- Home
- Entertainment
- TV Talk
- BBK 12: ವೀಕ್ಷಕರ ತೀರ್ಮಾನಕ್ಕೆ ಧ್ರುವಂತ್ ಅವಮಾನ ಮಾಡಿದ್ರಾ? ಅವ್ರಿಗೆ ತಡ್ಕೊಳೋಕೆ ಆಗ್ತಿಲ್ವಂತೆ!
BBK 12: ವೀಕ್ಷಕರ ತೀರ್ಮಾನಕ್ಕೆ ಧ್ರುವಂತ್ ಅವಮಾನ ಮಾಡಿದ್ರಾ? ಅವ್ರಿಗೆ ತಡ್ಕೊಳೋಕೆ ಆಗ್ತಿಲ್ವಂತೆ!
Bigg Boss Kannada Season 12 Show: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸ್ಪಂದನಾ ಸೋಮಣ್ಣ ಹಾಗೂ ಮಾಳು ನಿಪನಾಳ ಅವರು ಮೊದಲ ಫಿನಾಲೆಗೆ ಫೈನಲಿಸ್ಟ್ ಆಗಿರೋದು ಧ್ರುವಂತ್‌ಗೆ ಇಷ್ಟವೇ ಆಗಿಲ್ಲ. ಅವರು ವೀಕ್ಷಕರ ತೀರ್ಮಾನಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಧ್ರುವಂತ್ ಇಷ್ಟುದಿನ ಸೈಲೆಂಟ್
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಧ್ರುವಂತ್ ಅವರು ಇಷ್ಟುದಿನ ಸೈಲೆಂಟ್ ಆಗಿದ್ದರು. ಕಿಚ್ಚ ಸುದೀಪ್ ಅವರು “ಯಾರು ಮನೆಯಿಂದ ಹೊರಗಡೆ ಹೋಗಬೇಕು?” ಎಂದು ಪ್ರಶ್ನೆ ಕೇಳಿದಾಗಲೂ ಉತ್ತರ ಕೊಡಲು ತಡವರಿಸಿದ್ದರು. ನನ್ನ ಮಾತಿನಿಂದ ಬೇರೆಯವರಿಗೆ ಬೇಸರ ಆಗುತ್ತದೆಯಾ ಎಂದು ನೋಡುತ್ತಿದ್ದ ಧ್ರುವಂತ್, ಈಗ ಸ್ಪಂದನಾ ಸೋಮಣ್ಣ ಜೊತೆ ಜಗಳ ಆಡೊದೊಂದೇ ಅಲ್ಲ, ಕಿರುಚಾಡಿದ್ದಾರೆ.
ಇನ್ಮುಂದೆ ಒಬ್ಬೊಬ್ಬರದ್ದು ಇಳಸ್ತೀನಿ
ನಾನು ಗುಡ್ ಮಾರ್ನಿಂಗ್ ಹೇಳಿದರೂ ಕೂಡ ಗುಡ್ ಮಾರ್ನಿಂಗ್ ಕೂಡ ಹೇಳಿಲ್ಲ. ಇವರಿಗೆಲ್ಲ ಪಾಪ-ಪುಣ್ಯ ನೋಡಿದೆ. ಅದೇ ತಪ್ಪಾಗಿದೆ. ಇಲ್ಲಿ ಎಲ್ಲರ ಆಟವನ್ನು ಚೇಂಜ್ ಮಾಡ್ತೀನಿ. ಇನ್ಮುಂದೆ ಒಬ್ಬೊಬ್ಬರದ್ದು ಇಳಸ್ತೀನಿ. ಯಾರು ಯಾರನ್ನು ಫಿಟ್ ಮಾಡಬೇಕೋ ಅದನ್ನು ಫಿಟ್ ಮಾಡ್ತೀನಿ, ಇವರೆಲ್ಲ ಸ್ವಯಂ ಘೋಷಿತ ಹಕ್ಕ ಬುಕ್ಕಗಳು ಅಲ್ವಾ? ಇನ್ನು ಕೊಚ್ಚೋಕೆ ಶುರು ಮಾಡ್ತೀನಿ” ಎಂದು ಧ್ರುವಂತ್ ಕೂಗಾಡಿದ್ದರು.
ಸ್ಪಂದನಾ ಸೋಮಣ್ಣ ಜೊತೆ ಜಗಳ
ಒಟ್ಟಿನಲ್ಲಿ ಧ್ರುವಂತ್ ಹಾಗೂ ಸ್ಪಂದನಾ ಸೋಮಣ್ಣ ನಡುವೆ ದೊಡ್ಡ ಜಗಳವೇ ನಡೆದಿದೆ. ಈ ಮಧ್ಯೆ ಜನರ ಸಿಂಪಥಿಯಿಂದ ಫೈನಲಿಸ್ಟ್ ಪಟ್ಟ ಸಿಕ್ಕಿದೆ, ನಮ್ಮಿಂದ ಸಿಕ್ಕಿದೆ. ಇವರಿಗೆ ಫೈನಲಿಸ್ಟ್ ಪಟ್ಟ ಸಿಕ್ಕಿದ್ದು ಅನ್‌ಫೇರ್ ಎಂದು ಕೂಡ ಅವರು ಹೇಳಿದ್ದರು.
ಮುಂದಿನ ವಾರ ಫಿನಾಲೆ
ಮುಂದಿನ ವಾರ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನ ಮೊದಲ ಫಿನಾಲೆ ನಡೆಯಲಿದೆ. ಈಗ ಇರುವ 17 ಸ್ಪರ್ಧಿಗಳಲ್ಲಿ ಸ್ಪಂದನಾ ಸೋಮಣ್ಣ, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ ಅವರು ಫೈನಲಿಸ್ಟ್ ಆಗಿದ್ದಾರೆ. ಸ್ಪಂದನಾ ಹಾಗೂ ಮಾಳು ಫೈನಲಿಸ್ಟ್ ಆಗಿರೋದು ಧ್ರುವಂತ್‌ಗೆ ಇಷ್ಟವೇ ಆಗಿಲ್ಲ.
ವೀಕ್ಷಕರ ತೀರ್ಮಾನಕ್ಕೆ ಅವಮಾನ
ಸ್ಪಂದನಾ ಹಾಗೂ ಮಾಳು ನಿಪನಾಳ ಅವರು ಜನರ ವೋಟ್ ಮೂಲಕ ಫೈನಲಿಸ್ಟ್ ಆಗಿದ್ದಾರೆ. ಜನರಿಂದ ಸಿಂಪಥಿ ಸಿಕ್ಕಿ ಫೈನಲಿಸ್ಟ್ ಆಗಿದ್ದಾರೆ ಎಂದು ಧ್ರುವಂತ್ ಹೇಳಿದ್ದಾರೆ. ಜನರ ನಿರ್ಣಯ ಅಥವಾ ತೀರ್ಮಾನಕ್ಕೆ ಧ್ರುವಂತ್ ಅವಮಾನ ಮಾಡಿದ್ರಾ? ಅದು ತಪ್ಪು ಎಂದು ಹೇಳಿದ್ರಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಅಂದಹಾಗೆ ಅದೃಷ್ಟ ಬರಲು ಯೋಗ, ಯೋಗ್ಯತೆ ಇರಬೇಕು ಅಂತಾರೆ, ಸ್ಪಂದನಾಗೆ ಯೋಗ ಇದೆ, ಯೋಗ್ಯತೆ ಇಲ್ಲ ಎಂದು ನಿರೂಪಕಿ ಜಾಹ್ನವಿ ಹೇಳಿದ್ದಾರೆ.