- Home
- Entertainment
- BBK 12: ಖಡಕ್ ಆಗಿ ಗಿಲ್ಲಿ ನಟನ ತಪ್ಪು ಹೇಳಿದ ಕಿಚ್ಚ ಸುದೀಪ್; ಈ ವಾರ ಮಾರಿಹಬ್ಬ ಮಿಸ್ ಆಗಲ್ಲ!
BBK 12: ಖಡಕ್ ಆಗಿ ಗಿಲ್ಲಿ ನಟನ ತಪ್ಪು ಹೇಳಿದ ಕಿಚ್ಚ ಸುದೀಪ್; ಈ ವಾರ ಮಾರಿಹಬ್ಬ ಮಿಸ್ ಆಗಲ್ಲ!
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದರು. ಬೇರೆಯವರ ಕ್ಯಾಪ್ಟನ್ಸಿಯಲ್ಲಿ ಗಿಲ್ಲಿ ನಟ ಅವರು ಕೆಲಸ ಮಾಡಿರಲಿಲ್ಲ. ಈ ಬಾರಿ ಅವರು ಬೇರೆಯವರ ಬಳಿ ಕೆಲಸ ಮಾಡಿಸಬೇಕಿತ್ತು.

ಕಾವ್ಯರನ್ನು ಉಳಿಸಿದ್ರು
ಒಂದು ಬಾವುಟ ನಿಲ್ಲಿಸಲಾಗುವುದು. ಬಜರ್ ಆದಾಗ ಆ ಬಾವುಟವನ್ನು ಓಡಿ ಹೋಗಿ ತಗೋಬೇಕು. ಬಾವುಟ ತಗೊಂಡವರು ಇಬ್ಬರು ಈ ಮನೆಯಲ್ಲಿ ಇರೋಕೆ ಅರ್ಹತೆ ಇಲ್ಲ ಎಂದು ಹೇಳಬೇಕು. ಆಮೇಲೆ ಕ್ಯಾಪ್ಟನ್ ಗಿಲ್ಲಿ ಅವರು ಅವರಿಬ್ಬರಲ್ಲಿ ಯಾರು ನಾಮಿನೇಟ್ ಆಗ್ತಾರೆ ಎಂದು ನಿರ್ಧಾರ ತಿಳಿಸಬೇಕು. ಆಗ ಕಾವ್ಯ ಶೈವ ಅವರನ್ನು ಗಿಲ್ಲಿ ನಾಮಿನೇಟ್ ಮಾಡಲೇ ಇಲ್ಲ. ಕಾವ್ಯ ಅವರನ್ನು ಉಳಿಸ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಅದರಂತೆ ಆಯ್ತು.
ಗಿಲ್ಲಿ ವಿರುದ್ಧ ಮಾತನಾಡಿದ್ರು
ಕಿಚ್ಚನ ಪಂಚಾಯಿತಿಯಲ್ಲಿ ಗಿಲ್ಲಿ ನಟನ ಕ್ಯಾಪ್ಟನ್ಸಿ ಚರ್ಚೆ ಆಗಿದೆ. ಕಲರ್ಸ್ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋ ಹಂಚಿಕೊಂಡಿದೆ. ಆಗ ಸ್ಪಂದನಾ ಸೋಮಣ್ಣ, ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅವರು ಗಿಲ್ಲಿ ನಟನ ವಿರುದ್ಧ ಮಾತನಾಡಿದ್ದಾರೆ.
ಗಿಲ್ಲಿ ವಿರುದ್ಧ ಸ್ಪಂದನಾ ಮಾತು
ಸ್ಪಂದನಾ ಸೋಮಣ್ಣ ಮನೆಯಿಂದ ಹೊರಗಡೆ ಹೋಗಬೇಕು, ಅದೃಷ್ಟದಿಂದ ಉಳಿದುಕೊಂಡಿದ್ದಾರೆ ಎಂದು ಗಿಲ್ಲಿ ಪದೇ ಪದೇ ಹೇಳಿದ್ದಾರೆ. ಇನ್ನೊಂದು ಕಡೆ ಸ್ಪಂದನಾ ಅವರು ಕಾವ್ಯರನ್ನು ನಾಮಿನೇಟ್ ಮಾಡಲ್ಲ, ಸ್ಪಂದನಾರನ್ನು ಕಾವ್ಯ ನಾಮಿನೇಟ್ ಮಾಡಲ್ಲ. ಹೀಗಿರುವಾಗ ಗಿಲ್ಲಿ ವಿರುದ್ಧ ಸ್ಪಂದನಾ ಮಾತನಾಡಿದ್ದಾರೆ.
ಸಂಭಾಷಣೆ ಏನು?
ರಕ್ಷಿತಾ ಶೆಟ್ಟಿ: ಕ್ಯಾಪ್ಟನ್ ಅಂತ ಅನಿಸಲೇ ಇಲ್ಲ
ಸ್ಪಂದನಾ ಸೋಮಣ್ಣ: ಕ್ಯಾಪ್ಟನ್ ಆಗಿ, ಸ್ಪರ್ಧಿಯಾಗಿ, ಟಾಕ್ಸಿಕ್ ಅನಿಸಿತು. ಯಾರನ್ನೇ ನಿಲ್ಲಿಸಿದರೂ ಕೂಡ ಕಾವ್ಯ ಅವರನ್ನು ಮಾತ್ರ ನಾಮಿನೇಟ್ ಮಾಡಲಿಲ್ಲ.
ಕಿಚ್ಚ ಸುದೀಪ್ ಹೇಳಿದ್ದೇನು?
ರಘು: ಜವಾಬ್ದಾರಿಯಿಂದ ಇರಲಿಲ್ಲ.
ಅಶ್ವಿನಿ ಗೌಡ: ಅಧಿಕಾರ ಕೊಟ್ಟಾಗ, ನಮ್ಮಲ್ಲಿರುವ ಅಹಂಕಾರ ಎಷ್ಟು ಹೊರಗಡೆ ಬರುತ್ತದೆ ಎನ್ನೋದು ಗಿಲ್ಲಿಯಲ್ಲಿ ಗೊತ್ತಾಯ್ತು. ನಾನೇ ಕಪ್ ಗೆಲ್ತೀನಿ, ಇನ್ನೊಬ್ಬರನ್ನು ಫಿನಾಲೆಗೆ ಕರೆದುಕೊಂಡು ಹೋಗ್ತೀನಿ ಎನ್ನುವ ಹಾಗತ್ತು.
ನಾಮಿನೇಶನ್ ಪ್ರಕ್ರಿಯೆ ಸರಿ ಇರಲಿಲ್ಲ. ಕಾವ್ಯ ಅವರನ್ನು ಸೇವ್ ಮಾಡಲು ಇಡೀ ನಾಮಿನೇಶನ್ ಪ್ರಕ್ರಿಯೆ ನಡೆಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

