- Home
- Entertainment
- TV Talk
- Bigg Boss Kannada: ಧನುಷ್ ಗೌಡಗೆ ಬಂದ ನೆಗೆಟಿವ್ ಕಮೆಂಟ್ ನೋಡಿ ತಾಯಿ ಕಣ್ಣಿರು, ಸ್ನೇಹಿತರು ಹೇಳೋದೇನು?
Bigg Boss Kannada: ಧನುಷ್ ಗೌಡಗೆ ಬಂದ ನೆಗೆಟಿವ್ ಕಮೆಂಟ್ ನೋಡಿ ತಾಯಿ ಕಣ್ಣಿರು, ಸ್ನೇಹಿತರು ಹೇಳೋದೇನು?
Bigg Boss Kannada 12 : ಬಿಗ್ ಬಾಸ್ ಕನ್ನಡ ಸೀಸನ್ ಕೊನೆಯ ಕ್ಯಾಪ್ಟನ್ ಆಗಿದ್ದ ಧನುಷ್ ಗೌಡ ಬಿಗ್ ಬಾಸ್ ಗೆಲ್ತಾರಾ? ಈ ಪ್ರಶ್ನೆಗೆ ಮೂರ್ನಾಲ್ಕು ದಿನಗಳಲ್ಲಿ ಉತ್ತರ ಸಿಗಲಿದೆ. ಆದ್ರೆ ಅವರಿಗೆ ಬಂದ ಕೆಲವೇ ಕೆಲವು ನೆಗೆಟಿವ್ ಕಮೆಂಟ್ ಆಪ್ತರನ್ನು ನೋಯಿಸಿದೆ.

ಟಾಸ್ಕ್ ಕಿಂಗ್
ಬಿಗ್ ಬಾಸ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಪ್ರತಿಯೊಬ್ಬರೂ ತಮ್ಮಿಷ್ಟದ ಅಭ್ಯರ್ಥಿಗೆ ವೋಟ್ ಹಾಕ್ತಿದ್ದಾರೆ. ಅಭ್ಯರ್ಥಿಗಳ ಪರ ಪ್ರಚಾರ ಕೂಡ ಜೋರಾಗಿದೆ. ಟಾಸ್ಕ್ ಕಿಂಗ್ ಎಂದೇ ಹೆಸರು ಪಡೆದಿರುವ ಧನುಷ್ ಕೂಡ ಫಿನಾಲೆ ತಲುಪಿದ್ದಾರೆ. ಶಾಂತ ಸ್ವಭಾವದ ಧನುಷ್ ಉತ್ತಮ ಆಟಗಾರ ಎನ್ನುವ ಬಿರುದು ಪಡೆದ್ರೂ ಸಾಕಷ್ಟು ಆರೋಪಗಳನ್ನು ಕೂಡ ಹೊತ್ತುಕೊಂಡಿದ್ದಾರೆ.
ಧನುಷ್ ಬಗ್ಗೆ ನೆಗೆಟಿವ್ ಕಮೆಂಟ್
ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಆದ್ರೆ ಹೊರಗೆ ಫಾಲೋವರ್ಸ್ ಮಧ್ಯೆ ಸ್ಪರ್ಧೆ ಸಾಮಾನ್ಯ. ಬಿಗ್ ಬಾಸ್ ಮನೆಯೊಳಗೆ ನಡೆಯುವ ಆಟಗಳನ್ನು ಗಮನಿಸಿ ಮನೆ ಹೊರಗೆ ಸ್ಪರ್ಧಿಗಳನ್ನು ಜನ ಟ್ರೋಲ್ ಮಾಡ್ತಾರೆ. ಧನುಷ್ ಗಲಾಟೆಯಿಂದ ಹೊರಗಿದ್ದಾರೆ. ಅಗತ್ಯವಿರುವಲ್ಲಿ ಮಾತನಾಡಿದ್ದು ಬಿಟ್ಟರೆ ತಮಗೆ ಅಗತ್ಯವಿಲ್ಲದ ಜಾಗದಲ್ಲಿ ಅವರು ಮಾತನಾಡಿಲ್ಲ. ಇದೇ ಕಾರಣಕ್ಕೆ ಧನುಷ್ ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಅವರ ಬಗ್ಗೆ ಪಾಸಿಟಿವ್ ಕಮೆಂಟ್ ಜೊತೆ ನೆಗೆಟಿವ್ ಕಮೆಂಟ್ ಕೂಡ ಬಂದಿದೆ.
ಅಮ್ಮನ ಬೇಸರ
ಧನುಷ್ ಗೌಡ ಮನೆಯಲ್ಲಿ ಇದ್ದೂ ಪ್ರಯೋಜನವಿಲ್ಲ, ಎಲ್ಲೂ ಕಾಣಿಸಿಕೊಳ್ತಿಲ್ಲ, ಟಾಸ್ಕ್ ನಲ್ಲಿ ಮಾತ್ರ ಎನ್ನುವ ಆರೋಪ ಅವರ ಮೇಲೆ ಬಂದಿತ್ತು. ಇಷ್ಟೇ ಅಲ್ಲ ಕಾವ್ಯಾ ಹಾಗೂ ಧನುಷ್ ವಿಡಿಯೋ ಒಂದು ವೈರಲ್ ಆಗಿತ್ತು. ಯಾವುದೇ ಸ್ಪರ್ಧಿಯಾಗ್ಲಿ ಅವರ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿದಾಗ ಅವರ ಆಪ್ತರು, ತಂದೆ – ತಾಯಿಗೆ ನೋವು ಸಾಮಾನ್ಯ. ಧನುಷ್ ಗೌಡ ಅಮ್ಮ ಕೂಡ ಈ ವಿಷ್ಯದಲ್ಲಿ ಹೊರತಾಗಿಲ್ಲ. ಮಗನ ಬಗ್ಗೆ ನೆಗೆಟಿವ್ ಕಮೆಂಟ್ ಬಂದಾಗ ಅವರ ತಾಯಿ ನೋವು ತಿಂದಿದ್ದಾರೆ. ಕಣ್ಣೀರಿಟ್ಟಿದ್ದಾರೆ.
ಗೆಲುವಿಗಾಗಿ ನಡೆಯುತ್ತಿದೆಯಾ ಷಡ್ಯಂತ್ರ?
ಈಗಾಗಲೇ ಕೆಲ ಪಿಆರ್ ಒಗಳ ಬಗ್ಗೆ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಒಬ್ಬ ವ್ಯಕ್ತಿಯನ್ನು ಗೆಲ್ಲಿಸಲು ಇನ್ನೊಬ್ಬರನ್ನು ವಿಲನ್ ಮಾಡ್ಬೇಡಿ ಎಂದಿದ್ದಾರೆ. ಧನುಷ್ ಗೌಡ ಆಪ್ತ ಸ್ನೇಹಿತರು ಕೂಡ ಈಗ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಪ್ರತಿಯೊಬ್ಬರ ಆಯ್ಕೆ ಬೇರೆ. ನಿಮ್ಮಿಷ್ಟದ ವ್ಯಕ್ತಿ ಬಗ್ಗೆ ಪ್ರಚಾರ ಮಾಡಿ, ವೋಟ್ ಹಾಕಿ. ಆದ್ರೆ ಇನ್ನೊಬ್ಬ ಸ್ಪರ್ಧಿ ಬಗ್ಗೆ ನೆಗೆಟಿವ್ ಕಮೆಂಟ್, ನೆಗೆಟಿವ್ ವಿಡಿಯೋಗಳನ್ನು ಪೋಸ್ಟ್ ಮಾಡಬೇಡಿ ಎಂದಿದ್ದಾರೆ.
ಎಲ್ಲರ ಸಂತೋಷ ಬಯಸುವ ಧನುಷ್
ಧನುಷ್, ಬಿಗ್ ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದ್ರೆ ಅತ್ಯಂತ ಸೈಲೆಂಟ್ ವ್ಯಕ್ತಿತ್ವ ಹೊಂದಿದ್ದಾರೆ. ಅವರು ಬಿಗ್ ಬಾಸ್ ಮನೆಯಿಂದ ಹೊರಗಿದ್ದಂತೆ ಬಿಗ್ ಬಾಸ್ ಮನೆಯಲ್ಲಿದ್ದಾರೆ ಅನ್ನೋದು ಅವರ ಆಪ್ತರ ಹೇಳಿಕೆ. ಧನುಷ್ ತಮ್ಮ ವ್ಯಕ್ತಿತ್ವದಿಂದ ಸದಾ ಎಲ್ಲರ ಮನಸ್ಸು ಗೆಲ್ಲುತ್ತಾರೆ. ಯಾವುದೇ ವ್ಯಕ್ತಿಗೆ ನೋವು ನೀಡುವ ಸ್ವಭಾವ ಅವರಿಗಿಲ್ಲ ಅಂತ ಅವರ ಸ್ನೇಹಿತರು ಹೇಳಿದ್ದಾರೆ.
ಎರಡು ಬಾರಿ ಕ್ಯಾಪ್ಟನ್
ಧನುಷ್ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ದಾಖಲೆ ಬರೆದಿದ್ದಾರೆ. ಎರಡು ಬಾರಿ ಕ್ಯಾಪ್ಟನ್ ಆದ ಅಭ್ಯರ್ಥಿಯಾಗಿದ್ದಾರೆ. ಅಷ್ಟೇ ಅಲ್ಲ ಕ್ಯಾಪ್ಟನ್ ಆಗುವ ಮೂಲಕ ಫಿನಾಲೆ ತಲುಪಿದ ಮೊದಲ ಅಭ್ಯರ್ಥಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ನಿನ್ನೆ ಧನುಷ್ ಅಭಿಮಾನಿಗಳ ಆಗಮನವಾಗಿತ್ತು. ಈ ವೇಳೆ ಧನುಷ್ ತಮ್ಮ ಮನಸ್ಸಿನ ಭಾವನೆ ಹಂಚಿಕೊಂಡು ಮತಯಾಚಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

