- Home
- Entertainment
- TV Talk
- 'ದರ್ಶನ್ ಜೊತೆ ಅಂದು ನಡೆದಿತ್ತು ವಿಚಿತ್ರ ಘಟನೆ' ಎನ್ನುತ್ತಲೇ Bigg Boss ಡಾಗ್ ಸತೀಶ್ ಅಚ್ಚರಿಯ ವಿಷ್ಯ ರಿವೀಲ್
'ದರ್ಶನ್ ಜೊತೆ ಅಂದು ನಡೆದಿತ್ತು ವಿಚಿತ್ರ ಘಟನೆ' ಎನ್ನುತ್ತಲೇ Bigg Boss ಡಾಗ್ ಸತೀಶ್ ಅಚ್ಚರಿಯ ವಿಷ್ಯ ರಿವೀಲ್
ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್, ಸಂದರ್ಶನವೊಂದರಲ್ಲಿ ನಟ ದರ್ಶನ್ ಕುರಿತು ಅಚ್ಚರಿಯ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಹಲವು ಬಾರಿ ಭೇಟಿಯಾದರೂ, ನಟ ದರ್ಶನ್ ಅವರು ತಮ್ಮೊಂದಿಗೆ ಮಾತ್ರ ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ್ದರು ಎಂದು ಸತೀಶ್ ಹೇಳಿದ್ದು, ಆ ಘಟನೆ ನಿಗೂಢ ಎಂದಿದ್ದಾರೆ.

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್
ನೂರಾರು ಕೋಟಿ ರೂಪಾಯಿಗಳ ನಾಯಿಗಳ ಒಡೆಯ ಡಾಗ್ ಸತೀಶ್ ಅವರು ಬಿಗ್‌ಬಾಸ್ (Bigg Boss)ನಿಂದ ಹೊರಕ್ಕೆ ಬಂದ ಮೇಲೆ ಅವರ ಖ್ಯಾತಿ ಹೆಚ್ಚುತ್ತಿದೆ. ನಾನು ದುಡ್ಡಿಗಲ್ಲ, ದುಡ್ಡು ನನಗೆ ಬೇಡ, ಖ್ಯಾತಿಗಾಗಿ ಬಿಗ್‌ಬಾಸ್‌ಗೆ ಹೋಗುತ್ತಿದ್ದೇನೆ ಎನ್ನುತ್ತಲೇ ದೊಡ್ಮನೆ ಸೇರಿದ್ದ ಸತೀಶ್ ಅವರ ಆಸೆ ಈಗ ಈಡೇರಿದೆ.
ಸಂಬಂಧಗಳ ಬಗ್ಗೆ
ಎಂಟು ವರ್ಷಗಳ ಪ್ರಯತ್ನದ ನಂತರ ಅವರಿಗೆ ಬಿಗ್‌ಬಾಸ್‌ನಲ್ಲಿ ಅವಕಾಶ ಸಿಕ್ಕಿರುವುದಾಗಿ ಹೇಳಿಕೊಂಡಿರುವ ಸತೀಶ್ ಅವರು ಸಮಯ ಸಿಕ್ಕಾಗಲೆಲ್ಲಾ ತಮ್ಮ ಸೌಂದರ್ಯದ ಬಗ್ಗೆ ಹೆಮ್ಮೆಯ ಮಾತನಾಡುವುದನ್ನು ಮರೆಯುವುದಿಲ್ಲ. ಜೊತೆಗೆ, ತಮಗೆ ದೊಡ್ಡ ದೊಡ್ಡವರ ಜೊತೆ ಹೇಗೆಲ್ಲಾ ಸಂಬಂಧ ಇದೆ ಎನ್ನುವುದನ್ನು ಹೇಳುತ್ತಲೇ ಇರುತ್ತಾರೆ.
ನಟ ದರ್ಶನ್ ಕುರಿತು ಹೇಳಿಕೆ
ಇದೀಗ ಸಂದರ್ಶನವೊಂದರಲ್ಲಿ ಅವರು ಜೈಲುಪಾಲಾಗಿರುವ ನಟ ದರ್ಶನ್ ಅವರ ಬಗ್ಗೆ ಅಚ್ಚರಿಯ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ.
ದರ್ಶನ್ ಮಾತ್ರ ಹೀಗೆ ಮಾಡಿದ್ರು
ನಾನು ಹಲವಾರು ತಾರೆಯರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದೇನೆ. ಮತ್ತೆ ಹಲವರು ನನ್ನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ನಟ ದರ್ಶನ್ ಅವರನ್ನು ನಾನು ಅನೇಕ ಬಾರಿ ಭೇಟಿ ಮಾಡಿದ್ದೇನೆ. ಆದರೆ ಅಚ್ಚರಿಯ ವಿಷಯ ಏನೆಂದರೆ, ಅವರು ಒಮ್ಮೆ ನಾನು ಎಲ್ಲರ ಜೊತೆ ಫೋಟೋ ತೆಗೆದುಕೊಳ್ತೇನೆ. ಆದರೆ ಸತೀಶ್ ಜೊತೆ ಮಾತ್ರ ಅಲ್ಲ ಅಂದುಬಿಟ್ಟರು ಎಂದಿದ್ದಾರೆ.
ಕಾರಣ ತಿಳಿದಿಲ್ಲ
ನನ್ನ ಜೊತೆ ಅವರು ಫೋಟೋ ಕ್ಲಿಕ್ಕಿಸಿಕೊಳ್ಳದ ಕಾರಣ ತಿಳಿದಿಲ್ಲ. ಆ ಘಟನೆಯ ಬಳಿಕ ಹಲವು ಬಾರಿ ನಾನು ಅವರನ್ನು ಭೇಟಿಯಾಗಿದ್ದೇನೆ. ಆದರೆ ಈ ಬಗ್ಗೆ ಕೇಳುವುದು ಚೆನ್ನಾಗಿರಲ್ಲ ಎನ್ನುವು ಪುನಃಪುನಃ ಕೇಳಿಲ್ಲ. ಆದರೆ ಇಂದಿಗೂ ನನಗೆ ಅದು ಪ್ರಶ್ನಾರ್ಥವಾಗಿಯೇ ಉಳಿದಿದೆ ಎಂದಿದ್ದಾರೆ.
ಡಾಗ್ ಸತೀಶ್ ಕುರಿತು..
ಇನ್ನು ಡಾಗ್ ಸತೀಶ್ ಕುರಿತು ಹೇಳುವುದಾದರೆ, ಅವರು ತಮ್ಮನ್ನು ತಾವು ವಿಶ್ವದ ನಂಬರ್ ಒನ್ ಡಾಗ್ ಬ್ರೀಡರ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಜನರ ಮತ ಮತ್ತು ಮನೆಯ ಸದಸ್ಯರ ಮತಗಳು ಕಡಿಮೆಯಾದ ಕಾರಣ ಅವರು ಮಿಡ್‌ವೀಕ್ ಎಲಿಮಿನೇಷನ್ ಮೂಲಕ ಹೊರಬಂದರು.