- Home
- Entertainment
- TV Talk
- ಪಟಪಟ ಅಂತ ಮಾತಾಡ್ತಿದ್ದ ಕುಮಾರಿಗೆ ಚಮಕ್ ಕೊಟ್ಟ ಕಿಚ್ಚ ಸುದೀಪ್; ತಬ್ಬಿಬ್ಬಾದ ಸ್ಪರ್ಧಿ
ಪಟಪಟ ಅಂತ ಮಾತಾಡ್ತಿದ್ದ ಕುಮಾರಿಗೆ ಚಮಕ್ ಕೊಟ್ಟ ಕಿಚ್ಚ ಸುದೀಪ್; ತಬ್ಬಿಬ್ಬಾದ ಸ್ಪರ್ಧಿ
ಬಿಗ್ಬಾಸ್ ಮನೆಗೆ ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ಕುಮಾರಿ ತಮ್ಮ ನೇರ ನುಡಿಗಳಿಂದ ಗಮನ ಸೆಳೆಯುತ್ತಿದ್ದಾರೆ. ಆದರೆ, ಭಾನುವಾರದ ಸಂಚಿಕೆಯಲ್ಲಿ ಶುಗರ್ಕೋಟಿಂಗ್ ಬಗ್ಗೆ ಮಾತನಾಡಿದ ಕುಮಾರಿಗೆ ಸುದೀಪ್ ಅವರು ತಕ್ಕ ತಿರುಗೇಟು ನೀಡಿದ್ದಾರೆ. ಇದರಿಂದ ಕುಮಾರಿ ತಬ್ಬಿಬ್ಬಾಗಿದ್ದಾರೆ.

ವೈಲ್ಡ್ಕಾರ್ಡ್ ಸ್ಪರ್ಧಿ ಕುಮಾರಿ
ಈ ಬಾರಿ ಬಿಗ್ಬಾಸ್ ಮನೆಗೆ ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ಕುಮಾರಿ ಒಂದೇ ವಾರದಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಕುಮಾರಿ ಫಿಲ್ಟರ್ ಇಲ್ಲದೇ ತಮ್ಮಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದು ಕಿರಣ್ ಶಾಸ್ತ್ರಿ ಮತ್ತು ಗಾನವಿ ಗೌಡ ಹೇಳುತ್ತಾರೆ. ಭಾನುವಾರದ ಸಂಚಿಕೆಯಲ್ಲಿ ಪಟಪಟ ಅಂತ ಮಾತಾಡ್ತಿದ್ದ ಕುಮಾರಿಗೆ ಸುದೀಪ್ ಅವರು ಚಮಕ್ ಕೊಟ್ಟಿದ್ದಾರೆ.
ಸಿಂಪತಿ ಕಾರ್ಡ್
ಹೌದು, ಯೆಸ್-ನೋ ಬೋರ್ಡ್ ಆಟದಲ್ಲಿ, ಕುಮಾರಿ ಮನೆಯಲ್ಲಿ ಸಿಂಪತಿ ಕಾರ್ಡ್ ಯೂಸ್ ಮಾಡ್ತಿದ್ದಾರೆ ಎಂಬ ಹೇಳಿಕೆಯನ್ನು ಸುದೀಪ್ ಹೇಳಿದರು. ಈ ಹೇಳಿಕೆಗೆ ಮತ್ತೋರ್ವ ಸ್ಪರ್ಧಿಯಾಗಿರೋ ಲಕ್ಷ್ಮೀ ಹೌದು ಎಂದು ಹೇಳುತ್ತಾರೆ. ನನಗೆ ಕುಮಾರಿ ಹಲವು ದಿನಗಳಿಂದ ಪರಿಚಯ. ಇಲ್ಲಿಯವರು ಕುಮಾರಿ ಚಿಕ್ಕವಳು ಎಂದು ಹೇಳುತ್ತಾ ದಡ್ಡರಾಗುತ್ತಿದ್ದಾರೆ ಎಂದರು.
ಶುಗರ್ಕೋಟಿಂಗ್
ಇದೇ ವೇಳೆ ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಈ ಎಲ್ಲಾ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ಕುಮಾರಿ, ನಾನು ಏನು ಇದೆಯೋ ಅದನ್ನು ಹೇಳುತ್ತೇನೆ. ಯಾರನ್ನು ಮೆಚ್ಚಿಸಲು ಅಭಿಪ್ರಾಯಗಳನ್ನು ಮರೆ ಮಾಡಲ್ಲ. ಶುಗರ್ಕೋಟಿಂಗ್ ಮಾಡಿ ಮಾತನಾಡಲ್ಲ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು.
ತಾಂಡವ್ ಹೆಸ್ರು ಹೇಳಿದ ಕುಮಾರಿ
ಇಷ್ಟು ಹೇಳುತ್ತಿದ್ದಂತೆ ಮಾತಿನ ಮಧ್ಯೆ ಬಂದ ಸುದೀಪ್, ಹಾಗಾದ್ರೆ ಇಲ್ಲಿ ಯಾರು ಆ ರೀತಿ ಮಾತಾಡ್ತಾರೆ ಎಂದು ಪ್ರಶ್ನೆ ಮಾಡಿದರು. ಈ ಪ್ರಶ್ನೆ ಎದುರಾಗುತ್ತಿದ್ದಂತೆ ಕುಮಾರಿ, ಅಕ್ಕ-ಪಕ್ಕ ಕುಳಿತ ಸ್ಪರ್ಧಿಗಳನ್ನು ನೋಡಿ ಸಮಯ ತೆಗೆದುಕೊಂಡು ತಾಂಡವ್ ಹೆಸರು ಹೇಳಿದರು.
ಸುದೀಪ್ ಚಮಕ್
ಕುಮಾರಿ ಯೋಚಿಸಿ ಉತ್ತರ ನೀಡಿದ್ದಕ್ಕೆ ಸುದೀಪ್, ಇದು ಶುಗರ್ಕೋಟ್ ಅಲ್ಲವೇ? ಫಿಲ್ಟರ್ ಇಲ್ಲದೇ ಮಾತನಾಡೋಣ ಅಂದ್ರೆ ತತ್ಕ್ಷಣ ಉತ್ತರಿಸೋದು. ನೀವು ಹೇಳುವಂತೆ ಆಕ್ಚುಲಿ ಎಂಬ ಪದ ಬಳಸಿ ತಾಂಡವ್ ಮಾತನಾಡಲ್ಲ ಎಂದು ಕುಮಾರಿಗೆ ಚಮಕ್ ಕೊಟ್ಟರು. ಒಟ್ಟಿನಲ್ಲಿ ಒಂದು ವಾರದಲ್ಲಿಯೇ ಕುಮಾರಿ ಮನೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರೋದು ಕಾಣಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

