BBK 12: ಧ್ರುವಂತ್‌ಗೆ ಮಾತೇ ಮುಳ್ಳಾಯ್ತು; ತಿರುಗಿಬಿದ್ದ ರಾಶಿಕಾ ಶೆಟ್ಟಿ, ಕಾವ್ಯ ಶೈವ
Bigg Boss Kannada Season 12 Show: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಧ್ರುವಂತ್ ಅವರಿಗೆ ಮಾತೇ ಮುಳ್ಳಾದಂತಿದೆ. ಗಿಲ್ಲಿ ನಟ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ವಿರುದ್ಧ ಮಾತನಾಡಿರುವ ಧ್ರುವಂತ್ ಈಗ, ರಾಶಿಕಾ ಶೆಟ್ಟಿ ವಿರುದ್ಧ ಮಾತನಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.

ರಾಶಿಕಾ ಬಗ್ಗೆ ಮಾತನಾಡಿದ್ದ ಧ್ರುವಂತ್
ಧ್ರುವಂತ್ ಅವರು ರಾಶಿಕಾ ಬಗ್ಗೆ ಕೂಡ ಮಾತನಾಡಿದ್ದಾರೆ. ರಾಶಿಕಾ ಶೆಟ್ಟಿ ಅವರು ಮೊದಲು ಅಭಿಷೇಕ್ ಶ್ರೀಕಾಂತ್ ಜೊತೆಗೆ ಇದ್ದರು. ಆಮೇಲೆ ನನ್ನ ಜೊತೆ ಮಾತನಾಡುತ್ತಿದ್ದರು. ನಾವಿಬ್ಬರು ವರ್ಕ್ ಆಗಲಿಲ್ಲ, ಈಗ ಸೂರಜ್ ಸಿಕ್ಕಿದ್ದಾರೆ ಎಂದು ಹೇಳಿದ್ದಾರೆ.
ಕಾವ್ಯ ಶೈವ ರಿವೀಲ್ ಮಾಡಿದ್ರು
ಧ್ರುವಂತ್ ಈ ರೀತಿ ಮಾತನಾಡಿರೋದನ್ನು ಕಾವ್ಯ ಶೈವ ಅವರೇ ರಾಶಿಕಾ ಶೆಟ್ಟಿಗೆ ಹೇಳಿದ್ದಾರೆ. ಇದನ್ನು ಕೇಳಿ ರಾಶಿಕಾ ಸಿಟ್ಟಾಗಿದ್ದಾರೆ. ಇದೇ ವಿಚಾರಕ್ಕೆ ಈ ಮೂವರು ಕಿತ್ತಾಡಿದ್ದಾರೆ.
ರಾಶಿಕಾ ಶೆಟ್ಟಿ ಕೂಗಾಟ
“ನೀವು ಈ ರೀತಿ ಮಾತಾಡುತ್ತಿರೋದು ನಿಮ್ಮ ವ್ಯಕ್ತಿತ್ವ ಏನು ಎಂದು ತೋರಿಸಿಕೊಡುತ್ತದೆ” ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಆಗ ಧ್ರುವಂತ್ ಅವರು ಇನ್ನೊಂದಿಷ್ಟು ಕಿರುಚಾಡಿದ್ದಾರೆ.
ಹೆಣ್ಣುಮಕ್ಕಳ ಬಗ್ಗೆ ಮಾತಾಡೋಕೆ ಇಷ್ಟ ಇಲ್ಲ
“ಹೆಣ್ಣು ಮಕ್ಕಳ ಜೊತೆ ಮಾತನಾಡೋಕೆ ನನಗೆ ಇಷ್ಟವೇ ಇಲ್ಲ” ಎಂದು ಧ್ರುವಂತ್ ಹೇಳಿದ್ದಾರೆ. ಆಗ ಕಾವ್ಯ ಶೈವ ಅವರು, “ಹೆಣ್ಣು ಮಕ್ಕಳ ಬಳಿ ಮಾತನಾಡೋಕೆ ಇಷ್ಟ ಇಲ್ಲ ಅಲ್ಲ. ನಿಮಗೆ ಹೆಣ್ಣು ಮಕ್ಕಳಿಗೆ ನಿಮ್ಮ ಜೊತೆ ಮಾತನಾಡೋಕೆ ಇಷ್ಟ ಇಲ್ಲ” ಎಂದು ಹೇಳಿದ್ದಾರೆ.
ಕೆಟ್ಟವರಾದ ಧ್ರುವಂತ್
ಈಗಾಗಲೇ ಗಿಲ್ಲಿ ನಟನ ಕಾಮಿಡಿ, ರಕ್ಷಿತಾ ಶೆಟ್ಟಿಯ ಕನ್ನಡದ ಬಗ್ಗೆ ಧ್ರುವಂತ್ ಮಾತನಾಡಿದ್ದರು. ಈಗ ರಾಶಿಕಾ ಶೆಟ್ಟಿ, ಕಾವ್ಯ ಶೈವ ಬಗ್ಗೆ ಕೂಡ ಮಾತನಾಡಿ, ಧ್ರುವಂತ್ ಕೆಟ್ಟವರಾಗಿದ್ದಾರೆ. ಮುಂದೆ ಧ್ರುವಂತ್ ಮಾತುಗಳು ಏನೇನು ಸಮಸ್ಯೆ ತಂದಿಡಲಿವೆಯೋ ಏನೋ!