Bigg Boss ಸ್ಪರ್ಧಿ ಆಂಡ್ರೂ ಜಯಪಾಲ್ ಮದುವೆ; ನವೀನ್, ಅಕ್ಷತಾ ಭಾಗಿ!
ಬಿಗ್ ಬಾಸ್ ಸೀಸನ್ 6ರಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ ಸ್ಪರ್ಧಿ ಆಂಡ್ರೂ ಜಯಪಾಲ್ ಉರ್ಫ್ ಆಂಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಆಂಡ್ರೂ ಜಯಪಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅರೇಂಜ್ಡ್ ಮ್ಯಾರೇಜ್ ಇದಾಗಿದ್ದು ಬೆಂಗಳೂರಿನ ಚರ್ಚ್‌ವೊಂದರಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಮದುವೆಯಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಭಾಗಿಯಾಗಿದ್ದರು.
ಬಿಗ್ ಬಾಸ್ ಶೋ ನಂತರ ಲೈಮ್ ಲೈಟ್‌ನಿಂದ ದೂರ ಉಳಿದುಕೊಂಡಿದ್ದ ಆಂಡಿ ಮದುವೆ ಫೋಟೋವನ್ನು ಅಕ್ಷತಾ ಪಾಂಡವಪುರ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಚರ್ಚ್‌ನಲ್ಲಿ ಬೆಳಗ್ಗೆ ಮದುವೆ ನಡೆದಿದ್ದು ಸಂಜೆ ಅರತಕ್ಷತೆ ಕಾರ್ಯಕ್ರಮ ನಡೆದಿದೆ. ಸೆಲೆಬ್ರಿಟಿ ಸಿಂಗಲ್ ಆಂಟೋನು ದಸ್ಸನ್ ಹಾಜರಿದ್ದರು.
ಅಕ್ಷತಾ ಪಾಂಡವಪುರ ಅವರ ಜೊತೆ ಗಾಯಕ ನವೀನ್ ಸಜ್ಜು, ಒಗ್ಗರಣೆ ಮುರಳಿ ಮದುವೆಯಲ್ಲಿ ಭಾಗಿಯಾಗಿದ್ದರು. ಆಂಡಿ ಮದುವೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಆಂಡ್ 98 ದಿನಗಳ ಕಾಲವಿದ್ದರು. ಫಿನಾಲೆ ವೀಕ್‌ನ ಎಂಜಾಯ್ ಮಾಡಿ ನಾಲ್ಕನೇ ಸ್ಥಾನ ಪಡೆದುಕೊಂಡ್ಡರು. ದಿನವೂ ಒಂದೊಂದು ಜಗಳ ಮಾಡಿಕೊಂಡು ಸುದ್ದಿಯಲ್ಲಿದ್ದರು.