Teddy Bear ಜೊತೆ ಸ್ಮೈಲ್ ಪೋಸ್ ಕೊಟ್ಟ Sonu Gowda: ಏನವ್ವ.. ಚೆಡ್ಡಿ ಹರಿದು ಹೋಗಿದೆ ಎಂದ ಫ್ಯಾನ್ಸ್!
ಬಿಗ್ಬಾಸ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದ ಸೋನು ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಫೋಟೋಸ್ ಸಖತ್ ವೈರಲ್ ಆಗಿದೆ.
ಬಿಕಿನಿ ಬ್ಯೂಟಿ ಸೋನು ಗೌಡ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ವೆಕೇಷನ್, ಟ್ರಿಪ್ ಸೇರಿದಂತೆ ಹಲವಾರು ಕಂಟೆಂಟ್ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ನಟಿ ಸೆಲ್ಫಿ ಫೋಟೋಸ್ ಶೇರ್ ಮಾಡಿದ್ದಾರೆ.
ಟೆಡ್ಡಿ ಬೇರ್ ಜೊತೆ ಸೋನು ಫೋಟೋ ತೆಗೆಸಿಕೊಂಡು ಕರ್ಮದ ಬಗ್ಗೆ ಮಾತನಾಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲಲತಾಣದಲ್ಲಿ ವೈರಲ್ ಆಗಿದ್ದು, ಸೋನು ಗೌಡ ಹಿಗಂದಿದ್ದಾರೆ.
ರಿವೆಂಜ್ ತೆಗೆದುಕೊಳ್ಳುವುದಕ್ಕೆ ಸಮಯ ವ್ಯರ್ಥ ಮಾಡಬೇಡಿ. ನಿಮಗೆ ನೋವುಂಟು ಮಾಡಿದರೆ ಕರ್ಮವೇ ಅವರಿಗೆ ಉತ್ತರ ನೀಡುತ್ತದೆ ಎಂದು ಸೋನು ಗೌಡ ಕ್ಯಾಪ್ಶನ್ನಲ್ಲಿ ಬರೆದುಕೊಂಡಿದ್ದಾರೆ.
ಕಾಫಿ ಬಣ್ಣದ ಟೆಡ್ಡಿ ಬೇರ್ ಬಳಿ ಕುಳಿತ ನಟಿ ಫುಲ್ ಸ್ಮೈಲ್ ಕೊಟ್ಟಿದ್ದಾರೆ. ಬೇಬಿ ಪಿಂಕ್ ಕಲರ್ ಕ್ರಾಪ್ಟಾಪ್ ಧರಿಸಿಕೊಂಡು ಬ್ಲ್ಯಾಕ್ ಶಾರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ ಸೋನು ಗೌಡ.
ನಟಿಯ ಫೋಟೋಗಳಿಗೆ ಸಖತ್ ಲೈಕ್ಸ್ ಬಂದಿದೆ. ಅವರ ಫೋಟೋಸ್ ನೋಡಿ ನೆಟ್ಟಿಗರು ವ್ಯಾಪಕವಾಗಿ ಕಮೆಂಟ್ ಮಾಡುತ್ತಲೇ ಇದ್ದಾರೆ. ಅದರಲ್ಲಿ ಏನವ್ವ ಅದು ಕೆಳಗೆ ಎಲ್ಲ ಹರಿದು ಹೋಗಿದೆ ಚೆಡ್ಡಿ, ಯಪ್ಪೋ ಈ ಕಣ್ಣಿಂದ ಇನ್ನು ಏನ್ ಏನ್ ನೋಡ್ಬೇಕೋ ದೇವ್ರೇ, ಅಬ್ಬಬ್ಬಾ ಸಾರ್ಥಕ ಎಂದಿದ್ದಾರೆ.
ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದು, ಅವರು ಏನೇ ಮಾಡಿದರೂ ಸುದ್ದಿಯಾಗುತ್ತದೆ.
ಬಿಗ್ಬಾಸ್ ಖ್ಯಾತಿ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ಒಂದು ಲೀಕ್ ಆಗಿದ್ದೇ ಇದಕ್ಕೆಲ್ಲ ಕಾರಣ. ಅವರು ಫೋಟೋ, ವಿಡಿಯೋ, ರೀಲ್ಸ್ ಏನು ಕಂಡರೂ ಈಗ ನೆಟ್ಟಿಗರು ಟ್ರೋಲ್ ಮಾಡುತ್ತಾರೆ.