MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ, ಕಾಲೊತ್ತುವ ಸಿಬ್ಬಂದಿ, ಮನೆಯಿಂದ ಊಟದ ಆರೋಪ: ದೂರು ದಾಖಲು

ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ, ಕಾಲೊತ್ತುವ ಸಿಬ್ಬಂದಿ, ಮನೆಯಿಂದ ಊಟದ ಆರೋಪ: ದೂರು ದಾಖಲು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ.  

2 Min read
Author : Suchethana D
Published : Jun 18 2026, 05:28 PM IST
Share this Photo Gallery
  • FB
  • TW
  • Linkdin
  • Whatsapp
16
ಅಂದು ದರ್ಶನ್​ ವಿರುದ್ಧ ಆರೋಪ
Image Credit : Asianet News

ಅಂದು ದರ್ಶನ್​ ವಿರುದ್ಧ ಆರೋಪ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ವಿಡಿಯೋ ವೈರಲ್​ ಆಗಿ, ಅದು ಸಾಕಷ್ಟು ಸದ್ದು ಮಾಡಿತ್ತು. ಆ ಬಳಿಕ, ಇದರಿಂದಾಗಿ ಜೈಲಿನ ಕೆಲವು ಸಿಬ್ಬಂದಿ ಕೆಲಸ ಕೂಡ ಕಳೆದುಕೊಂಡಿದ್ದರು. ಇದೀಗ ಅದೇ ಆರೋಪ ಇದೇ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ (Pavitra Gowda) ಅವರ ಮೇಲೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜೈಲಿನಲ್ಲಿ ರಾಜಾತಿಥ್ಯ
Image Credit : Social Media

ಜೈಲಿನಲ್ಲಿ ರಾಜಾತಿಥ್ಯ

ಸಂಧ್ಯಾ ಪವಿತ್ರಾ ನಾಗರಾಜ್ ಎನ್ನುವವರು ಪವಿತ್ರಾ ಗೌಡ ವಿರುದ್ಧ ಇಂಥದ್ದೊಂದು ಆರೋಪವನ್ನು ಮಾಧ್ಯಮದ ಎದುರು ಮಾಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸಂಧ್ಯಾ ಅವರು ಜೈಲಿಗೆ ಹೋಗಿದ್ದರು. ಅಲ್ಲಿ ಪವಿತ್ರಾ ಗೌಡ ಅವರಿಗೆ ರಾಜಾತಿಥ್ಯ ನೀಡುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಮನೆಯೂಟ ಬರುತ್ತೆ, ಐಷಾರಾಮಿಯಾಗಿ ಜೈಲಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

Related Articles

Related image1
ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿದ ವಿಜಯಲಕ್ಷ್ಮಿ ದರ್ಶನ್​: ಕಮೆಂಟ್​ ಹಾಕಿದವರಲ್ಲಿ ಶುರುವಾಯ್ತು ನಡುಕ
Related image2
Bossಗೆ ಎದುರಾಯ್ತು ಮತ್ತೊಂದು ಸಂಕಷ್ಟ: ಹೈಕೋರ್ಟ್​ ಮೆಟ್ಟಿಲೇರಿದ ದರ್ಶನ್​, ವಿಜಯಲಕ್ಷ್ಮಿ
36
 ಕಾಲು ಒತ್ತುತ್ತಾರೆ
Image Credit : Google

ಕಾಲು ಒತ್ತುತ್ತಾರೆ

ಅಷ್ಟೇ ಅಲ್ಲದೇ, ಸಂಧ್ಯಾ ಅವರು ಇನ್ನೂ ಕೆಲವು ಆಪಾದನೆ ಮಾಡಿದ್ದಾರೆ. ಜೈಲಿನ ಭದ್ರತಾ ಸಿಬ್ಬಂದಿ ಪವಿತ್ರಾಗೌಡ ಅವರ ಕಾಲು ಒತ್ತುತ್ತಾರೆ. ಅವರೇ ಊಟವನ್ನೂ ತೆಗೆದುಕೊಂಡು ಕೊಡುತ್ತಾರೆ. ಸಿಬ್ಬಂದಿಗಳೇ ಮನೆಯಿಂದ ಬಾಕ್ಸ್ ತಗೊಂಡು ಬರ್ತಾರೆ ಎಂಬೆಲ್ಲಾ ಆರೋಪ ಮಾಡಿದ್ದಾರೆ.

46
ಮೇಕಪ್​ಗೆ ಅವಕಾಶ
Image Credit : our own

ಮೇಕಪ್​ಗೆ ಅವಕಾಶ

ಜೈಲಿನಲ್ಲಿ ಮೇಕಪ್ ಮಾಡಿಕೊಳ್ಳೋಕೆ ವ್ಯವಸ್ಥೆ ಇದೆ, ಆದ್ದರಿಂದ ಪವಿತ್ರಾ ಗೌಡ ಅವರು ಸಾಕಷ್ಟು ಎಂಜಾಯ್​ ಮಾಡುತ್ತಿದ್ದಾರೆ,, ದರ್ಶನ್​ಗೆ ಯಾವುದೇ ಸೌಲಭ್ಯಗಳು ಸಿಕ್ತಿಲ್ಲ, ಪವಿತ್ರಾಗೌಡಗೆ ಅಲ್ಲಿರೋ ಭದ್ರತಾ ಸಿಬ್ಬಂದಿಯೇ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ಹೇಳಿದ್ದು, ಇದೀಗ ಸಂಧ್ಯಾ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ.

56
ಎಫ್​ಐಆರ್​ಗೆ ಅನುಮತಿ
Image Credit : our own

ಎಫ್​ಐಆರ್​ಗೆ ಅನುಮತಿ

ಅಷ್ಟಕ್ಕೂ ಇಂಥದ್ದೊಂದು ಗಂಭೀರ ಆರೋಪ ಮಾಡಿರುವ ಸಂಧ್ಯಾ ವಿರುದ್ಧ ಈಗ ಭದ್ರತಾ ಸಿಬ್ಬಂದಿಯಾಗಿರುವ ರಶ್ಮಿ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಸಂಧ್ಯಾ ವಿರುದ್ಧ ಎನ್​​ಸಿಆರ್ (Non-Cognizable Report) ದಾಖಲಾಗಿದೆ. ಸಂಧ್ಯಾ ಅವರ ವಿರುದ್ಧ ಎಫ್​ಐಆರ್ ದಾಖಲಾತಿಗೆ ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದಾರೆ. ಸದ್ಯ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯ್ತಿದ್ದಾರೆ.

66
ಪವಿತ್ರಾ ಗೌಡ ಆತ್ಮಕಥನ
Image Credit : Social Media

ಪವಿತ್ರಾ ಗೌಡ ಆತ್ಮಕಥನ

ಅದೇ ಇನ್ನೊಂದೆಡೆ ಪವಿತ್ರಾ ಗೌಡ ಅವರು, ಜೈಲಿನಲ್ಲಿ ಆತ್ಮಕಥೆ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಬಂದಿದೆ. ಇದರಲ್ಲಿ ಏನು ಇರಲಿವೆ, ರೇಣುಕಾಸ್ವಾಮಿ ಕೊಲೆಯ ಬಗ್ಗೆ ಹೇಳ್ತಾರಾ, ತಮ್ಮ ಮತ್ತು ದರ್ಶನ್​ ಸ್ನೇಹದ ಬಗ್ಗೆ ವಿವರಿಸ್ತಾರಾ ಅಥವಾ ಇನ್ನೇನು ಇರಲಿದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದರ್ಶನ್ ತೂಗುದೀಪ
ಪವಿತ್ರಾ ಗೌಡ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಸ್ಯಾಂಡಲ್ವುಡ್ ಫಿಲ್ಮ್
ಕ್ರೈಮ್ ನ್ಯೂಸ್
ರೇಣುಕಾಸ್ವಾಮಿ ಪ್ರಕರಣ

Latest Videos
Recommended Stories
Recommended image1
Now Playing
Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
Recommended image2
Alpha: ಬಾಲಿವುಡ್‌ಗೆ ಸಿಕ್ಕ ಹೊಸ ಲೇಡಿ ಧುರಂಧರ್: ಲಂಕೆ ಧಹಿಸಲು ಹೊರಟ ಆಲಿಯಾಗೆ ಹೃತಿಕ್ ಸಾಥ್!
Recommended image3
ಲಂಡನ್‌ನಲ್ಲಿ ಹುಟ್ಟಿ ಬೆಳೆದ ಮಗಳು; ಹರ ಹರ ಮಹಾದೇವ ಧಾರಾವಾಹಿ ನಟಿ Priyanka Chincholi Family Photos
Related Stories
Recommended image1
ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿದ ವಿಜಯಲಕ್ಷ್ಮಿ ದರ್ಶನ್​: ಕಮೆಂಟ್​ ಹಾಕಿದವರಲ್ಲಿ ಶುರುವಾಯ್ತು ನಡುಕ
Recommended image2
Bossಗೆ ಎದುರಾಯ್ತು ಮತ್ತೊಂದು ಸಂಕಷ್ಟ: ಹೈಕೋರ್ಟ್​ ಮೆಟ್ಟಿಲೇರಿದ ದರ್ಶನ್​, ವಿಜಯಲಕ್ಷ್ಮಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved