BBK 12: ರಕ್ಷಿತಾ, ಗಿಲ್ಲಿ ನಟನನ್ನು ಮೇಲಿಟ್ಟಿದ್ದಕ್ಕೆ ಉರಿದುಕೊಂಡ ಕಾವ್ಯ ಶೈವ; ಯಾಕೆ?
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್, ರಕ್ಷಿತಾ ಶೆಟ್ಟಿ ನಡುವೆ ಜಗಳ ನಡೆದಿತ್ತು. ಬಹುತೇಕ ರಕ್ಷಿತಾ ಹೇಳಿದಂತೆ ಧ್ರುವಂತ್ ಕೂಡ ಆಟದ ವಿಚಾರಕ್ಕೆ ಸಹಮತ ನೀಡಿದ್ದರು. ಈ ಬಗ್ಗೆ ಗಿಲ್ಲಿ ಅವರು ಧ್ರುವಂತ್ ಕಾಲೆಳೆದಿದ್ದಾರೆ.

ಲಿವಿಂಗ್ ಏರಿಯಾದಲ್ಲಿ ಮಾತುಕತೆ
ಲಿವಿಂಗ್ ಏರಿಯಾದಲ್ಲಿ ಅಶ್ವಿನಿ ಗೌಡ, ಧ್ರುವಂತ್, ಸ್ಪಂದನಾ ಸೋಮಣ್ಣ, ಗಿಲ್ಲಿ ನಟ, ಕಾವ್ಯ ಶೈವ ಅವರು ಮಾತನಾಡಿಕೊಂಡಿದ್ದಾರೆ.
ಗಿಲ್ಲಿ ನಟ: ನನ್ನ ನಿರ್ಧಾರದಲ್ಲೇ ಎಲ್ಲವೂ ನಡೆದಿದೆ. ಯಾವ ಟೀಂಗೆ ಯಾರು ಹಾಕಬೇಕು ಎನ್ನೋದು ರಕ್ಷಿತಾ ನಿರ್ಧಾರ ಆಗಿತ್ತು ಅಂತ ಅವಳೇ ಹೇಳಿದಳು.
ಕಪ್ಪೆ ವಟಗುಡುವಾಗ ವಾದ ಮಾಡಬಾರದು
ಧ್ರುವಂತ್: ಮಳೆಗಾಲದಲ್ಲಿ ಕಪ್ಪೆ ವಟಗುಡುವಾಗ ಅದು ವಾದ ಮಾಡೋಕೆ ಆಗೋದಿಲ್ಲ.
ಗಿಲ್ಲಿ ನಟ: ನೀವು ಕೋಗಿಲೆ ಅಂದಂಗಾಯ್ತು
ಕಾವ್ಯ ಶೈವ: ನೀವು ಹೇಳಿದ್ದೂ ನಡೆದಿದೆ. ಇಲ್ಲ ಅಂದಿದ್ರೆ ಈ ಮನೆಯಲ್ಲಿ ನ್ಯಾಯವೇ ಇರುತ್ತಿರಲಿಲ್ಲ.
ರಕ್ಷಿತಾ, ಗಿಲ್ಲಿ ನಟ ಅವರದ್ದೇ ಆಟ
ಧ್ರುವಂತ್: ಈ ಮನೆಯಲ್ಲಿ ರಕ್ಷಿತಾ, ಗಿಲ್ಲಿ ನಟ ಅವರದ್ದೇ ನಡೆಯುತ್ತಿದೆ. ನಾವೆಲ್ಲ ಕೆಲಸ ಮಾಡುವವರು. ಇವರು ನಡೆಯೋಕೆ, ಇಲ್ಲಿ ಇರೋದಿಕ್ಕೆ ಏನೂ ತೊಂದರೆಯಾಗಬಾರದು ಎಂದು ನಾವು ಮನೆ ಕ್ಲೀನ್ ಇಡುತ್ತಿದ್ದೇವೆ, ಊಟ ಮಾಡೋದು, ಓಡಾಡೋ ಜಾಗ, ಪರ್ಫಾಮೆನ್ಸ್ ಕೊಡೋಕೆ ಏನೂ ತೊಂದರೆಯಾಗಬಾರದು. ಬಿಗ್ ಬಾಸ್ ಅಂದರೆ ರಕ್ಷಿತಾ ಹಾಗೂ ಗಿಲ್ಲಿ, ಈ ಬಾರಿ ಟ್ರೋಫಿಯನ್ನು ಎರಡು ಭಾಗ ಮಾಡಿ ಕೊಡೋಣ
ಇಲ್ಲದಿರುವ ಕಲ್ಪನೆ ಯಾಕೆ?
ಕಾವ್ಯ ಶೈವ: ಇಲ್ಲದಿರುವ ಕಲ್ಪನೆಯನ್ನು ಯಾಕೆ ಹುಟ್ಟುಹಾಕ್ತಿದೀರಿ?
ಧ್ರುವಂತ್: ಇಲ್ಲದಿರೋ ವಿಷಯವನ್ನು ಇವರು ತಂದಾಗ ನಮಗೂ ಹೀಗೆ ಆಗೋದು
ಕಾವ್ಯ ಶೈವ ಹಾಗೂ ಸ್ಫಂದನಾ ಸೋಮಣ್ಣ ಅವರು, “ಧ್ರುವಂತ್ ನಿಮ್ಮನ್ನು ಕೆಳಗಡೆ ಇಟ್ಟರು. ನೀವು ಯಾಕೆ ಅವರನ್ನು ಮೇಲೆ ಇಡುತ್ತಿದ್ದೀರಿ? ಎಂದು ಹೇಳಿದ್ದಾರೆ.
ಫೈಟ್ ಮಾಡಬೇಡಿ
ಧ್ರುವಂತ್: ಅದಾದರೂ ಭಾಗ್ಯ ನಮಗೆ ಸಿಗಲಿ, ಅದು ನಮ್ಮ ದೊಡ್ಡ ಗುಣ
ಕಾವ್ಯ ಶೈವ: ಇನ್ನು ಎರಡು ವಾರ ಇದೆ, ಫೈಟ್ ಮಾಡಬೇಡಿ
ಧ್ರುವಂತ್: ಫೈಟ್ ಮಾಡ್ತಿಲ್ಲ
ಕಾವ್ಯ ಶೈವ: ನೀವು ಹೋಗಿಬಿಡಿ
ಧ್ರುವಂತ್: ಇವರಿಗೆ ಏನು ಕಂಟೆಂಟ್ ಬೇಕೋ ಅದನ್ನೇ ಕೊಡ್ತಿದ್ದೀನಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

