- Home
- Entertainment
- TV Talk
- ಇದಪ್ಪಾ ಸಾಧನೆ ಅಂದ್ರೆ; ಡುಪ್ಲೆಕ್ಸ್ ಮನೆಗೆ ಕಾಲಿಟ್ಟ Bigg Boss ಸ್ಪರ್ಧಿ ತುಕಾಲಿ ಸ್ಟಾರ್ ಸಂತು!
ಇದಪ್ಪಾ ಸಾಧನೆ ಅಂದ್ರೆ; ಡುಪ್ಲೆಕ್ಸ್ ಮನೆಗೆ ಕಾಲಿಟ್ಟ Bigg Boss ಸ್ಪರ್ಧಿ ತುಕಾಲಿ ಸ್ಟಾರ್ ಸಂತು!
ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಭಾಗವಹಿಸಿದ್ದ ತುಕಾಲಿ ಸ್ಟಾರ್ ಸಂತು ಅವರೀಗ ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಈ ಶೋನಲ್ಲಿ ಭಾಗವಹಿಸಿದ್ದ ಬಳಿಕ ಅವರಿಗೆ ವರ್ತೂರು ಸಂತೋಷ್ ಅವರು ಬಂಗಾರದ ಸರ, ಜೋಡೆತ್ತು ಪೆಂಡೆಂಟ್ ಕೊಡಿಸಿದ್ದರು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಹೊಸ ಕಾರ್ ಬಂತು
ಆಮೇಲೆ ಅವರು 25 ಲಕ್ಷ ರೂಪಾಯಿ ಬೆಲೆ ಬಾಳುವ ಕಿಯಾ ಕಾರ್ ಖರೀದಿ ಮಾಡಿದ್ದರು. ಯಾರ ದೃಷ್ಟಿ ಬಿತ್ತೋ ಏನೋ, ಈ ಕಾರ್ ಅಪಘಾತ ಕೂಡ ಆಗಿತ್ತು.
ಡುಪ್ಲೆಕ್ಸ್ ಮನೆ ಇದು
ಅಂದಹಾಗೆ ಒಂದಾದ ಮೇಲೆ ಒಂದರಂತೆ ಶೋಗಳನ್ನು ಮಾಡುತ್ತಿರುವ ತುಕಾಲಿ ಸ್ಟಾರ್ ಸಂತು ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಡುಪ್ಲೆಕ್ಸ್ ಮನೆ ಇದಾಗಿದೆ.
ಅತಿಥಿಗಳು ಭಾಗಿ
ಈ ಗೃಹ ಪ್ರವೇಶದಲ್ಲಿ ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ರಾಘವೇಂದ್ರ, ಮಾನಸಾ, ಶಿವು ಮುಂತಾದವರು ಬಂದು, ದಂಪತಿಗೆ ಹಾರೈಸಿದ್ದಾರೆ.
ಮನೆಯ ಹೆಸರು ಏನು?
ಮನಸಂತೋಷ ನಿಲಯ ಎಂದು ಹೆಸರು ಇಟ್ಟಿರೋದು ವಿಶೇಷ.
ಬಹುದಿನಗಳ ಕನಸು
ಮನೆ ಕಟ್ಟಬೇಕು ಎಂದು ಈ ಜೋಡಿ ಬಹಳ ವರ್ಷಗಳಿಂದ ಅಂದುಕೊಂಡಿತ್ತು. ಅದೀಗ ನೆರವೇರಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

