MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss 13 ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ: ಹೀಗೆ ಮಾಡಿ- ಹಂತ ಹಂತದ ಮಾಹಿತಿ

Bigg Boss 13 ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ: ಹೀಗೆ ಮಾಡಿ- ಹಂತ ಹಂತದ ಮಾಹಿತಿ

ಕಲರ್ಸ್ ವಾಹಿನಿಯು ಬಿಗ್​ಬಾಸ್​ 13ನೇ ಸೀಸನ್ ಘೋಷಿಸಿದ್ದು, ಈ ಬಾರಿ ಸಾಮಾನ್ಯ ಜನರಿಗೂ ಭಾಗವಹಿಸಲು ಅವಕಾಶ ನೀಡಿದೆ. ಆಡಿಷನ್‌ಗೆ ವೀಡಿಯೋ ಕಳುಹಿಸಲು ಜೂನ್ 21 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

2 Min read
Author : Suchethana D
Published : Jun 18 2026, 07:26 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​​ 13 ಬಿಗ್​ ಅಪ್​ಡೇಟ್​
Image Credit : Colors Kannada Instagram

ಬಿಗ್​ಬಾಸ್​​ 13 ಬಿಗ್​ ಅಪ್​ಡೇಟ್​

ಬಿಗ್​ಬಾಸ್​ 12ರ ಹವಾ ಸ್ವಲ್ಪ ತಣ್ಣಗಾಗುತ್ತಾ ಬರುವಾಗಲೇ ಕಲರ್ಸ್ ವಾಹಿನಿ ಬಿಗ್​ಬಾಸ್​ 13ರನ್ನು ಘೋಷಣೆ ಮಾಡಿದೆ. ಈ ಬಾರಿ ಅವಧಿಗಿಂತಲೂ ಮುನ್ನವೇ ಷೋ ಆರಂಭವಾಗಲಿದೆ ಎಂದು ಇದಾಗಲೇ ಪ್ರೊಮೋ ಕೂಡ ರಿಲೀಸ್​​ ಮಾಡಿದೆ. ಇದರ ಜೊತೆಗೆನೇ ಸಾಮಾನ್ಯ ಜನರಿಗೂ ಬಿಗ್​ಬಾಸ್​ ಬಿಗ್​ ಆಫರ್​ ಕೊಟ್ಟಿರೋದು ಗೊತ್ತೇ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಾಹಿನಿ ಘೋಷಣೆ
Image Credit : Social Media

ವಾಹಿನಿ ಘೋಷಣೆ

ನೀವೂ ಕೂಡ ಇದರಲ್ಲಿ ಭಾಗವಹಿಸಲು ಅವಕಾಶವನ್ನು ಬಿಗ್​ಬಾಸ್​​ (Bigg Boss Kannada Season 13) ಈ ಬಾರಿ ಕಲ್ಪಿಸಿದೆ. ಇದರ ಬಗ್ಗೆ ವಾಹಿನಿ ಘೋಷಣೆಯನ್ನೂ ಮಾಡಿದೆ. ಬಿಗ್​ಬಾಸ್ ಎಂದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಸೀಮಿತ. ಅದರಲ್ಲಿಯೂ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಇದನ್ನು ಹೊರತುಪಡಿಸಿ ಈ ಬಾರಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಿರುವುದಾಗಿ ಹೇಳಲಾಗಿದೆ.

Related Articles

Related image1
ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ, ಕಾಲೊತ್ತುವ ಸಿಬ್ಬಂದಿ, ಮನೆಯಿಂದ ಊಟದ ಆರೋಪ: ದೂರು ದಾಖಲು
Related image2
ಬಿಗ್​ಬಾಸ್ 13​ನಲ್ಲಿ ಅರುಣ್​ ಹೆಸ್ರು ನೋಡಿ ನಂಗೂ ಆಶ್ಚರ್ಯ ಆಯ್ತು: ನಟಿ ರಜಿನಿ ಏನಂದ್ರು ಕೇಳಿ
36
ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?
Image Credit : Social Media

ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?

‘ಕೈ ತಟ್ಟಿ ಹುರಿದುಂಬಿಸಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?’ ಎಂದು ‘ಕಲರ್ಸ್ ಕನ್ನಡ’ ವಾಹಿನಿ ಕೇಳುತ್ತಿದೆ. ‘ನಮಸ್ತೆ ಕರ್ನಾಟಕ.. ಅವಕಾಶ ಸಿಗದ ಆಸೆಗಳಿಗೆ ಅರ್ಥವೇ ಇರೋದಿಲ್ಲ. ಈ ಬಾರಿ ನಿಮ್ಮಂಥ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶವನ್ನು ನೀಡುತ್ತಿದ್ದಾರೆ ಬಿಗ್ ಬಾಸ್. ಕೈ ತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋದಕ್ಕೆ ಸಿದ್ಧರಾಗಿದ್ದೀರಾ? ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ’ ಎಂದು ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ.

46
ಅಂತಿಮ ದಿನ ಫಿಕ್ಸ್​
Image Credit : Colors Kannada Instagram

ಅಂತಿಮ ದಿನ ಫಿಕ್ಸ್​

ಇದಾಗಲೇ ಸಹಸ್ರಾರು ಮಂದಿ ಆಡಿಷನ್​ ಮಾಡಿ ಕಳುಹಿಸುತ್ತಿದ್ದಾರೆ. ಇದೀಗ ಕಲರ್ಸ್​ ವಾಹಿನಿ ಆಡಿಷನ್​ ಕಳುಹಿಸಲು ಕೊನೆಯ ದಿನ ಫಿಕ್ಸ್​ ಮಾಡಿದೆ. ಅದು ಜೂನ್​ 21. ಇದರ ಅರ್ಥ ಇನ್ನು 3 ದಿನ ಮಾತ್ರ ಬಾಕಿ ಇದೆ. ಆದ್ದರಿಂದ ಬೇಗ ಆಡಿಷನ್​ ಕೊಡುವಂತೆ ವಾಹಿನಿ ಹೇಳಿದೆ.

56
ಹೀಗೆ ಮಾಡಿ
Image Credit : Colors Kannada Instagram

ಹೀಗೆ ಮಾಡಿ

ಬಿಗ್ ಬಾಸ್ ಆಡಿಷನ್‌ಗೆ ವೀಡಿಯೋ ಕಳುಹಿಸಲು ಜೂನ್ 21 ಕೊನೆಯ ದಿನ! ಭಾಗವಹಿಸುವ ವಿಧಾನ ಇಲ್ಲಿದೆ

1. ಬಿಗ್ ಬಾಸ್ ಆಡಿಷನ್‌ನಲ್ಲಿ ಭಾಗವಹಿಸಲು colorskannada.jiostar.com ಗೆ ಭೇಟಿ ನೀಡಿ

2. ಮೊಬೈಲ್ ನಂಬರ್ ನಮೂದಿಸಿ OTP ಮೂಲಕ ವೆರಿಫೈ ಮಾಡಿ

3. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, 50 MB ಒಳಗಿನ ಮತ್ತು 3 ನಿಮಿಷಗಳಿಗಿಂತ ಕಡಿಮೆ ಅವಧಿಯ ವೀಡಿಯೋ ಅಪ್‌ಲೋಡ್ ಮಾಡಿ.

4. Consent Form ಭರ್ತಿ ಮಾಡಿ, Submit Your Audition ಕ್ಲಿಕ್ ಮಾಡಿ.

66
ಹಿಂದೆಯೂ ಅವಕಾಶ ಸಿಕ್ಕಿತ್ತು
Image Credit : bbkseason13 Instagram

ಹಿಂದೆಯೂ ಅವಕಾಶ ಸಿಕ್ಕಿತ್ತು

ಇದಕ್ಕೂ ಮುನ್ನ 2017ರಲ್ಲಿ ನಡೆದಿದ್ದ 5ನೇ ಸೀಸನ್‌ನಲ್ಲಿ ಕಾಮನ್‌ಮ್ಯಾನ್‌ಗೆ ಅವಕಾಶ ನೀಡಲಾಗಿತ್ತು. ಮೂಲತಃ ಸೇಲ್ಸ್‌ಮನ್ ದಿವಾಕರ್ ಫಿನಾಲೆವರೆಗೂ ಹೋಗಿ ಗಮನ ಸೆಳೆದಿದ್ದರು. ಅಂತಿಮವಾಗಿ ರನ್ನರ್ ಅಪ್ ಆಗಿ ಸುದ್ದಿ ಆಗಿದ್ದರು. ಬಳಿಕ 'ರೇಸ್' ಎಂಬ ಕನ್ನಡ ಸಿನಿಮಾದಲ್ಲಿ ಕೂಡ ದಿವಾಕರ್ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಟಿವಿ ಶೋ
ಬಿಗ್ ಬಾಸ್ ಕನ್ನಡ
ಕಿಚ್ಚ ಸುದೀಪ್

Latest Videos
Recommended Stories
Recommended image1
Rani Serialಗೆ 100ರ ಸಂಭ್ರಮ: ನಟ ದಿಲೀಪ್​ ರಾಜ್​ರನ್ನು ನೆನಪು ಮಾಡಿಕೊಂಡ ಪುಟಾಣಿ ಧನ್ವಿ
Recommended image2
10-15 ಕೋಟಿ ಕೊಟ್ರೆ ದುಬೈ ಶೇಖ್‌ ಜೊತೆ ಮಲಗೋಕೆ ರೆಡಿ ಎಂದಿದ್ದ Apoorva Mukhija ಹಳೇ ವಿಡಿಯೋ ಮತ್ತೆ ವೈರಲ್‌ ಆಗಿದ್ದೇಕೆ?
Recommended image3
ಬಿಗ್​ಬಾಸ್ 13​ನಲ್ಲಿ ಅರುಣ್​ ಹೆಸ್ರು ನೋಡಿ ನಂಗೂ ಆಶ್ಚರ್ಯ ಆಯ್ತು: ನಟಿ ರಜಿನಿ ಏನಂದ್ರು ಕೇಳಿ
Related Stories
Recommended image1
ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ, ಕಾಲೊತ್ತುವ ಸಿಬ್ಬಂದಿ, ಮನೆಯಿಂದ ಊಟದ ಆರೋಪ: ದೂರು ದಾಖಲು
Recommended image2
ಬಿಗ್​ಬಾಸ್ 13​ನಲ್ಲಿ ಅರುಣ್​ ಹೆಸ್ರು ನೋಡಿ ನಂಗೂ ಆಶ್ಚರ್ಯ ಆಯ್ತು: ನಟಿ ರಜಿನಿ ಏನಂದ್ರು ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved