- Home
- Entertainment
- TV Talk
- ಬಿಗ್ ಬಾಸ್ ಮನೆಯಲ್ಲಿ ಹೊಡೆದಾಡಿ ಅರ್ಧದಿಂದಲೇ ಗೆಟೌಟ್ ಆದ ಸೆಲೆಬ್ರೆಟಿಸ್, ಕನ್ನಡದಲ್ಲೇ ಗರಿಷ್ಠ?
ಬಿಗ್ ಬಾಸ್ ಮನೆಯಲ್ಲಿ ಹೊಡೆದಾಡಿ ಅರ್ಧದಿಂದಲೇ ಗೆಟೌಟ್ ಆದ ಸೆಲೆಬ್ರೆಟಿಸ್, ಕನ್ನಡದಲ್ಲೇ ಗರಿಷ್ಠ?
ಬಿಗ್ ಬಾಸ್ ಮನೆಯಲ್ಲಿ ಹೊಡೆದಾಡಿ ಅರ್ಧದಿಂದಲೇ ಗೆಟೌಟ್ ಆದ ಸೆಲೆಬ್ರೆಟಿಸ್, ಕನ್ನಡದಲ್ಲೇ ಗರಿಷ್ಠ?, ಕನ್ನಡ ಬಿಗ್ ಬಾಸ್ ಮನೆಯೊಳಗೆ ಯಾವೆಲ್ಲಾ ಸ್ಪರ್ಧಿಗಳು ಜಟಾಪಟಿ ಮಾಡಿ ಮನೆಯಿಂದ ಹೊರಬಿದ್ದಿದ್ದಾರೆ. ಇಲ್ಲಿದೆ ಲಿಸ್ಟ್.

ಸೆ.28ರಿಂದ ಕನ್ನಡ ಬಿಗ್ ಬಾಸ್ ಆರಂಭ, ವಿವಾದಿತ ಸೆಲೆಬ್ರೆಟೀಸ್ ಯಾರು?
ಸೆ.28ರಿಂದ ಕನ್ನಡ ಬಿಗ್ ಬಾಸ್ ಆರಂಭ, ವಿವಾದಿತ ಸೆಲೆಬ್ರೆಟೀಸ್ ಯಾರು?
ಕನ್ನಡ ಬಿಗ್ ಬಾಸ್ ಶೋ ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ. 12ನೇ ಆವೃತ್ತಿಯ ಬಿಗ್ ಬಾಸ್ ಶೋ ಪ್ರತಿ ವರ್ಷ ಭಾರಿ ಕುತೂಹಲ, ಹಲವು ಹೈಡ್ರಾಮಗಳಿಂದ ಸುದ್ದಿಯಾಗುತ್ತದೆ. ವಿವಾದಿತರಿಗೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಅತೀ ಸುಲಭ ಅನ್ನೋ ಮಾತುಗಳೂ ಇವೆ. ಈ ಬಾರಿ ಈ ರೀತಿಯ ವಿವಾದಿತ ಸೆಲೆಬ್ರೆಟಿ ಯಾರಿದ್ದಾರೆ ಅನ್ನೋ ಚರ್ಚಗಳು ನಡೆಯುತ್ತಿದೆ. ಸೆಪ್ಟೆಂಬರ್ 28ರಿಂದ ಕನ್ನಡ ಬಿಗ್ ಬಾಸ್ ಆರಂಭಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಈ ಹಿಂದಿನ ಬಾಗ್ ಬಾಸ್ ಆವೃತ್ತಿಗಳಲ್ಲಿ ಶೋ ಅರ್ಧದಿಂದ ಮನೆಯಿಂದ ಹೊರಹಾಕಿದ ಸ್ಪರ್ಧಿಗಳ ಕುರಿತು ಚರ್ಚೆ ನಡೆಯುತ್ತಿದೆ.
ಬಿಗ್ ಬಾಸ್ ಹೈಡ್ರಾಮ
ಬಿಗ್ ಬಾಸ್ ಹೈಡ್ರಾಮ
ಕಳೆದ 11 ಆವೃತ್ತಿಗಳಲ್ಲಿ ಹಲವು ಹೈಡ್ರಾಮಗಳು, ಜಟಾಪಟಿಗಳು ನಡೆದಿದೆ. ಮೆಗಾ ಟ್ವಿಸ್ಟ್ ಸೇರಿದಂತೆ ಹಲವು ವಿದ್ಯಮಾನಗಳು ನಡೆದಿದೆ. ಇದರ ನಡುವೆ ಮನೆಯೊಳಗೆ ಹಲ್ಲೆ, ಜಟಾಪಟಿ, ಅವಾಚ್ಯಶಬ್ದಗಳ ಬಳಕೆ, ನಿಂದನೆ ಸೇರಿದಂತೆ ತೀವ್ರ ಬಿರುಸಿನ ಘಟನೆಗಳು ನಡೆದಿದೆ. ಹೀಗೆ ಬಿಗ್ ಬಾಸ್ ನಿಯಮ ಉಲ್ಲಂಘಿಸಿ, ಎಲ್ಲರ ಕೆಂಗಣ್ಣಿಗೆ ಗುರಿಯಾದ ಸ್ಪರ್ಧಿಗಳನ್ನುು ಮನಯಿಂದ ಹೊರದಬ್ಬಿದ ಘಟನೆಗಳೂ ನಡೆದಿದೆ. ಕನ್ನಡ ಬಿಗ್ ಬಾಸ್ ಆವೃತ್ತಿಗಳಲ್ಲಿ ಈ ಘಟನೆಗಳು ಸಾಕಷ್ಟು ನಡೆದಿದೆ.
ಹುಚ್ಚ ವೆಂಕಟ್
ಹುಚ್ಚ ವೆಂಕಟ್
ಹುಚ್ಚ ವೆಂಕಟ್ ಬಿಸ್ ಬಾಸ್ ಮೂಲಕ ಭಾರಿ ಕೋಲಾಹಲ ಸೃಷ್ಟಿಸಿದ್ದರು. ಮೂರನೇ ಆವೃತ್ತಿಯಲ್ಲಿ ಘಟಾನುಘಟಿ ಸ್ಪರ್ಧಿಗಳ ಜೊತೆಗೆ ಹುಟ್ಟ ವೆಂಕಟ್ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಕಿಚ್ಚ ಸುದೀಪ್ ಅವರ ವಾರದ ಕತೆ ನಡೆಸುತ್ತಿದ್ದ ವೇಳೆಯೇ ಸಹ ಸ್ಪರ್ಧಿ ರವಿ ಮೂರುರ್ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದರು. ನಿಯಮ ಉಲ್ಲಂಘಿಸಿದ ಹುಚ್ಚ ವೆಂಕಟ್‌ನನ್ನು ಬಿಗ್ ಬಾಸ್ ಮನೆಯಿಂದ ಹೊರದಬ್ಬಲಾಗಿತ್ತು.
ಸಂಯುಕ್ತಾ ಹೆಗಡೆ
ಸಂಯುಕ್ತಾ ಹೆಗಡೆ
ಬಿಗ್ ಬಾಸ್ ಮನೆಯಲ್ಲಿ ಭಾರಿ ವಿವಾದ ಸೃಷ್ಟಿಸಿದ ಸ್ಪರ್ಧಿಗಳ ಪೈಕಿ ನಟಿ ಸಂಯುಕ್ತ ಹೆಗಡೆ ಕೂಡ ಒಬ್ಬರು. ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂಯುಕ್ತ ಹೆಗಡೆಯನ್ನೂ ಮನೆಯಿಂದ ಹೊರಹಾಕಲಾಗಿತ್ತು. ಸಂಯುಕ್ತ ಹೆಗಡೆ ಕೂಡ ಭಾರಿ ಕೋಲಾಹಲ ಸೃಷ್ಟಿಸಿದ್ದರು.
ರಂಜಿತ್ ಕುಮಾರ್
ರಂಜಿತ್ ಕುಮಾರ್
ಬಿಗ್ ಬಾಸ್ 11ನೇ ಆವೃತ್ತಿ ಕೂಡ ಭಾರಿ ಕುತೂಹಲ ಕೆರಳಿಸಿತ್ತು. ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿದ್ದ ಸ್ಪರ್ಧಿ ರಂಜಿತ್ ಕುಮಾರ್ ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರಹೋಗಬೇಕಾಯಿತು. ರಂಜಿತ್ ಹಾಗೂ ಲಾಯರ್ ಜಗದೀಶ್ ಹೊಡೆದಾಟದ ವಿಡಿಯೋಗಳು ಭಾರಿ ವಿವಾದ ಸೃಷ್ಟಿಸಿತ್ತು.
ಲಾಯರ್ ಜಗದೀಶ್ ಕುಮಾರ್
ಲಾಯರ್ ಜಗದೀಶ್ ಕುಮಾರ್
ಇತ್ತ ರಂಜಿತ್ ಜೊತೆ ಜಗಳವಾಜಿದ್ದ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಮಹಿಳಾ ಸ್ಪರ್ಧಿಗಳಿಗೆ ನಿಂದನೆ, ಎಲ್ಲೆ ಮೀರಿತ ಮಾತುಗಳಿಂದ ಲಾಯರ್ ಜಗದೀಶ್ ಕೂಡ ಬಿಗ್ ಬಾಸ್ ಮನೆಯಿಂದ ಹೊರಹಾಕಲ್ಪಟ್ಟಿದ್ದಾರೆ