ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರೋಚಕ ತಿರುವು… ಡಿಸಿ ಸ್ನೇಹ ಸತ್ತು ಹೃದಯವನ್ನ ಇನ್ನೊಬ್ಬ ಸ್ನೇಹಾಗೆ ಕೊಡ್ತಾಳಾ?
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರೋಚಕ ತಿರುವು, ಸ್ನೇಹಾ ಕತೆಯನ್ನು ಆಕ್ಸಿಡೆಂಡ್ ಮೂಲಕ ಮುಗಿಸ್ತಾರಾ? ಸ್ನೇಹಾ ಸತ್ತು ಆಕೆಯ ಹೃದಯವನ್ನು ಇನ್ನೊಂದು ಜೀವಕ್ಕೆ ನೀಡುವ ಮೂಲಕ ಹೊಸ ಕಥೆ ಆರಂಭವಾಗುತ್ತಾ?
ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು, ಸದ್ಯ ರೋಚಕ ಘಟ್ಟವನ್ನ ತಲುಪಿದೆ. ತನ್ನ ಕನಸನ್ನು ನನಸಾಗಿಸಿಕೊಂಡು ಡಿಸಿ ಆಗಿರುವ ಸ್ನೇಹಾ ಇದೀಗ ಅಮ್ಮನ ಹುಟ್ಟುಹಬ್ಬಕ್ಕೆ ಎರಡೆರಡು ಸರ್ಪ್ರೈಸ್ ಕೊಡುವ ಸಂಭ್ರಮದಲ್ಲಿದ್ದಾಳೆ. ಆದರೆ ಆ ಸಂಭ್ರಮ ಅವಳಿಗೆ ಮುಳುವಾಗುವಂತಿದೆ.
ಹೌದು, ಇಲ್ಲಿವರೆಗೆ ಪುಟ್ಟಕ್ಕನ ಹಿರಿಮಗಳು ಸತ್ತಿದ್ದಾಳೆ ಎಂದೆ ಮನೆ ಮಂದಿ ಅಂದುಕೊಂಡಿದ್ದರು. ಆದರೆ ಆಕೆ ದೂರದ ಬೆಂಗಳೂರಿನಲ್ಲಿ ತನ್ನದೇ ಆದ ಪುಟ್ಟ ಜೀವನ ಆರಂಭಿಸಿದ್ದಾಳೆ. ಅಕ್ಕ ಸಹನಾ ಬದುಕಿರುವ ವಿಷಯ ಕೇಳಿ ಡಿಸಿ ಸ್ನೇಹಾ ತುಂಬಾನೆ ಖುಷಿಯಾಗಿದ್ದು, ಅಕ್ಕನನ್ನು ಮತ್ತೆ ಮನೆಗೆ ಕರೆತರುವ ಸಂಭ್ರಮದಲ್ಲಿದ್ದಾಳೆ.
ಇನ್ನೊಂದೆಡೆ ಮನೆಯಲ್ಲಿ ಬಂಗಾರಮ್ಮನ ಬದಲಾಗಿ, ಸಿಂಗಾರಮ್ಮ ಇರೋದು ಸ್ನೇಹಾಗೆ ಗೊತ್ತಾಗಿ, ಅತ್ತೆಯನ್ನು ಹುಡುಕಿಕೊಂಡು ಹೊರಟಿರುವ ಸ್ನೇಹಾಳಿಗೆ ಅತ್ತೆ ಬಂಗಾರಮ್ಮ ಕೂಡ ಸಿಕ್ಕಿದ್ದಾರೆ. ಅಮ್ಮನ ಹುಟ್ಟುಹಬ್ಬ ಆಚರಿಸೋದಕ್ಕೆ ಎಲ್ಲಾ ತಯಾರಿ ಮಾಡಿಸಿರುವ ಸ್ನೇಹಾ , ಇದೀಗ ಅಕ್ಕ ಸಹನಾ ಮತ್ತು ಬಂಗಾರಮ್ಮ ಇಬ್ಬರನ್ನೂ ಜೊತೆಯಾಗಿ ಅಮ್ಮನ ಮುಂದೆ ನಿಲ್ಲಿಸಿ ಸರ್ಪ್ರೈಸ್ ನೀಡುವ ಪ್ಲ್ಯಾನ್ ನಲ್ಲಿದ್ದಾಳೆ, ಅಮ್ಮನಿಗೂ ಸರ್ಪ್ರೈಸ್ ಗೆ ರೆಡಿಯಾಗಿರೋದಕ್ಕೆ ಹೇಳಿದ್ದಾಳೆ.
ಇನ್ನೊಂದೆಡೆ ಪುಟ್ಟಕ್ಕನ ಮನೆಗೆ ಬಂದಿರುವ ಸ್ನೇಹಾ ಎನ್ನುವ ಹುಡುಗಿಗೆ ಹೃದಯ ಸಮಸ್ಯೆಯಾಗಿ (heart problem) ಆಸ್ಪತ್ರೆಗೆ ದಾಖಲಾಗಿದ್ದಾಳೆ. ಮನೆಯಲ್ಲಿ ಸಿಕ್ಕಿರುವ ಆಸ್ಪತ್ರೆಯ ಫೈಲ್ ನೋಡಿ, ಹೃದಯ ಸಮಸ್ಯೆ ಇರೋದು ಸ್ನೇಹಾಗೆ ಎಂದು ಪುಟ್ಟಕ್ಕ ಭಯಪಟ್ಟಿದ್ದಾಳೆ. ಮತ್ತೊಂದು ಕಡೆ ಆಸ್ಪತ್ರೆಗೆ ದಾಖಲಾಗಿರುವ ಹುಡುಗಿ ಸ್ನೇಹಾಳ ಆಪರೇಶನ್ ಮತ್ತು ಕ್ರಿಟಿಕಲ್ ಕಂಡೀಶನ್ ಬಗ್ಗೆ ಆ ಹುಡುಗಿಯ ತಂದೆ ಡಿಸಿ ಸ್ನೇಹಾ ಬಳಿ ಹೇಳಿಕೊಳ್ಳುತ್ತಾನೆ.
ಹುಡುಗಿಯ ಹಾರ್ಟ್ ಟ್ರಾನ್ಸ್’ಪ್ಲಂಟ್ ಮಾಡೋದಕ್ಕೆ ಏನೆಲ್ಲಾ ಅಗತ್ಯಗಳಿವೆಯೋ ಅದನ್ನ ತಾನು ಮಾಡಿಸೋದಾಗಿ ಡಿಸಿ ಸ್ನೇಹಾ ಹುಡುಗಿ ತಂದೆಗೆ ಭರವಸೆ ನೀಡ್ತಾರೆ. ಆದರೆ ಇನ್ನೊಬ್ಬರಿಗೆ ಸಹಾಯ ಮಾಡಲು ತುಡಿಯುತ್ತಿರುವ ಸ್ನೇಹಾ ಹೃದಯ ಇನ್ನೊಂದು ಕ್ಷಣದಲ್ಲಿ ನಿಲ್ಲಬಹುದು ಅನ್ನೋದು ಅವಳಿಗೆ ಗೊತ್ತಿರೋದಿಲ್ಲ. ಯಾಕಂದ್ರೆ ಸಿಂಗಾರಮ್ಮ ಕದೆಯವರು ಇವರ ಕಾರಿಗೆ ಆಕ್ಸಿಡೆಂಟ್ ಮಾಡಿಸೋದಕ್ಕೆ ಸ್ಕೆಚ್ ಹಾಕಿ ಆಗಿದೆ.
ಇನ್ನು ಮುಂದಿನ ಎಪಿಸೋಡ್ ಗಳಲ್ಲಿ ಆಕ್ಸಿಡೆಂಟ್ ಆಗಿ, ಸ್ನೇಹಾ ಸಾಯುವ ಸಾಧ್ಯತೆ ಇದೆ. ಹಾಗೂ ಡಿಸಿ ಸ್ನೇಹಾಳ ಹೃದಯವನ್ನು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸ್ನೇಹಾಗೆ ನೀಡಲಾಗುತ್ತೆ, ಅನ್ನೋದನ್ನ ಈಗಾಗಲೇ ಕಥೆ ನೋಡಿದ್ರೆನೆ ಗೊತ್ತಾಗುತ್ತೆ. ಅಷ್ಟೇ ಅಲ್ಲದೇ ಕೆಲದಿನಗಳ ಹಿಂದೆ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸಹ ತಾವು ಪಾತ್ರಕ್ಕೆ ಗುಡ್ ಬೈ ಹೇಳುವ ಬಗ್ಗೆ ಸುಳಿವು ನೀಡಿದ್ದರು. ಇದೀಗ ಅದು ನಿಜವಾಗುತ್ತಾ ಬಂದಿದೆ.
ಆದರೆ ವೀಕ್ಷಕರು ಮಾತ್ರ ಕಥೆಯಲ್ಲಿ ಬಂದಿರುವ ಈ ಟ್ವಿಸ್ಟ್ ಬಗ್ಗೆ ಸಿಕ್ಕಾಪಟ್ಟೆ ಕೋಪ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಸ್ನೇಹ ಪಾತ್ರ ಮುಗಿದ್ರೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಅರ್ಥಾನೆ ಇಲ್ಲ, ಸ್ನೇಹ ಡಿಸಿ ಆಗಿರೋದಕ್ಕೂ ಅರ್ಥ ಇಲ್ಲ ಎಂದಿದ್ದಾರೆ. ಡೈರೆಕ್ಟರ್ ಸಾರ್ ಆ ಸ್ನೇಹಾ ಜೊತೆ ಮತ್ತೆ ಕಂಠಿನ ಮದ್ವೆ ಮಾಡ್ಬೇಡಿ, ಬದಲಾಗಿ ಕತೆಯನ್ನೇ ಆದಷ್ಟು ಬೇಗ ಮುಗಿಸಿ ಕೈ ಮುಗಿತಿವಿ ಅಂತ ಕೇಳ್ಕೊತ್ತಿದ್ದಾರೆ ಜನ. ಮುಂದೇನಾಗುತ್ತೆ ಕಾದು ನೋಡಬೇಕು.