Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಹೊರಗಡೆ ಜನರ ಅಭಿಪ್ರಾಯ ಏನಿದೆ ಎನ್ನೋದನ್ನು ಅಶ್ವಿನಿ ಗೌಡ ಅವರು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದಾರೆ. ಇದು ಸೂರಜ್‌, ರಾಶಿಕಾ ಶೆಟ್ಟಿಗೆ ತುಂಬ ಮುಖ್ಯವಾದ ವಿಷಯ ಎನ್ನಬಹುದು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿದ್ದಾಗ ( Bigg Boss Kannada Season 12 ) ಸ್ಪರ್ಧಿಗಳಿಗೆ ಮೊಬೈಲ್‌ ಸಂಪರ್ಕ ಇರೋದಿಲ್ಲ, ಹೊರಗಡೆ ನಮ್ಮ ಬಗ್ಗೆ ಯಾವ ರೀತಿ ಚರ್ಚೆ ಆಗ್ತಿದೆ, ನಾವು ಹೇಗೆ ಕಾಣ್ತಿದೀವಿ ಎಂದು ಕೂಡ ಗೊತ್ತಾಗೋದಿಲ್ಲ. ಮತ ಹಾಕ್ತಿದ್ದಾರೆ, ಸೇಫ್‌ ಆಗ್ತಿದೀವಿ ಎಂದು ಅವರು ಭಾವಿಸೋದುಂಟು. ಈಗ ಅಶ್ವಿನಿ ಗೌಡ ಅವರಿಗೆ ಹೊರಗಡೆ ಜನರ ಅಭಪ್ರಾಯ ಏನು ಎನ್ನೋದು ಗೊತ್ತಾಗಿದೆ. ಇದು ಆಶ್ಚರ್ಯಕರವಾದ ವಿಷಯ.

ಜಾಹ್ನವಿಗೆ ಸತ್ಯ ಗೊತ್ತಾಯ್ತು!

ಸದ್ಯ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿದ್ದ ರಿಷಾ ಗೌಡ ಮೂಲಕ ಜಾಹ್ನವಿಗೆ, ತನಗೆ ಹೊರಗಡೆ ನೆಗೆಟಿವ್‌ ಅಭಿಪ್ರಾಯ ವ್ಯಕ್ತವಾಗಿದೆ ಎನ್ನೋದು ಗೊತ್ತಾಗಿತ್ತು. ಈಗ ಅಶ್ವಿನಿ ಅವರಿಗೆ ಸೂರಜ್‌, ರಾಶಿಕಾ ಶೆಟ್ಟಿ ವಿಷಯದಲ್ಲಿ ಜನರ ಅಭಿಪ್ರಾಯ ಏನು ಎನ್ನೋದು ಅರಿವಾಗಿದೆ.

ಕಿಚ್ಚ ಸುದೀಪ್‌ ಪ್ರಶ್ನೆ ಏನು?

ಸೂರಜ್‌ ಅವರು ಬೇರೆಯವರ ಜೊತೆ ಮಾತನಾಡಿದ್ರೆ ಆಮೇಲೆ ರಾಶಿಕಾ ಶೆಟ್ಟಿ ಬಳಿ ಬೈಸ್ಕೋಬೇಕು, ಸೂರಜ್‌ ಯಾರ ಜೊತೆ ಕೂರಬೇಕು ಎನ್ನೋದು ರಾಶಿಕಾ ಕೈಯಲ್ಲಿ ಇರುತ್ತದೆ ಎಂದು ಕಿಚ್ಚ ಸುದೀಪ್‌ ಅವರು ಯೆಸ್‌ ಆರ್‌ ನೋ ಸೆಗ್ಮೆಂಟ್‌ನಲ್ಲಿ ಮಾತನಾಡಿದ್ದರು.

ಅಶ್ವಿನಿ ಗೌಡ ನೇರ ಉತ್ತರ

ಈ ಪ್ರಶ್ನೆಗೆ ಅಶ್ವಿನಿ ಗೌಡ ಅವರು, “ಸೂರಜ್‌ ಈ ಮನೆಗೆ ಬಂದಾಗ, ಅವರು ಕೆಲ ಆಟಗಳಲ್ಲಿ ಯಾರಿಗೂ ಗೊತ್ತಿರದ ಐಡಿಯಾಗಳನ್ನು ಕೊಡುತ್ತಿದ್ದರು. ಆಮೇಲೆ ಅವರು ರಾಶಿಕಾ ಜೊತೆಗೆ ಇದ್ದರು. ಯಾವಾಗಲೂ ರಾಶಿಕಾ ಶೆಟ್ಟಿ ಜೊತೆಗೆ ಇದ್ದರೆ ಅವರು ಆದಷ್ಟು ಬೇಗ ಮನೆಗೆ ಹೋಗ್ತಾರೆ” ಎಂದು ಹೇಳಿದ್ದರು.

ಕಾವ್ಯ ಶೈವ ಏನು ಹೇಳಿದ್ರು?

ಕಾವ್ಯ ಶೈವ ಮಾತನಾಡಿ, “ಸೂರಜ್‌ ಅವರು ನನ್ನ, ಸ್ಪಂದನಾ ಸೋಮಣ್ಣ ಜೊತೆಗೆ ಮಾತನಾಡುತ್ತಲೇ ಇದ್ದರು. ಆಗ ರಾಶಿಕಾ ಶೆಟ್ಟಿ, ಸೂರಜ್‌ರನ್ನು ಕರೆದು ಮಾತನಾಡುತ್ತಿದ್ದರು. ನಾನು ಅಲ್ಲಿ ಪಾಸ್‌ ಆದೆ, ಆಗ ರಾಶಿಕಾ ಶೆಟ್ಟಿ ಅವರು ನೀನು ಅಲ್ಲಿ ಕೂತಿದ್ದೆ ಎನ್ನೋ ಥರ ಮಾತನಾಡಿರೋದು ಕಿವಿಗೆ ಬಿತ್ತು. ಸೂರಜ್‌ ಮಾತನಾಡೋದನ್ನು ರಾಶಿಕಾ ಕಂಟ್ರೋಲ್‌ ಮಾಡೋ ಥರ ನನಗೆ ಅನಿಸಿತು” ಎಂದು ಹೇಳಿದ್ದರು.

ಖಂಡಿಸಿದ ಸೂರಜ್

ಇದನ್ನು ಸೂರಜ್‌ ಅವರು ಖಂಡಿಸಿದ್ದು, “ನಾನು ಈ ಮನೆಗೆ ಬಂದಾಗ, ರಾಶಿಕಾ ಜೊತೆಗೆ ಇರಿ, ಚೆನ್ನಾಗಿದೆ ಎಂದು ಅಶ್ವಿನಿ ಅವರೇ ನಮಗೆ ಹೇಳಿದ್ರು. ಈಗ ಅಶ್ವಿನಿ ಅವರೇ ನೀವು ಅವರ ಜೊತೆ ಇದ್ರೆ ಹೊರಗಡೆ ಹೋಗ್ತೀರಿ ಅಂತ ಹೇಳ್ತಿದ್ದಾರೆ” ಎಂದು ಹೇಳಿದ್ದಾರೆ.‌

ಕಿಚ್ಚ ಸುದೀಪ್‌ ಎಚ್ಚರಿಕೆ

ಈ ಹಿಂದಿನ ವಾರವೇ ಕಿಚ್ಚ ಸುದೀಪ್‌ ಅವರು ಸೂರಜ್‌ಗೆ ರಾಶಿಕಾ ಶೆಟ್ಟಿ ಜೊತೆಗೆ ಇದ್ದರೆ ನೀವು ಆದಷ್ಟು ಬೇಗ ಹೊರಗಡೆ ಬರ್ತೀರಿ ಎಂದು ಪರೋಕ್ಷವಾಗಿ ಹೇಳಿದ್ದರು. ಈಗ ಕಿಚ್ಚ ಸುದೀಪ್ ಅವರು ರಾಶಿಕಾ ಶೆಟ್ಟಿಗೆ ವಿಡಿಯೋ ಪ್ಲೇ ಮಾಡಲಾ ಎಂದು ಪ್ರಶ್ನೆ ಮಾಡಿದಾಗ, ರಾಶಿಕಾ ಬೇಡ ಎಂದರು, ಆಮೇಲೆ ಸೂರಜ್‌ ಅವರೇ, ರಾಶಿಕಾ ನನ್ನ ಮಾತನ್ನು ಕಂಟ್ರೋಲ್‌ ಮಾಡ್ತಿದ್ದಾರೆ ಎಂದು ಹೇಳಿದ್ದರು.

ಅಶ್ವಿನಿ ಗೌಡಗೆ ಅರ್ಥ ಆಯ್ತು!

ಸೂರಜ್‌ ಸಮರ್ಥರು, ತುಂಬ ಚೆನ್ನಾಗಿ ಆಟ ಆಡ್ತಾರೆ, ಆದರೆ ರಾಶಿಕಾ ಸ್ನೇಹ ಮಾಡಿ ಅವರು ದೂರವಾಗಿದ್ದಾರೆ ಎಂದು ವೀಕ್ಷಕರು ಕೂಡ ಅದೇ ಅಭಿಪ್ರಾಯ ಹೇಳಿದ್ದಾರೆ. ಇದೇ ಅಭಿಪ್ರಾಯ ಅಶ್ವಿನಿ ಅವರಿಗೂ ಆಗಿರೋದು ಆಶ್ಚರ್ಯ ಎನ್ನಬಹುದು.