ಕನ್ನಡ ಬಿಗ್ ಬಾಸ್ ಪ್ರೋಮೋ ಶೂಟಿಂಗ್ ವಿಡಿಯೋ ಹೊರಬಂದಿದೆ. ಕಿಚ್ಚ ಸುದೀಪ್ ಸ್ಟೈಲೀಶ್ ಲುಕ್ ಇದೀಗ ಭಾರಿ ಗಮನಸೆಳೆಯುತ್ತಿದೆ. 13ನೇ ಆವೃತ್ತಿಯ ಈ ಪ್ರೋಮೋ ಹಲವು ಕುತೂಹಲಕ್ಕೆ ಉತ್ತರ ನೀಡಿದೆ.
ಬೆಂಗಳೂರು (ಆ.06) ಕನ್ನಡ ಬಿಗ್ ಬಾಸ್ ಶೋ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಸ್ಪರ್ಧಿಗಳು ಯಾರು ಅನ್ನೋ ಕುತೂಹಲ ಒಂದೆಡೆಯಾದರೆ, ಈ ಬಾರಿ ಥೀಮ್, ಗೇಮ್ ಪ್ಲಾನ್ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಬಿಗ್ ಬಾಸ್ 13ನೇ ಆವೃತ್ತಿಯ ಪ್ರೋಮೋ ಶೂಟಿಂಗ್ ಅದ್ದೂರಿಯಾಗಿ ನಡೆದಿದೆ. ನಿರೂಪಕ ಕಿಚ್ಚ ಸುದೀಪ್ ಈ ಪ್ರೋಮೋದಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಶೂಟಿಂಗ್ ಹಿಂದಿನ ಹಲವು ದೃಶ್ಯಗಳು ಕೆಲ ರೋಚಕ ಕತೆ ಹೇಳುತ್ತಿದೆ.
ಗಮನಸೆಳೆದ ಕಿಚ್ಚ ಸುದೀಪ್ ಲುಕ್
ಬಿಗ್ ಬಾಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಸ್ಟೈಲ್, ಡ್ರೆಸ್, ಲುಕ್ ಭಾರಿ ಚರ್ಚೆಯಾಗುತ್ತದೆ. ಪ್ರತಿ ಬಾರಿ ವೇದಿಕೆ ಮೇಲೆ ಕಾಣಿಸಿಕೊಂಡಾಗ ಕಿಚ್ಚ ಸುದೀಪ್ ಮೋಸ್ಟ್ ಸ್ಟೈಲೀಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದೀಗ 13ನೇ ಆವೃತ್ತಿ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಲುಕ್ ಭಾರಿ ಗಮನಸೆಳೆದಿದೆ. ಕಿಚ್ಚ ಸುದೀಪ್ ಹೈ-ಫ್ಯಾಶನ್ ಸ್ಟೈಲಿಶ್ ಬ್ಲೇಜರ್ ಧರಿಸಿದ್ದಾರೆ. ಜೊತೆಗೆ ಡ್ಯಾಶಿಂಗ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಗಾಂಭೀರ್ಯದ ಸಿಗ್ನೇಚರ್ ವಾಕಿಂಗ್ ಸ್ಟೈಲ್, ಕಣ್ಣಿನ ನೋಟ ಹಾಗೂ ಹಸನ್ಮುಖಿ ಮುಗುಳುನಗು, ಸ್ಕ್ರೀನ್ ಪ್ರೆಸೆನ್ಸ್ ಎಲ್ಲವೂ ಒಂದಕ್ಕಿಂತ ಒಂದು ಮಿಗಿಲಾಗಿದೆ. ಸುದೀಪ್ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಬಿಗ್ ಬಾಸ್ ಪ್ರೋಮೋ ಶೂಟಿಂಗ್ ಅದ್ದೂರಿ ಸೆಟ್‌ನಲ್ಲಿ ನಡೆದಿದೆ. ನಿರ್ದೇಶಕರು, ಲೈಟಿಂಗ್ ಟೀಮ್, ಕಾಸ್ಟ್ಯೂಮ್ ಡಿಸೈನರ್‌ಗಳು ಮತ್ತು ವಿಶುವಲ್ ಎಫೆಕ್ಟ್ಸ್ ಸಿಬ್ಬಂದಿಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಅದ್ದೂರಿತನ, ವಿಶ್ಯುಯೆಲ್ ರಿಚ್‌ನೆಸ್ ತೆರೆ ಹಿಂದಿನ ವಿಡಿಯೋದಲ್ಲೇ ಸ್ಪಷ್ಟವಾಗಿ ಕಾಣುತ್ತಿದೆ. ಕಿಚ್ಚ ಸುದೀಪ್ ಮಾತುಗಳು, ಲುಕ್ ಅಭಿಮಾನಿಗಳಿಗೆ ಭಾರಿ ಥ್ರಿಲ್ ನೀಡಲಿದೆ.
ಬಿಗ್ ಬಾಸ್ ಪ್ರೋಮೋದಲ್ಲಿದೆ ಸುಳಿವು
ಬಿಗ್ ಬಾಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಕೆಲ ಡೈಲಾಗ್ಸ್ ಈ ಆವೃತ್ತಿಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ. ಕರ್ನಾಟಕ ಜನ ಯಾವತ್ತೂ ಯಾರಿಗೂ ಕಾದಿದ್ದು ಚರಿತ್ರೆ ಇಲ್ಲ, ವರ್ಷಕ್ಕೊಮ್ಮೆ ಕಾಯ್ತಾರೆ, ಒಂದು ಮನೆ, ಒಂದು ಅವಕಾಶ, ಕೋಟಿ ಕನಸುಗಳು. ಮತ್ತೆ ಶುರು ಮಾಡೋಣ್ವ ಅನ್ನೋ ಸುದೀಪ್ ಡೈಲಾಗ್ ಈಗಾಗಲೇ ಮನಗೆದ್ದಿದೆ. ಈ ಬಾರಿ ಬಿಗ್ ಬಾಸ್ ಶೋನಲ್ಲಿ ಸಾಮಾನ್ಯರಿಗೂ ಅವಕಾಶ ಸಿಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೇ ವೇಳೆ ಮನೆಯ ರೂಲ್ಸ್ ಬದಲಾಗಲಿದೆ ಅನ್ನೋ ಮಾತುಗಳಿವೆ.

