Photos: ತಂದೆ-ತಾಯಿ ಆಸೆಯಂತೆ ನಿಶ್ಚಿತಾರ್ಥ ಮಾಡ್ಕೊಂಡ BBK 11 ಸ್ಪರ್ಧಿ Ugramm Manju!
Ugramm Manju And Sandhya Engagement Photos: ವಯಸ್ಸಾಗ್ತಿದೆ, ಮಗನ ಹವ್ಯಾಸ ಬದಲಾಗಬೇಕು, ಮದುವೆ ಆಗಬೇಕು ಎಂದು ಉಗ್ರಂ ಮಂಜು ಅವರ ತಂದೆ-ತಾಯಿ ಬಿಗ್ ಬಾಸ್ ವೇದಿಕೆಯಲ್ಲಿ ಕಣ್ಣೀರು ಹಾಕಿ ಹೇಳಿದ್ದರು. ಬಿಗ್ ಬಾಸ್ ಶೋ ಮುಗಿದು ವರ್ಷವಾಯ್ತು, ಈಗ ಉಗ್ರಂ ಮಂಜು ಬದುಕಿಗೆ ಸಂಗಾತಿಯ ಆಗಮನವಾಗಿದೆ.

ಹುಡುಗಿ ಹುಡುಕುತ್ತಿದ್ದಾರೆ ಎಂದಿದ್ರು
ಉಗ್ರಂ ಮಂಜು ಅವರು ಮನೆಯಲ್ಲಿ ಹುಡುಗಿಯನ್ನು ಹುಡುಕುತ್ತಿದ್ದಾರೆ, ಸಿಕ್ಕಮೇಲೆ ಮದುವೆ ಆಗ್ತೀನಿ ಎಂದು ಹೇಳಿದ್ದರು. ಅದರಂತೆ ಹುಡುಗಿ ಸಿಕ್ಕಿದ್ದಾರೆ ಎಂದು ಕಾಣಿಸುತ್ತದೆ. ಈಗ ಮಂಜು ಅವರು ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೊಸ ಅಧ್ಯಾಯದ ಆರಂಭ
“ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ” ಎಂದು ಮ್ಯಾಕ್ಸ್ ಮಂಜು ಅಥವಾ ಉಗ್ರಂ ಮಂಜು ಹೇಳಿದ್ದಾರೆ.
ನಿಶ್ಚಿತಾರ್ಥದ ಸುಂದರ ಕ್ಷಣ
“ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ” ಎಂದು ಉಗ್ರಂ ಮಂಜು ಹೇಳಿದ್ದಾರೆ. ಪಿಣ್ಯದಲ್ಲಿ ಹೂ ಮುಡಿಸುವ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥ ನೆರವೇರಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೇರಿದೆ.
ಹುಡುಗಿ ಯಾರು?
ಅಂದಹಾಗೆ ಉಗ್ರಂ ಮಂಜು ಅವರು ಸಂಧ್ಯಾ ಖುಷಿ ಎನ್ನುವವರನ್ನು ಮದುವೆ ಆಗುತ್ತಿದ್ದಾರೆ. transplant coordinator ಎಂದು ಇನ್‌ಸ್ಟಾಗ್ರಾಮ್ ಬಯೋದಲ್ಲಿ ಬರೆದುಕೊಂಡಿದ್ದಾರೆ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಂಧ್ಯಾ ವೃತ್ತಿ ಏನು?
ಅಂದಹಾಗೆ ಸಂಧ್ಯಾ ಅವರು ಸಿಕ್ಕಾಪಟ್ಟೆ ಫೋಟೋಶೂಟ್ ಮಾಡಿಸಿದ್ದಾರೆ. ವಿಭಿನ್ನವಾದ ಕಾಸ್ಟ್ಯೂಮ್‌ನಲ್ಲಿ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು, ಮಾಡೆಲ್ ಎಂದು ಕಾಣುತ್ತದೆ. ಈ ಬಗ್ಗೆ ಮಂಜು ಅವರೇ ಉತ್ತರ ಕೊಡಬೇಕಿದೆ.
ಸಿನಿಮಾಗಳಲ್ಲಿ ಬ್ಯುಸಿ, ಜನವರಿಯಲ್ಲಿ ಮದುವೆ
ಉಗ್ರಂ ಮಂಜು ಅವರು ಬಿಗ್ ಬಾಸ್ ಶೋ ನಂತರ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಇದರ ಜೊತೆಗೆ ದೇವಸ್ಥಾನ ಸೇರಿದಂತೆ ಟ್ರಿಪ್ ಕೂಡ ಮಾಡುತ್ತಿದ್ದಾರೆ. ಜನವರಿಯಲ್ಲಿ ಮದುವೆ ಆಗಲಿದ್ದಾರಂತೆ.