BBK11: ನಾಯಿತರ ನಿತ್ಕೊಂಡಿರ್ತನಲ್ಲ, ನೀವು ಇನ್ಮುಂದೆ ನಿಂತೇ ಇರಿ ಕಿಚ್ಚನ ಕ್ಲಾಸ್‌ಗೆ ಬೆಚ್ಚಿದ ಮನೆ
ಬಿಗ್‌ಬಾಸ್ ಸೀಸನ್ 11ರಲ್ಲಿ ಅಹಂನಲ್ಲಿ ಕೂರಲುಬಿಟ್ಟು, ನಾಯಿತರ ನಿತ್ಕೊಂಡಿರ್ತನಲ್ಲ, ನೀವು ಇನ್ನು ಮುಂದೆ ನಿಂತುಕೊಂಡೇ ಇರಿ: ಕಿಚ್ಚ ಸುದೀಪ್ ಕೆಂಡಾಮಂಡಲವಾಗಿದ್ದಾರೆ. ಶೋಭಾ ಅವರನ್ನು ಹೊರ ಕಳುಹಿಸಿದ್ದು ತಮ್ಮ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಗ್‌ಬಾಸ್ ಸೀಸನ್ 11ರ ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಮನೆಯವರಿಗೆ ನಿರೂಪಕ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ತ್ರಿವಿಕ್ರಂ ಮತ್ತು ಗೌತಮಿ ಅವರಿಗೆ ತೆಗೆದುಕೊಂಡ ಕ್ಲಾಸ್ ಮಾತ್ರ ಮನೆಯ ಇತರರಿಗೂ ಬೆವರು ತರಿಸಿದೆ.
ಕಳೆದವಾರ ಮನೆಯಿಂದ ಶೋಭಾ ಶೆಟ್ಟಿ ಹೊರಹೋಗಿದ್ದ ಶಿಶಿರ್ ಅವರನ್ನು ಉಳಿಸೋಕೆ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ತಾವಾಗಿ ಹೊರಬಂದರು ಎಂಬ ಅರ್ಥದಲ್ಲಿ ತ್ರಿವಿಕ್ರಂ ಅವರು ಗೌತಮಿ ಅವರ ಬಳಿ ಮಾತನಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು.
ಹೀಗಾಗಿ ತ್ರಿವಿಕ್ರಂ ತುಂಬಾನೇ ಆಪ್ತ ಆದರೂ ಅವೆಲ್ಲವನ್ನು ಕ್ಯಾರೇ ಮಾಡದೆ ಬೆವರಿಸಿದ್ದಾರೆ ಕಿಚ್ಚ. ಶಿಶಿರ್ನ ಸೇವ್ ಮಾಡೋಕೆ ಶೋಭಾ ಶೆಟ್ಟಿ ಹೋಗಿಲ್ಲ. ಅವರು ಹೇಗೆ ಹೋದ್ರು ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಅವರಿಗೆ 45 ನಿಮಿಷ ಮಾತನಾಡಿ ಮನ ಒಲಿಸಿದೆ. ಆ ಬಳಿಕ ಮತ್ತೆ ಹೋಗುತ್ತೇನೆ ಎಂದರು. ಅವರನ್ನು ಹೊರಕ್ಕೆ ಕಳಿಸುವ ನಿರ್ಧಾರ ತೆಗೆದುಕೊಂಡಿದ್ದು ಬಿಗ್ ಬಾಸ್ ಅಲ್ಲ, ನಾನು’
ನಾನು ಅಷ್ಟೊಂದು ನಿಂತುಕೊಂಡು ಶೋಭಾ ಅವರತ್ರ ಮಾತಾಡಿ ಆಗಿದೆ. ಎಷ್ಟು ಸಲ ಕೇಳಿದ್ದು ನಾನು. ಈಗ ಒಂದು ತೀರ್ಮಾನ ಮಾಡುವ, ಇನ್ಮೇಲೆ ನಾನು ಎಷ್ಟು ಹೊತ್ತು ವೇದಿಕೆಯಲ್ಲಿ ನಿಲ್ಲುತ್ತೇನೋ ದಯವಿಟ್ಟು ಅಷ್ಟೊತ್ತು ನೀವೆಲ್ಲ ನಿಂತುಕೊಂಡೇ ಮಾತನಾಡಿ. ಇನ್ಮೇಲೆ ಯಾರು ಕುಳಿತುಕೊಳ್ಳಬೇಡಿ. ಶೋ ನಡೆಯೋ ತನಕ ಇವತ್ತಿಂದ ಸಂಡೇವರೆಗೂ ನಿಂತುಕೊಂಡೇ ಮಾತನಾಡಿ. ನಿಂತುಕೊಂಡು ಮಾತನಾಡುವ ನೋವು ನಿಮಗೆಲ್ಲರಿಗೂ ಅರ್ಥ ಆಗಬೇಕು. ಇಲ್ಲಿ ಕೆಲವರು ಇದಕ್ಕೆ ಸೂಕ್ತರಲ್ಲ. ನಾನು ಇದಕ್ಕೆ ಕ್ಷಮೆ ಕೇಳುತ್ತೇನೆ.
ನನ್ನ ಜೀವನದಲ್ಲಿ ಯಾರೇ ಆಗಲಿ, ಜೀವನದಲ್ಲಿ ಒಪ್ಪಿಕೊಂಡ ಮೇಲೆ ನಾವು ಅವರಿಗೆ ಹೇಳೋದೆ ತಲೆ ಎತ್ತಿ ನಡೆ ಅಂತ. ತಲೆ ತಗ್ಗಿಸಿ ಅಂತ ನಾವು ಯಾರಿಗೂ ಹೇಳಿ ಕೊಟ್ಟಿಲ್ಲ. ಆ ಆಸೆಗಳು ನಮಗಿಲ್ಲ. ಇಲ್ಲಿ ಬಹುತೇಕರಿಗಿದೆ. ಯಾಕೆ ಕಳುಹಿಸಿದ್ದೇವೆ ಎಂಬ ಬೇಸಿಕ್ ಜ್ಞಾನ ನಿಮಗಿಲ್ಲ. ಆ ಹುಡುಗಿ ಶೋ ಬಿಟ್ಟು ಹೋಗಬೇಕಾದರೆ. ಯಾವ ಪರಿಸ್ಥಿತಿಯಲ್ಲಿ ಈ ಇಬ್ಬರನ್ನು (ಶಿಶಿರ್ , ಐಶ್ವರ್ಯಾ) ಬಿಟ್ಟು ಹೋದ್ರು ಅಂದ್ರೆ, ಇವರಿಬ್ಬರು ಇರೋತನಕ ಇದನ್ನು ಎತ್ತಿಕೊಂಡು ಇರಬೇಕು.
ಎರಡು ವೈಲ್ಡ್ ಕಾರ್ಡ್ ಎಂಟ್ರಿ ಬಂದಿದ್ದಾರೆ. ಒಬ್ಬರು ನಿಂತುಕೊಂಡು ಆಟ ಆಡ್ತಿಲ್ವಾ? ಸಾಬೀತು ಮಾಡ್ತಿಲ್ವಾ? ಅವರು ಎಷ್ಟು ಚೆನ್ನಾಗಿ ಆಡುತ್ತಿದ್ದಾರೆ ಎಂಬುದು ನಿಮಗೆ ಕಾಣಿಸ್ತಿಲ್ವಾ? ನಿಮಗೆ ಆಟದ ವೈಖರಿ ಚೇಂಜ್ ಆಗಿರುವುದು ಚುಚ್ಚುತ್ತಿಲ್ವಾ? ಅದೇ ವೈಲ್ಡ್ ಕಾರ್ಡ್ ಎಂಟ್ರಿ ಜೊತೆಗೆ ಬಂದಿರುವವರು ಇಟರೆಸ್ಟ್ ಇಲ್ಲದೆ ಹೋಗಬೇಕು ಅಂತನೂ ಹೇಳುತ್ತಿಲ್ಲ. ಇದು ಯಾವು ಥರಹದ ಟಾರ್ಚರ್? ಎಂದು ಶೋಭಾ ಶೆಟ್ಟಿಗೆ ಟಾಂಟ್ ಕೊಟ್ಟಿದ್ದಾರೆ ಕಿಚ್ಚ.
ಈ ಚಿಕ್ಕ ವಿಚಾರ ನನಗೆ ಅರ್ಥವಾಗುತ್ತಿಲ್ಲ ಅನ್ನುವುದಾದರೆ ಪ್ರತೀ ಶನಿವಾರ ಒಬ್ಬರ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಆಗುತ್ತಿರಲಿಲ್ಲ ನನಗೆ. 10 ವರ್ಷ 11 ನೇ ಸೀಸನ್ ಆಗುತ್ತಿರಲಿಲ್ಲ. ಕಾಲು ನೋವು ಅಂತ ಇರುವವನಲ್ಲ. 10 ವರ್ಷ ಬಿಬಿಕೆ ನಡೆಸಿಕೊಟ್ಟವನಿಗೆ ನಿಂತುಕೊಳ್ಳುವ 10 ನಿಮಿಷ ದೊಡ್ಡದಲ್ಲ ಎಂದರು ಕಿಚ್ಚ.
ಇದು ನಾನು ತೆಗೆದುಕೊಂಡ ಬೋಲ್ಡ್ ನಿರ್ಧಾರ ಹೊರತು ಬಿಗ್‌ಬಾಸ್ ದು ಕೂಡ ಅಲ್ಲ. ಶೋಭಾ ಶೆಟ್ಟಿ ಅವರನ್ನು ಹೊರ ಕಳಿಸಿದ್ದು ನನ್ನ ನಿರ್ಧಾರ ಎಂದು ಕಿಚ್ಚ ಮನೆಯವರಿಗೆ ಅರ್ಥ ಮಾಡಿಸಿದರು. ಇಷ್ಟೆಲ್ಲ ಆದ ಬಳಿಕ ಎಲ್ಲಾ ಸ್ಪರ್ಧಿಗಳ ವಿರುದ್ಧ ಸಿಟ್ಟಾಗಿ ಕ್ಷಮೆ ಕೇಳಿದ ಬಳಿಕ ಕೂರಿಸಿದರು.
ಶೋಭಾ ಅವರಿಗೆ ನಿರಂತರವಾಗಿ ಬಿಗ್‌ಬಾಸ್ ಶೋ ಅಗತ್ಯವನ್ನು ಹೇಳಿ ಸುದೀಪ್‌ಗಡ ಸುಸ್ತಾಗಿತ್ತು. ಬೆನ್ನು ನೋವು ಬಂದಿತ್ತು. ಬರೋಬ್ಬರಿ 45 ನಿಮಿಷಗಳ ಕಾಲ ಶೋಭಾ ಒಬ್ಬರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಇದರಿಂದ ಅವರು ಸುಸ್ತಾದರು. ಅಂದು ಸುದೀಪ್ ಅವರ ತಾಳ್ಮೆಯ ಕಟ್ಟೆ ಒಡೆದು ಹೋಗಿತ್ತು. ಪದೇ ಪದೇ ಶೋಭಾ ಕಿರಿಕಿರಿ ಮಾಡಿದ್ದಕ್ಕೆ ಅವರನ್ನು ಹೊರಕ್ಕೆ ಕಳುಹಿಸಿದರು.