ಭಾರತಕ್ಕೆ ಮತ್ತೆ ಕೊರೋನಾ ಶಾಕ್, ಬಿಗ್ ಬಾಸ್ ಖ್ಯಾತಿಯ ಶಿಲ್ಪಾಗೆ ಕೋವಿಡ್ ಪಾಸಿಟೀವ್
ಎಲ್ಲವೂ ಸುಖಾಂತ್ಯ ಎಂದುಕೊಂಡಾಗಲೇ ಏಷ್ಯಾದಲ್ಲಿ ಕೋವಿಡ್ ಸ್ಪೋಟಗೊಂಡಿದೆ. ಹಾಂಕಾಂಗ್, ಚೀನಾ, ಸಿಂಗಾಪೂರ ಎಂತಾ ನಿಟ್ಟುಸಿರು ಬಿಟ್ಟಿದ್ದ ಭಾರತಕ್ಕೆ ಮತ್ತೆ ಕೋವಿಡ್ ಶಾಕ್ ಕೊಟ್ಟಿದೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಶಿಲ್ಪಾ ಶಿರೋಡ್ಕರ್‌ಗೆ ಕೋವಿಡ್ ಅಂಟಿಕೊಂಡಿದೆ.

ಏಷ್ಯಾದಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಸಿಂಗಾಪುರ, ಹಾಂಕಾಂಗ್, ಚೀನಾ, ಥಾಯ್ಲೆಂಡ್‌ಗಳಲ್ಲಿ ಕೋವಿಡ್ ಪ್ರಕರಗಳು ಹೆಚ್ಚಾಗುತ್ತಿದೆ. ಕೋವಿಡ್ ಇನ್ನೇನು ಸಂಪೂರ್ಣ ಅಂತ್ಯಗೊಂಡಿತು ಅನ್ನೋವಷ್ಟರಲ್ಲೇ ಇದೀಗ ಮತ್ತೆ ವಕ್ಕರಿಸಿದೆ. ಕೋವಿಡ್ 2 ಅಲೆಗಳ ಬಳಿಕ ಪ್ರತಿ ವರ್ಷ ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಅಷ್ಟೇ ಬೇಗದಲ್ಲಿ ಮಾಯವಾಗಿದೆ. ಕಳೆದೊಂದು ವರ್ಷದಿಂದ ಕೋವಿಡ್ ದೂರ ಸರಿದಿತ್ತು. ಹೀಗಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಆದರೆ ಏಷ್ಯಾದಲ್ಲಿ ಮತ್ತೆ ಕೋವಿಡ್ ಕಾಣಿಸಿಕೊಳ್ಳುವ ಮೂಲಕ ಆತಂಕ ಹೆಚ್ಚಿಸಿತು. ಇಷ್ಟಾದರೂ ಭಾರತಕ್ಕೆ ಯಾವುದೇ ಆತಂಕವಿರಲಿಲ್ಲ. ಇದೀಗ ಭಾರತದಲ್ಲಿ ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಇದರ ನಡುವೆ ಬಿಗ್ ಬಾಸ್ ಸ್ಪರ್ಧಿ ಶಿಲ್ಪಾ ಶಿರೋಡ್ಕರ್ ಕೋವಿಡ್ ವೈರಸ್ ಅಂಟಿಕೊಂಡಿದೆ.
ಬಿಗ್ ಬಾಸ್ 18ನೇ ಆವೃತ್ತಿಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ಶಿಲ್ಪಾ ಶಿರೋಡ್ಕರ್ ಇದೀಗ ಕ್ವಾರಂಟೈನ್ ಆಗಿದ್ದಾರೆ. ಕಳೆದ ಕೆಲ ದಿನಗಳಿಂದ ಜ್ವರ, ಶೀತ, ಕೆಮ್ಮುವಿನಿಂದ ಬಳಲಿದ್ದ ಶಿಲ್ಪಾ ಶಿರೋಡ್ಕರ್ ವೈದ್ಯರ ಸಂಪರ್ಕಿಸಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಆರೋಗ್ಯ ಸುಧಾರಿಸಿರಲಿಲ್ಲ. ದಿನ ಕಳೆದಂತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ವೈದ್ಯರ ಸೂಚನೆಯಂತೆ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಇದೀಗ ವರದಿ ಬಂದಿದ್ದು ಕೋವಿಡ್ ಪಾಸಿಟೀವ್ ದೃಢಪಟ್ಟಿದೆ.
ಕೋವಿಡ್ ವರದಿ ಬಂದ ಬೆನ್ನಲ್ಲೇ ಬಿಗ್ ಬಾಸ್ ಸ್ಪರ್ಧಿ ಶಿಲ್ಪಾ ಶಿರೋಡ್ಕರ್ ಐಸೋಲೇಶನ್ ಆಗಿದ್ದಾರೆ. ಇಷ್ಟೇ ಅಲ್ಲ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಪ್ರೀತಿಯ ಜನರೆ, ನನಗೆ ಕೋವಿಡ್ ವೈರಸ್ ಅಂಟಿಕೊಂಡಿದೆ. ದಯವಿಟ್ಟು ಎಲ್ಲರು ಜಾಗರೂಕರಾಗಿರಿ ಹಾಗೂ ಎಲ್ಲರೂ ಮಾಸ್ಕ್ ಧರಿಸಿ ಎಂದು ಶಿಲ್ಪಾ ಶಿರೋಡ್ಕರ್ ಮನವಿ ಮಾಡಿದ್ದಾರೆ. ಕೋವಿಡ್ ಪಾಸಿಟೀವ್ ಬಂದಿರುವ ಹಿನ್ನಲೆಯಲ್ಲಿ ಜನರಲ್ಲಿ ವಿಶೇಷ ಮನವಿ ಮಾಡಿರುವ ಶಿಲ್ಪಾ, ಆರೋಗ್ಯ ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ. ಇತ್ತ ಶಿಲ್ಪಾ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಭಾರತದಲ್ಲಿ ಕೋವಿಡ್ ಸ್ಫೋಟಗೊಂಡಿಲ್ಲ. ಅಲ್ಲೊಂದು ಇಲ್ಲೊಂದು ಕೋವಿಡ್ ಗುಣಲಕ್ಷಣಗಳು ವರದಿಯಾಗಿತ್ತು. ಆದರೆ ಶಿಲ್ಪಾ ಶಿರೋಡ್ಕರ್ ದೃಢಪಡಿಸುವ ಮೂಲಕ ಭಾರತದಲ್ಲಿ ಪ್ರಕರಣ ಹರಡುತ್ತಿದೆ ಅನ್ನೋದು ಸ್ಪಷ್ಟವಾಗಿದೆ. ಇದರಿಂದ ಭಾರತೀಯರಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ಗುಣಲಕ್ಷಣಗಳಿದ್ದಲ್ಲಿ ಪರೀಕ್ಷಿಸುವುದು ಉತ್ತಮ.
ಸಿಂಗಾಪುರದಲ್ಲಿ ಮೇ.03ರ ವರೆಗೆ 14,200 ಕೋವಿಡ್ ಪ್ರಕರಣ ದಾಖಲಾಗಿತ್ತು. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಹಾಂಕಾಂಗ್ ಕೂಡ ಕೋವಿಡ್ ಪ್ರಕರಣಗಳಿಂದ ಆಸ್ಪತ್ರೆಗಳು ತುಂಬಿದೆ. ಚೀನಾದ ಕೆಲ ಪ್ರಾಂತ್ಯಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಹಾಂಕಾಂಗ್‌ನಲ್ಲಿ ಮಾರ್ಚ್ ತಿಂಗಳಲ್ಲಿ ಶೇಕಡಾ 1.7 ರಷ್ಟಿದ್ದ ಕೋವಿಡ್ ಪ್ರಕರಣ ಇದೀಗ ಶೇಕಡಾ 11.4 ರಷ್ಟು ಏರಿಕೆಯಾಗಿದೆ. ಥಾಯ್ಲೆಂಡ್‌ನಲ್ಲೂ ಪ್ರಕರಣ ಸಂಖ್ಯೆ ಏರಿಕೆಯಾಗಿದೆ.
ಇದುವರೆಗೆ ಭಾರತಕ್ಕೆ ಆತಂಕ ಸೃಷ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆದರೆ ಮುಂಜಾಗ್ರತೆ ವಹಿಸುವುದು ಉತ್ತಮ. ಹೆಚ್ಚಿನ ಜನಸಂದಣಿ ಪ್ರದೇಶಗಳಿಂದ ದೂರವಿರುವುದು ಉತ್ತಮ. ಕೈಗಳನ್ನು ಶುಚಿಯಾಗಿಡುವುದು, ಮಾಸ್ಕ್ ಧರಿಸುವುದು ಉತ್ತಮ. ಮಳೆ ಕಾರಣದಿಂದ ಅತೀವ ಜಾಗೃತವಹಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.