- Home
- Entertainment
- TV Talk
- 'ನಿಮ್ಮ ಅನುಮತಿ ನನಗೆ ಬೇಡ' ಎಂದು ಬೋಲ್ಡ್ ಫೋಟೋ ಶೇರ್ ಮಾಡಿದ ಕನ್ನಡ ಬಿಗ್ ಬಾಸ್ ಇಶಾನಿ!
'ನಿಮ್ಮ ಅನುಮತಿ ನನಗೆ ಬೇಡ' ಎಂದು ಬೋಲ್ಡ್ ಫೋಟೋ ಶೇರ್ ಮಾಡಿದ ಕನ್ನಡ ಬಿಗ್ ಬಾಸ್ ಇಶಾನಿ!
'ಬಿಗ್ ಬಾಸ್ ಕನ್ನಡ ಸೀಸನ್ 10' ಶೋ ಇಶಾನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಇಶಾನಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇವರು ಬೆಳೆದಿದ್ದೆಲ್ಲವೂ ದುಬೈನಲ್ಲಿ ಎಂದು ಹೇಳಲಾಗಿದೆ.
ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಇಶಾನಿ ಅವರಿಗೆ ಅಷಾಗಿ ಕನ್ನಡ ಮಾತಾಡೋಕೆ ಬರುತ್ತಿರಲಿಲ್ಲ. ಇಂಗ್ಲಿಷ್ ಪದಬಳಕೆ ಜಾಸ್ತಿ ಮಾಡಿದ್ದರು.
ಇಶಾನಿ ಅವರು ಎಲ್ಲೋ ಗೋಜಪ್ಪ ಎಂದು ಹಾಡು ಹಾಡಿ ದೊಡ್ಮನೆಯೊಳಗಡೆಯೇ ಫುಲ್ ಟ್ರೋಲ್ ಆಗಿದ್ದರು. ಇನ್ನು ಹೊರಗಡೆ ಕೇಳಬೇಕೆ?
ಡ್ರೋನ್ ಪ್ರತಾಪ್ ಅವರನ್ನು ದೂರಿದ್ದಕ್ಕೆ, ದ್ವೇಷಿಸಿದ ಪ್ರಯುಕ್ತ ಬಿಗ್ ಬಾಸ್ ಸ್ಪರ್ಧಿಗಳ ದ್ವೇಷವನ್ನು ಕಟ್ಟಿಕೊಳ್ಳಬೇಕಾಯ್ತು.
ಇಶಾನಿ ಅವರು ಎಲಿಮಿನೇಟ್ ಆದಾಗ ಮತ್ತೊಂದು ಅವಕಾಶ ಕೊಡಿ, ನಾನು ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ದಿನ ಇಬೇಕು ಎಂದು ಕಿಚ್ಚ ಸುದೀಪ್ ಬಳಿ ಗೋಳಾಡಿದ್ದರು.
ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಬಳಿಕ ಗಿಚ್ಚಿ ಗಿಲಿಗಿಲಿ ಶೋ ಒಪ್ಪಿಕೊಂಡಿದ್ದರು. ಆದರೂ ಕೂಡ ಈ ಶೋವನ್ನು ಅರ್ಧಕ್ಕೆ ಬಿಟ್ಟರು.
ಬಿಗ್ ಬಾಸ್ ಇಶಾನಿ ಅವರು ರ್ಯಾಪ್ ಹಾಡುಗಳನ್ನು ಮಾಡಿದ್ದರು. ಈಗಲೂ ಕೂಡ ರ್ಯಾಪ್ ಹಾಡುಗಳಿಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.
ಬಿಗ್ ಬಾಸ್ ಇಶಾನಿ ಅವರು ಅತಿ ಹೆಚ್ಚು ಕನ್ನಡ ಹಾಡುಗಳನ್ನು ಮಾಡುವ ಆಸೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿ ಹಾಡು ಕೊಡ್ತಾರೆ ಎಂದು ಕಾದು ನೋಡಬೇಕಿದೆ.