ಬಿಗ್ ಬಾಸ್ ಸ್ಪರ್ಧಿ ದಾಂಪತ್ಯ ಜೀವನದಲ್ಲಿ ಬಿರುಕು, ವಿಚ್ಚೇದನ ಘೋಷಿಸಿದ ಸಂಯುಕ್ತ
ಬಿಗ್ ಬಾಸ್ ವೇದಿಕೆ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಸಂಯುಕ್ತ, ಇದೀಗ ಶಾಕ್ ನೀಡಿದ್ದಾರೆ. ಹೌದು ಸಂಯುಕ್ತ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಅಧಿಕೃತವಾಗಿ ವಿಚ್ಚೇದನ ಘೋಷಿಸಿದ್ದಾರೆ.

ಸಂಯುಕ್ತಾ ವಿಚ್ಛೇದನ:
ಇತ್ತೀಚೆಗೆ ಸೆಲೆಬ್ರೆಟಿಗಳ ಬಾಳಲ್ಲಿ ವಿಚ್ಚೇದನ ಸಾಮಾನ್ಯವಾಗುತ್ತಿದೆ. ಮದುವೆ ಸಂಬಂಧಗಳು ಸುದೀರ್ಘ ವರ್ಷ ಉಳಿಯುತ್ತಿಲ್ಲ ಅನ್ನೋ ಮಾತಗಳು ಕೇಳಿಬರುತ್ತಿರುವ ಬೆನ್ನಲ್ಲೇ ಬಿಗ್ ಬಾಸ್ ಸ್ಪರ್ಧಿ ಶಾಕ್ ನೀಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಸಂಯುಕ್ತ ಷಣ್ಮುಗನ್ ಇದೀಗ ಅಧಿಕೃತವಾಗಿ ವಿಚ್ಚೇದನ ಘೋಷಿಸಿದ್ದಾರೆ. ಸುದೀರ್ಘ ದಿನಗಳಿಂದ ದಾಂಪತ್ಯ ಜೀವನದಲ್ಲಿ ನಡೆದ ಕೆಲ ಘಟನೆಗಳು ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.
ವ್ಯಾಪಾರಿಯೊಂದಿಗೆ ಮದುವೆ:
ತಮಿಳು ಬಿಗ್ ಬಾಸ್ ಮೂಲಕ ಸಂಯುಕ್ತಾ ಷಣ್ಮುಗನಾಥನ್ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಸಂಯುಕ್ತಾ ಷಣ್ಮುಗನಾಥನ್ ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗಮನ ಹರಿಸಿದ್ದರು. ಧಾರವಾಹಿ, ಸಿನಿಮಾಗಳಲ್ಲಿ ಪಾತ್ರ ಮಾಡುತ್ತಾ ಜನಪ್ರೀಯತೆ ಗಳಿಸಿಕೊಂಡ ಸಂಯುಕ್ತ, ಪೋಷಕರ ಇಚ್ಚೆಯಂತೆ ಕಾರ್ತಿಕ್ ಶಂಕರ್ ಎಂಬ ಉದ್ಯಮಿ ಜೊತೆ ವಿವಾಹವಾದರು. ಇವರಿಗೆ ರಾಯನ್ ಎಂಬ ಮಗನಿದ್ದಾನೆ.
ಈ ನಡುವೆ ತನ್ನ ಗಂಡನಿಂದ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ, ಕಳೆದ ಜೀವನದಿಂದ ತಾನು ಮುಂದೆ ಸಾಗುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ವಿಚ್ಛೇದನದ ಸುದ್ದಿಯನ್ನು ಹಂಚಿಕೊಂಡಿರುವ ಸಂಯುಕ್ತಾ, ಈ 2025 ರಲ್ಲಿ ಕೊನೆಗೂ ನನ್ನ ಎಲ್ಲಾ ಪೇಪರ್ ಕೆಲಸಗಳನ್ನು ಮುಗಿಸಿದ್ದೇನೆ. ಎಂದಿಗಿಂತಲೂ ಈಗ ಬಲಶಾಲಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಗಂಡನಿಗೆ ಇದ್ದ ಸಂಬಂಧ:
ಇದಕ್ಕೂ ಮುನ್ನ ಒಂದು ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಸಂಯುಕ್ತಾ ತನ್ನ ಗಂಡನಿಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿರುವುದಾಗಿ ಬಹಿರಂಗವಾಗಿ ಹೇಳಿ ಸಂಚಲನ ಮೂಡಿಸಿದ್ದರು. ಕೊರೊನಾ ಲಾಕ್‌ಡೌನ್‌ನಲ್ಲಿ ನನ್ನ ಗಂಡ ದುಬೈನಲ್ಲಿ 4 ವರ್ಷಗಳಿಗೂ ಹೆಚ್ಚು ಕಾಲ ಬೇರೊಬ್ಬ ಮಹಿಳೆಯೊಂದಿಗೆ ಇರುವುದು ಗೊತ್ತಾಯಿತು. ಆಗ ಕೊರೊನಾ ಲಾಕ್‌ಡೌನ್ ಆಗಿದ್ದರಿಂದ ನಾನು ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದರು.
ಪತಿ ನನಗೆ ಮೋಸ ಮಾಡಿದಾಗ ದಿಕ್ಕೇ ತೋಚದಂತಾಯಿತು, ಆದರೆ ಈ ವೇಳೆ ನನಗೆ ಸಹಾಯ ಮಾಡಿದ್ದು ಭಾವನಾ ಬಾಲಕೃಷ್ಣನ್. ನಾನು ಇದ್ದ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಅವರೂ ಇದ್ದರು. ಆರಂಭದಲ್ಲಿ ಹಾಯ್, ಬಾಯ್ ಎನ್ನುವಷ್ಟರ ಮಟ್ಟಿಗೆ ನಮ್ಮ ಸ್ನೇಹವಿತ್ತು. ಅವರು ನನ್ನ ಕುಟುಂಬದ ಬಗ್ಗೆ ಕೇಳಲು, ನಾನು ಎಲ್ಲವನ್ನೂ ಹೇಳಿದೆ. ಆಗ ಅವರು ನನಗೆ ಸಮಾಧಾನ ಹೇಳಿದರು.
ನೆಚ್ಚಿನ ಗೆಳತಿಯಾಗಿ ಬದಲಾದ ಭಾವನಾ:
ಲಾಕ್‌ಡೌನ್ ಆಗಿದ್ದರಿಂದ ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದೆವು. ಅದರ ನಂತರ ಇಬ್ಬರೂ ಹತ್ತಿರವಾಯಿತು. ನಂತರ ನನಗೆ 8ನೇ ವರ್ಷದ ಮದುವೆ ವಾರ್ಷಿಕೋತ್ಸವ ಬಂದಿತು. ಅವರು ನನಗೆ ಸಾಕಷ್ಟು ಸಲಹೆಗಳನ್ನು ನೀಡಿದರು. ನಾನು ಏನು ಇಷ್ಟಪಡುತ್ತೇನೋ ಅದನ್ನೇ ಮಾಡಲು ಹೇಳಿದರು. ಬಿಗ್ ಬಾಸ್ ಶೋದಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಿದರು. ಹೀಗಾಗಿ ಬದುಕಿನ ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಯಿತು ಎಂದಿದ್ದಾರೆ.
ವಾರಿಸು ಚಿತ್ರದ ನಟಿ
ಬಿಗ್ ಬಾಸ್ ಸೀಸನ್ 4 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ಸಂಯುಕ್ತ ಕೆಲ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಂದ ತೀವ್ರವಾಗಿ ನೋಂದಿದ್ದ ಸಂಯುಕ್ತ, ಬಳಿಕ ಬಿಗ್ ಬಾಸ್ ಮೂಲಕ ಜನಪ್ರಿಯತೆ ಮಾತ್ರವಲ್ಲ, ಅವಕಾಶಗಳನ್ನು ಹೆಚ್ಚಿಸಿಕೊಂಡರು.