- Home
- Entertainment
- TV Talk
- ರಜತ್, ವಿನಯ್ ಗೌಡ ಮತ್ತೆ ಅರೆಸ್ಟ್; ಮಚ್ಚು ಹಿಡಿದ ಬಿಗ್ ಬಾಸ್ ಆನೆಗಳಿಗೆ ಪರಪ್ಪನ ಅಗ್ರಹಾರವೇ ಮನೆ?
ರಜತ್, ವಿನಯ್ ಗೌಡ ಮತ್ತೆ ಅರೆಸ್ಟ್; ಮಚ್ಚು ಹಿಡಿದ ಬಿಗ್ ಬಾಸ್ ಆನೆಗಳಿಗೆ ಪರಪ್ಪನ ಅಗ್ರಹಾರವೇ ಮನೆ?
ಕಾಟೇರ ಸಿನಿಮಾ ಶೈಲಿಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ರಜತ್ ಕಿಶನ್ ಹಾಗೂ ವಿನಯ್ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಕಾಟೇರ ಸಿನಿಮಾ ಸ್ಟೈಲ್‌ನಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ರಜತ್ ಕಿಶನ್ ಹಾಗೂ ವಿನಯ್ ಗೌಡ ನಿನ್ನೆ ಅರೆಸ್ಟ್ ಆಗಿ ತಡರಾತ್ರಿ ವೇಳೆ ಮನೆಗೆ ಹೋಗಿದ್ದರು. ಇದೀಗ ವಾಪಸ್ ವಿಚಾರಣೆಗೆ ಬಂದಿದ್ದು, ಪೊಲೀಸರು ಅವರನ್ನು ಪುನಃ ಬಂಧನ ಮಾಡಿದ್ದಾರೆ. ಇದೀಗ ಇಬ್ಬರನ್ನು ಕೋರ್ಟ್ ಮುಂದೆ ಹಾಜರುಪಡಿಸಲು ಮುಂದಾಗಿದ್ದು, ಜೈಲು ಪಾಲಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಬೆಂಗಳೂರಿನ ನಾಗರಬಾವಿಯಲ್ಲಿ ಖಾಸಗಿ ಚಾನೆಲ್‌ನ ಕಾರ್ಯಕ್ರಮದ ವಿಡಿಯೋ ಶೂಟಿಂಗ್ ಮಾಡುವಾಗ ಬಳಕೆ ಮಾಡಿದ್ದ ಮಚ್ಚನ್ನು ಹಿಡಿದು ಸಾರ್ವಜನಿಕ ಸ್ಥಳಕ್ಕೆ ಬಂದು ರೀಲ್ಸ್ ಮಾಡುವುದಕ್ಕೆ ಬಳಕೆ ಮಾಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಬಳಕೆ ಮಾಡಿದ್ದಕ್ಕೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ವಿಚಾರಣೆಗೆ ಕರೆದ ಪೊಲೀಸರು ಅರೆಸ್ಟ್ ಮಾಡಿದ್ದರು.
ಈ ವೇಳೆ ತಡರಾತ್ರಿವರೆಗೂ ಪೊಲೀಸ್ ಠಾಣೆ ಸೆಲ್‌ನಲ್ಲಿ ಕೂರಿಸಿದ್ದಾಗ, ತಾವು ಪ್ಲಾಸ್ಟಿಕ್‌ನಿಂದ ಮಾಡಿದ ಮಚ್ಚು ಬಳಕೆ ಮಾಡಿದ್ದೇವೆಂದು ಒಂದು ಫೈಬರ್ ಮಚ್ಚು ತಂದುಕೊಟ್ಟು, ಪೊಲೀಸರಿಂದ ಬಿಡಿಸಿಕೊಂಡು ಹೋಗಿದ್ದರು.
ಇದನ್ನೂ ಓದಿ: ಡೆವಿಲ್ ಸಿನಿಮಾದ ನಾಯಕ ದರ್ಶನ್, ಖಳನಾಯಕ ವಿನಯ್ ಗೌಡಗೆ ರಿಯಲ್ ಡೆವಿಲ್ ಆದ ಎಸಿಪಿ ಚಂದನ್!
ಪೊಲೀಸರು ವಶಕ್ಕೆ ಪಡೆದ ಮಚ್ಚು ಹಾಗೂ ರೀಲ್ಸ್ ವಿಡಿಯೋದಲ್ಲಿ ಬಳಕೆ ಮಾಡಿದ ಮಚ್ಚು ಎರಡನ್ನೂ ಪರಿಶೀಲನೆ ಮಾಡಿದಾಗ ಎರಡಕ್ಕೂ ತಾಳೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಕ್ಷ್ಯನಾಶದ ಕೇಸ್ ಅಥವಾ ತನಿಖೆಯ ದಾರಿ ತಪ್ಪಿಸುವ ಕೃತ್ಯದ ಮೇಲೆ ಪುನಃ ಅವರ ಮೇಲೆ ಮತ್ತೊಂದು ಕೇಸ್ ದಾಖಲಿಸಿ ಬಂಧಿಸಲು ಪೊಲೀಸರು ತನಿಖೆ ಮುಂದುವರೆಸಿದ್ದರು.
ಇದರ ಬೆನ್ನಲ್ಲಿಯೇ ಇಬ್ಬರಿಗೂ ಪೊಲೀಸರು ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಕರೆದಿದ್ದಾರೆ. ಆದರೆ, ಇಬ್ಬರೂ ತಮ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿ ಆಗಿದ್ದರು. ಇಬ್ಬರ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ನಾಪತ್ತೆಯಾಗಿದ್ದ ಇಬ್ಬರನ್ನೂ ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಠಾಣೆಯ ಒಳಗೆ ಹೋಗುವಾಗ ಅದು ಸೆಟ್‌ನ ಪ್ರಾಪರ್ಟಿ ಎನ್ನುತ್ತಾ ಇಬ್ಬರೂ ಒಳಗೆ ಹೋಗಿದ್ದರು.
ಪೊಲೀಸ್ ಠಾಣೆಗೆ ಆಗಮಿಸಿದ ರಜತ್ ಹಾಗೂ ವಿನಯ್ ಗೌಡ ಅವರ ಧಿಮಾಕು ಮಾತ್ರ ಕಡಿಮೆ ಆಗಿರಲಿಲ್ಲ. ತಾವು ತಪ್ಪು ಮಾಡಿದ್ದಲ್ಲದೇ ಪೊಲೀಸ್ ಠಾಣೆಗೆ ಹಾಜರಾಗುವಾಗ ಕೈಯಲ್ಲಿ ಸಿಗರೇಟ್ ಸೇದುವ ಲೈಟರ್ ಹಿಡಿದು, ಶರ್ಟ್‌ನ ಮೂರು ಬಟನ್‌ಗಳನ್ನು ಬಿಚ್ಚಿಕೊಂಡು ಎದೆಯುಬ್ಬಿಸಿಕೊಂಡು ಹೋದ ರಜತ್ ಹಾಗೂ ವಿನಯ್ ಗೌಡನನ್ನು ಪೊಲೀಸರು ಪುನಃ ಬಂಧನ ಮಾಡಿದ್ದಾರೆ. ಇದೀಗ ಕೋರ್ಟ್ ಮುಂದೆ ಹಾಜರುಪಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕಾಟೇರನ ಮಚ್ಚು ಹಿಡಿದು ರೀಲ್ಸ್ ಮಾಡಿದ ರಜತ್, ವಿನಯ್ ರಕ್ಷಣೆಗೆ ಮುಂದಾದರೇ ಪೊಲೀಸರು! ನಕಲಿ ಮಚ್ಚು ಒಪ್ಪಿಕೊಂಡ ಖಾಕಿಪಡೆ!
ಸ್ಥಳ ಮಹಜರ್‌ಗೆ ಕರೆದೊಯ್ದ ಪೊಲೀಸರು: ವಿನಯ್ ಗೌಡ ಹಾಗೂ ರಜತ್ ನನ್ನ ವಶಕ್ಕೆ ಪಡೆದ ಪೊಲೀಸರು ಕೆಲವೇ ಕ್ಷಣಗಳಲ್ಲಿ ಅಕ್ಷಯ್ ಸ್ಟೋಡಿಯೋಗೆ ತೆರಳಲಿದ್ದಾರೆ. ವಿನಯ್ ಹಾಗೂ ರಜತ್ ಕರೆದೊಯ್ದು ಮಹಜರ್ ಮಾಡಲಿದ್ದಾರೆ. ರೀಲ್ಸ್ ಮಾಡಿದ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಲಿದ್ದು, ಈ ವೇಳೆ ರೀಲ್ಸ್ ಬಳಸಿದ ಮಚ್ಚು ಸಿಗದಿದ್ದರೆ ಬಂಧನ ಖಚಿತವಾಗಲಿದೆ. ರೀಲ್ಸ್ ಗೆ ಬಳಸಿದ್ದು ಕಬ್ಬಿಣದ ಮಚ್ಚಾಗಿದ್ದರೂ ಬಂಧನ ಫಿಕ್ಸ್ ಆಗಲಿದೆ. ಅಕ್ಷಯ್ ಸ್ಟೂಡಿಯೋದಲ್ಲಿ ಮಚ್ಚು ಇದೆ ಎಂದಿರುವ ವಿನಯ್ ಹಾಗೂ ರಜತ್. ಹೀಗಾಗಿ ಅಕ್ಷಯ್ ಸ್ಟೂಡಿಯೋಗೆ ಕರೆದೊಯ್ಯುತ್ತಿದ್ದಾರೆ.