- Home
- Entertainment
- TV Talk
- Bigg Boss Kannada 12: ಅವರಿಬ್ಬರಿಂದಲೇ ಗಂಡನ ಆಟಕ್ಕೆ ಬ್ರೇಕ್ ಬಿದ್ದಿತ್ತು ಎಂದ ಕಾಕ್ರೋಚ್ ಸುಧಿ ಪತ್ನಿ
Bigg Boss Kannada 12: ಅವರಿಬ್ಬರಿಂದಲೇ ಗಂಡನ ಆಟಕ್ಕೆ ಬ್ರೇಕ್ ಬಿದ್ದಿತ್ತು ಎಂದ ಕಾಕ್ರೋಚ್ ಸುಧಿ ಪತ್ನಿ
ಈ ವಾರ ಬಿಗ್‌ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಹೊರಬಂದಿದ್ದಾರೆ. ಅವರ ಪತ್ನಿಯ ಪ್ರಕಾರ, ಜಾನ್ವಿ ಮತ್ತು ಅಶ್ವಿನಿ ಗೌಡ ಅವರೊಂದಿಗಿನ ಒಡನಾಟವೇ ಸುಧಿಯವರ ಎಲಿಮಿನೇಷನ್‌ಗೆ ಕಾರಣವಾಯಿತು. ಸುಧಿ ಇನ್ನಷ್ಟು ಚೆನ್ನಾಗಿ ಆಡಬೇಕಿತ್ತು ಎಂದು ಅವರ ಪತ್ನಿ ಅಭಿಪ್ರಾಯಪಟ್ಟಿದ್ದಾರೆ.

ಕಾಕ್ರೋಚ್ ಸುಧಿ
ಈ ವಾರ ನಟ ಕಾಕ್ರೋಚ್ ಸುಧಿ ಮನೆಯಿಂದ ಹೊರಗೆ ಬಂದಿದ್ದು, ಪತಿ ಇನ್ನು ಚೆನ್ನಾಗಿ ಎಲ್ಲರೊಂದಿಗೆ ಬೆರೆತು ಆಟವಾಡಬೇಕಿತ್ತು ಎಂದು ಸುಧಿ ಅವರ ಪತ್ನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸುಧಿ ಮನೆಯಿಂದ ಹೊರಗೆ ಬರಲು ಇಬ್ಬರು ಮಹಿಳಾ ಸ್ಪರ್ಧಿಗಳು ಕಾರಣ ಎಂದು ಹೇಳಿದ್ದಾರೆ. ಕಾಕ್ರೋಚ್ ಸುಧಿ ಹೇಳಿದ ಆ ಇಬ್ಬರು ಸ್ಪರ್ಧಿಗಳು ಯಾರು ಎಂಬುದನ್ನು ನೋಡೋಣ ಬನ್ನಿ.
ಜಾನ್ವಿ ಅಸಮಾಧಾನ
ಭಾನುವಾರ ಕಾಕ್ರೋಚ್ ಸುಧಿ, ರಘು, ರಿಷಾ ಮತ್ತು ಜಾನ್ವಿ ಮುಖ್ಯದ್ವಾರಕ್ಕೆ ಬಂದು ನಿಂತಿದ್ದರು. ಅಂತಿಮವಾಗಿ ಸುಧಿ ಔಟ್ ಆಗಿ, ಇನ್ನುಳಿದ ಮೂವರು ಸೇವ್ ಆಗಿದ್ದರು. ಕಾಕ್ರೋಚ್ ಸುಧಿ ಮನೆಯಿಂದ ಹೊರಗೆ ಹೋಗಿದ್ದಕ್ಕೆ ಜಾನ್ವಿ ಮಕ್ಕಳಂತೆ ಕಣ್ಣೀರು ಹಾಕಿದ್ದರು. ಒಬ್ಬರ ಹಠದಿಂದಾಗಿ ಸುಧಿ ಔಟ್ ಆದ್ರು ಅಂತ ರಾಶಿಕಾ ವಿರುದ್ಧ ಜಾನ್ವಿ ಅಸಮಾಧಾನ ಹೊರಹಾಕಿದರು.
ಕಾಕ್ರೋಚ್ ಸುಧಿ ಪತ್ನಿ
ಬಿಗ್‌ಬಾಸ್ ನಿರೂಪಕ ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ಕಾಕ್ರೋಚ್ ಸುಧಿ ಮನೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಮಾತನಾಡಿದ ಕಾಕ್ರೋಚ್ ಸುಧಿ ಪತ್ನಿ, ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಲ್ಲಿ ಹೆಚ್ಚು ಸಮಯ ಕಳೆದರು. ಇದು ಅವರಿಗೆ ನೆಗೆಟಿವ್ ಆಯ್ತು ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಅಶ್ವಿನಿ ಗೌಡ ಮತ್ತು ಜಾನ್ವಿ ಅವರತ್ತ ಬೆರಳು ತೋರಿಸಿದರು.
ಇನ್ನಷ್ಟು ಎಫರ್ಟ್ ಹಾಕಿ ಆಡಬೇಕಿತ್ತು
ಪತಿ ಸುಧಿ ಅವರು ಇನ್ನಷ್ಟು ಎಫರ್ಟ್ ಹಾಕಿ ತಮ್ಮ ಆಟವನ್ನು ಆಡಬೇಕಿತ್ತು. ಅವರಲ್ಲಿ ಇನ್ನು ಹೆಚ್ಚು ಸಾಮರ್ಥ್ಯವಿತ್ತು. ಅಶ್ವಿನಿ ಗೌಡ ಮತ್ತು ಜಾನ್ವಿ ಗುಂಪಿನಿಂದ ಹೊರಗೆ ಬಂದು ಆಟ ಆಡಬೇಕಿತ್ತು. ಆ ಗುಂಪಿನಿಂದ ಹೊರ ಬಂದು ಆಟವಾಡಿದ್ರೆ ಇನ್ನೊಂದಿಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿರುತ್ತಿತ್ತು ಎಂದು ಸುಧಿ ಅವರ ಪತ್ನಿ ಹೇಳಿದರು.
ಇದನ್ನೂ ಓದಿ: BBK 12: ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡಗೆ ಕಠಿಣ ಶಿಕ್ಷೆ; ಕಾಲ್ಮೇಲೆ ಕಾಲು ಹಾಕಿ ಕುಳಿತ ಗಿಲ್ಲಿ ನಟ
ನಾಮಿನೇಟ್ ಆಗಿದ್ದು ಹೇಗೆ?
ಈ ಹಿಂದಿನ ಕ್ಯಾಪ್ಟನ್ ಮಾಳು ಅವರು ನೇರವಾಗಿ ಕಾಕ್ರೋಚ್ ಸುಧಿ ಅವರನ್ನು ನಾಮಿನೇಟ್ ಮಾಡಿದ್ದರು. ನಂತರ ಆಟದ ಪ್ರಕ್ರಿಯೆಯಲ್ಲಿ ರಕ್ಷಿತಾ ಶೆಟ್ಟಿಯಿಂದಾಗಿ ಸುಧಿ ಸೇಫ್ ಆಗಿದ್ದರು. ಮತ್ತೆ ಬದಲಾದ ಆಟದಿಂದಾಗಿ ಮತ್ತೆ ಕಾಕ್ರೋಚ್ ಸುಧಿ ನಾಮಿನೇಟ್ ಆಗಿದ್ದರು. ಈ ವಾರ ರಘು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇಂದಿನ ಪ್ರೋಮೋದಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭಗೊಂಡಿರೋದನ್ನು ತೋರಿಸಲಾಗಿದೆ.
ಇದನ್ನೂ ಓದಿ: BBK 12: ಹೊರಗೆ ಬನ್ನಿ ಎಲ್ಲರೂ ಸಿಗೋಣ: ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟನ ವಿದಾಯದ ಭಾಷಣ