MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss Ashwini Gowda: ನಟಿ ಅಶ್ವಿನಿ ಗೌಡ ಮಾನವೀಯತೆ, ದಾರಿ ತಪ್ಪಿದ ಅಜ್ಜಿಗೆ ಆಸರೆಯಾದ ಬಿಗ್ ಬಾಸ್ ಸ್ಪರ್ಧಿ!

Bigg Boss Ashwini Gowda: ನಟಿ ಅಶ್ವಿನಿ ಗೌಡ ಮಾನವೀಯತೆ, ದಾರಿ ತಪ್ಪಿದ ಅಜ್ಜಿಗೆ ಆಸರೆಯಾದ ಬಿಗ್ ಬಾಸ್ ಸ್ಪರ್ಧಿ!

ಬಿಗ್ ಬಾಸ್ ಖ್ಯಾತಿಯ ನಟಿ ಅಶ್ವಿನಿ ಗೌಡ ಅವರು ಬೆಂಗಳೂರಿನಲ್ಲಿ ದಾರಿ ತಪ್ಪಿದ ವೃದ್ಧೆಯೊಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ರಾತ್ರಿ ತಮ್ಮ ಮನೆಗೆ ಕರೆದೊಯ್ದು ಆರೈಕೆ ಮಾಡಿದ ನಂತರ, ಅಜ್ಜಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿ, ಅವರ ಕುಟುಂಬವನ್ನು ಪತ್ತೆಹಚ್ಚಲು ಸಹಾಯ ಕೋರಿದ್ದಾರೆ.

1 Min read
Author : Sathish Kumar KH
Published : Jun 19 2026, 05:46 PM IST
Share this Photo Gallery
  • FB
  • TW
  • Linkdin
  • Whatsapp
14
Image Credit : Instagram

ಬೆಂಗಳೂರು (ಜೂ.18): ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಅಶ್ವಿನಿ ಗೌಡ ಅವರು ಸಂಕಷ್ಟದಲ್ಲಿದ್ದ ವೃದ್ಧೆಯೊಬ್ಬರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದಾರಿ ತಪ್ಪಿ ಅಲೆದಾಡುತ್ತಿದ್ದ ಸುಮಾರು 80 ವರ್ಷದ ಅಜ್ಜಿಯನ್ನು ರಕ್ಷಿಸಿ, ಅವರಿಗೆ ಆಸರೆ ನೀಡಿ ಈಗ ಅವರ ಕುಟುಂಬವನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಾಯ ಕೋರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
Image Credit : colors kannada

ಘಟನೆಯ ವಿವರ:

ನಟಿ ಅಶ್ವಿನಿ ಗೌಡ ಅವರಿಗೆ ಬೆಂಗಳೂರಿನ ಜಗದೀಶ್ ನಗರದಲ್ಲಿ ನಿನ್ನೆ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಈ ಅಜ್ಜಿ ಒಂಟಿಯಾಗಿ ಸಿಕ್ಕಿದ್ದಾರೆ. ವಯೋಸಹಜವಾಗಿ ಅಜ್ಜಿಗೆ ಮಾತು ಸ್ಪಷ್ಟವಾಗಿ ಬರುತ್ತಿಲ್ಲ ಹಾಗೂ ಕಿವಿಯೂ ಸರಿಯಾಗಿ ಕೇಳಿಸುತ್ತಿಲ್ಲ. ರಾತ್ರಿಯ ಸಮಯದಲ್ಲಿ ಅಜ್ಜಿಯನ್ನು ರಸ್ತೆಯಲ್ಲಿ ಬಿಡುವುದು ಸುರಕ್ಷಿತವಲ್ಲ ಎಂದು ಭಾವಿಸಿದ ಅಶ್ವಿನಿ ಗೌಡ, ಅವರನ್ನು ತಮ್ಮ ಮನೆಗೆ ಕರೆದೊಯ್ದು ಊಟ ನೀಡಿ ರಾತ್ರಿಯಿಂದ ಆರೈಕೆ ಮಾಡಿದ್ದಾರೆ.

Related Articles

Related image1
Karnataka News Live: ಕರವೇ ನಾರಾಯಣ ಗೌಡ್ರ ಜನ್ಮದಿನಕ್ಕೆ ಬೆಳ್ಳಿ ಕತ್ತಿ ಗಿಫ್ಟ್‌ ಮಾಡಿದ ಬಿಗ್‌ಬಾಸ್‌ ಅಶ್ವಿನಿ ಗೌಡ
Related image2
Bigg Boss ಬಳಿಕದ ಯಾತನೆ, 40 ಸಾವಿರ ಕಾಪಿರೈಟ್ಸ್, 850 ಲಿಂಕ್ಸ್​- ಅಶ್ವಿನಿ ಗೌಡ ಶಾಕಿಂಗ್​ ವಿಷ್ಯ ರಿವೀಲ್​
34
Image Credit : colors kannada

ಕುಟುಂಬದ ಕುರಿತು ಅಸ್ಪಷ್ಟ ಮಾಹಿತಿ:

ಅಜ್ಜಿಯನ್ನು ವಿಚಾರಿಸಿದಾಗ ಅವರು ಕೆಲವು ಹೆಸರುಗಳನ್ನು ಹೇಳಿದ್ದಾರೆ. ತಮ್ಮ ಕುಟುಂಬದ ಸದಸ್ಯರ ಹೆಸರು ಹೇಳಲು ಅಜ್ಜಿ ತಡಬಡಿಸುತ್ತಿದ್ದಾರೆ. ಆದರೆ ಅವರಿಗೆ ತಮ್ಮ ಮನೆಯ ವಿಳಾಸ ಅಥವಾ ಫೋನ್ ನಂಬರ್ ನೆನಪಿಲ್ಲ. ಅಜ್ಜಿ ಕನ್ನಡ ಮಾತನಾಡುತ್ತಿದ್ದು, ಬೆಂಗಳೂರಿನವರೇ ಇರಬಹುದು ಎಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಅಶ್ವಿನಿ ಗೌಡ ಅವರು ಅಜ್ಜಿಯನ್ನು ಸುರಕ್ಷಿತವಾಗಿ ಸಮೀಪದ ಹೆಚ್‌ಎಎಲ್ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವೃದ್ಧೆಯ ಮಾಹಿತಿ ಪಡೆದುಕೊಂಡು ಅವರ ಸಂಬಂಧಿಕರ ಹುಡುಕಾಟ ಆರಂಭಿಸಿದ್ದಾರೆ.

44
Image Credit : Instagram

ಸಾರ್ವಜನಿಕರಲ್ಲಿ ಅಶ್ವಿನಿ ಗೌಡ ಮನವಿ:

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಜ್ಜಿಯ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿರುವ ಅಶ್ವಿನಿ ಗೌಡ, 'ದಯವಿಟ್ಟು ಯಾರಿಗಾದರೂ ಈ ಅಜ್ಜಿಯ ವಿಳಾಸ ಅಥವಾ ಅವರ ಕುಟುಂಬಸ್ಥರ ಸಂಪರ್ಕವಿದ್ದರೆ ನಮಗೆ ತಿಳಿಸಿ. ಅಜ್ಜಿಯನ್ನು ಅವರ ಕುಟುಂಬದವರ ಜೊತೆ ಸೇರಿಸಲು ನಿಮ್ಮ ಸಹಕಾರ ಅಗತ್ಯವಿದೆ. ನಿಮಗೆ ಮಾಹಿತಿ ತಿಳಿದಿದ್ದರೆ ಕೂಡಲೇ ಹೆಚ್‌ಎಎಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ' ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ತಮಗೆ ಸ್ಪಂದಿಸಿದ ಹೆಚ್‌ಎಎಲ್ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Ashwini Gowda (@ashwinigowda_actress)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬಿಗ್ ಬಾಸ್ ಕನ್ನಡ
ಅಶ್ವಿನಿ ಗೌಡ
ಬಿಗ್ ಬಾಸ್
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
ವೆಂಕಿ 'ಮೂಗನಲ್ಲ'.. ಮತ್ತೆ ಈಗ್ಯಾಕೆ ಮಾತು ಬರಲ್ಲ? ಫಾದರ್ ಹೇಳಿದನ್ನ ರಿವೀಲ್ ಮಾಡಿದ ಲಕ್ಷ್ಮೀ!
Recommended image2
ಚೈತ್ರಾ ಕುಂದಾಪುರ 'ನಾನು ನಿರ್ದೋಷಿ' ಭಾವುಕ ಪೋಸ್ಟ್! ಬಿಗ್ ಬಾಸ್ ಸ್ಪರ್ಧಿಗೆ ಕಾನೂನು ಹೋರಾಟದಲ್ಲಿ ಜಯ!
Recommended image3
Reels ಲೋಕದಲ್ಲಿ ಕಿಚ್ಚು ಹಚ್ಚಿದ ನಿವೇದಿತಾ ಗೌಡ-ಕಿಶನ್ ಜೋಡಿ: ವೈರಲ್ ಆಯ್ತು ರೊಮ್ಯಾಂಟಿಕ್ ಡ್ಯಾನ್ಸ್!
Related Stories
Recommended image1
Karnataka News Live: ಕರವೇ ನಾರಾಯಣ ಗೌಡ್ರ ಜನ್ಮದಿನಕ್ಕೆ ಬೆಳ್ಳಿ ಕತ್ತಿ ಗಿಫ್ಟ್‌ ಮಾಡಿದ ಬಿಗ್‌ಬಾಸ್‌ ಅಶ್ವಿನಿ ಗೌಡ
Recommended image2
Bigg Boss ಬಳಿಕದ ಯಾತನೆ, 40 ಸಾವಿರ ಕಾಪಿರೈಟ್ಸ್, 850 ಲಿಂಕ್ಸ್​- ಅಶ್ವಿನಿ ಗೌಡ ಶಾಕಿಂಗ್​ ವಿಷ್ಯ ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved