ಏಕವಚನದಲ್ಲಿ ಮಾತನಾಡೋದು ಇಷ್ಟ ಆಗೋದಿಲ್ಲ. ಗಿಲ್ಲಿ ನಟ ಅವರು ಪದೇ ಪದೇ ಏಕವಚನದಲ್ಲಿ ಮಾತನಾಡುತ್ತಾರೆ. ಇದು ಇನ್ನಷ್ಟು ಜಗಳ ಆಗೋದಿಕ್ಕೆ ಕಾರಣ ಆಗುವುದು. ಹಾಗಾದರೆ ಈ ಬಾರಿ ಯಾರು ಟ್ರೋಫಿ ಗೆಲ್ತಾರೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

