- Home
- Entertainment
- TV Talk
- Bhagyalakshmi ವಿಚಿತ್ರ ತಿರುವು: ತಾಂಡವ್ಗೆ ವಿಷ ಹಾಕಿದ ಶ್ರೇಷ್ಠಾ; ಆದಿ- ಭಾಗ್ಯ ಲವ್ಸ್ಟೋರಿ ಯೂ ಟರ್ನ್!
Bhagyalakshmi ವಿಚಿತ್ರ ತಿರುವು: ತಾಂಡವ್ಗೆ ವಿಷ ಹಾಕಿದ ಶ್ರೇಷ್ಠಾ; ಆದಿ- ಭಾಗ್ಯ ಲವ್ಸ್ಟೋರಿ ಯೂ ಟರ್ನ್!
ಆಸ್ತಿ ಕಬಳಿಸಲು ತಾಂಡವ್ ಮತ್ತು ಶ್ರೇಷ್ಠಾ ಮಾಡಿದ ಯೋಜನೆ ಉಲ್ಟಾ ಹೊಡೆದಿದೆ, ಶ್ರೇಷ್ಠಾ ತಾಂಡವ್ ಊಟದಲ್ಲಿ ನಿಜವಾಗಿಯೂ ವಿಷ ಬೆರೆಸಿದ್ದಾಳೆ. ಮತ್ತೊಂದೆಡೆ, ಆದಿ ಪ್ರೀತಿಯ ನಿವೇದನೆ ಮಾಡಿಕೊಂಡರೆ, ಭಾಗ್ಯ ಅದನ್ನು ಬೇರೆ ಮದುವೆಯ ಪ್ರಸ್ತಾಪವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆ.

ಭಾಗ್ಯಲಕ್ಷ್ಮಿ ಕುತೂಹಲ
ಭಾಗ್ಯಲಕ್ಷ್ಮಿ (Bhagyalakshmi Serial) ಈಗ ಕುತೂಹಲದ ತಿರುವು ಪಡೆದುಕೊಂಡಿದೆ. ತಾಂಡವ್ನ ಅಪ್ಪ-ಅಮ್ಮ ಮತ್ತು ಭಾಗ್ಯಂಗೆ ತೊಂದರೆ ಕೊಡುವ ನಿಟ್ಟಿನಲ್ಲಿ ಹಾಗೂ ಕೈಯಲ್ಲಿ ಸರಿಯಾ ಕೆಲಸ ಇಲ್ಲದೇ ಇರುವುದರಿಂದ ಆಸ್ತಿಯನ್ನೆಲ್ಲಾ ಕಬಳಿಸಲು ತಾಂಡವ್ ಮತ್ತು ಶ್ರೇಷ್ಠಾ ಹೊಂಚು ಹಾಕಿದ್ದರು.
ಆಸ್ತಿ ಕಬಳಿಕೆ ಪ್ಲ್ಯಾನ್
ಆದರೆ, ಅದೀಗ ಉಲ್ಟಾ ಹೊಡೆದಿದೆ. ಈ ಆಸ್ತಿಯನ್ನು ಹೇಗೆ ಕಬಳಿಸುವುದು ಎಂದು ತಿಳಿಯದ್ದರಿಂದ, ಶ್ರೇಷ್ಠಾ ಒಂದು ಪ್ಲ್ಯಾನ್ ಮಾಡಿದ್ದಾಳೆ. ಅವಳು ತಾಂಡವ್ಗೆ, ನೀನು ಆಸ್ಪತ್ರೆಗೆ ದಾಖಲಾಗು. ಭಾಗ್ಯ ಮತ್ತೆ ಮನೆಯವರು ಕೊಡ್ತಿರೋ ಟಾರ್ಚರ್ ತಾಳಿಕೊಳ್ಳಲಾಗದೇ ವಿಷ ಸೇವಿಸಿದೆ ಅಂದರಾಯ್ತು ಎಂದಿದ್ದಾಳೆ.
ಅನ್ನದಲ್ಲಿ ವಿಷ
ಇದನ್ನು ಕೇಳಿ ತಾಂಡವ್, ನಿನಗೆ ತಲೆ ಕೆಟ್ಟಿದ್ಯಾ? ವಿಷ ಸೇವಿಸಿದರೆ ಟೆಸ್ಟ್ ಮಾಡ್ತಾರೆ. ಅಲ್ಲಿ ನನಗೆ ವಿಷಪ್ರಾಷನ ಆಗಿಲ್ಲ ಎನ್ನುವ ರಿಪೋರ್ಟ್ ಬರುತ್ತದೆ. ಇದೆಂಥ ಕಿತ್ತೋಗಿರೋ ಪ್ಲ್ಯಾನ್ ಎಂದು ಹೇಳಿದಾಗ ಶ್ರೇಷ್ಠಾ, ಹಾಗೆ ಏನೂ ಆಗಲ್ಲ. ಏಕೆಂದರೆ ನೀನು ಈಗ ಮಾಡ್ತಿರೋ ಊಟದಲ್ಲಿ ವಿಷ ಹಾಕಿದ್ದೇನೆ, ರಿಪೋರ್ಟ್ ಸರಿ ಬರುತ್ತೆ ಎಂದಾಗ, ತಾಂಡವ್ ಶಾಕ್ ಆಗಿ ಮಾಡಿದ ಊಟವನ್ನೆಲ್ಲಾ ಉಗಿಯುತ್ತಾನೆ. ಅಲ್ಲಿಗೆ ತಾಂಡವ್ ಮತ್ತು ಶ್ರೇಷ್ಠಾ ಸಂಬಂಧ ಮುರಿದಂತೆ.
ಪ್ರೀತಿಯ ನಿವೇದನೆ
ಇನ್ನು, ಇತ್ತ ಆದಿ, ಭಾಗ್ಯಳಲ್ಲಿ ತನ್ನ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಮಾತು ಆರಂಭಿಸಿದ್ದಾನೆ. ಮದುವೆಯ ಪ್ರಸ್ತಾಪ ಇಟ್ಟಿದ್ದಾನೆ. ಆದರೆ, ಭಾಗ್ಯ ಆದಿಗೆ ಇನ್ನೊಂದು ಮದುವೆ ಮಾಡಿಸಲು ಆದಿ ಅಪ್ಪನಿಗೆ ಮಾತು ಕೊಟ್ಟಿದ್ದರಿಂದ ಅದರ ಬಗ್ಗೆ ಮಾತನಾಡುತ್ತಿದ್ದಾಳೆ. ಮತ್ತೊಂದು ಮದುವೆಯಾಗುವಂತೆ ಹೇಳುತ್ತಿದ್ದಾಳೆ.
ಲವ್ ಕನ್ಫ್ಯೂಸ್
ಆದಿ ಹೇಳ್ತಿರೋದನ್ನು ಕೇಳಿದ ಭಾಗ್ಯ ಆತ ಮತ್ತೊಂದು ಮದುವೆಗೆ ಸಿದ್ಧನಾದ ಎಂದುಕೊಂಡಿದ್ದರೆ, ಭಾಗ್ಯ ಹೇಳ್ತಿರೋ ಮಾತನ್ನು ಕೇಳಿಸಿಕೊಂಡ ಆದಿ, ಭಾಗ್ಯ ತಮ್ಮಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ ಎಂದುಕೊಂಡಿದ್ದಾನೆ. ಒಟ್ಟಿನಲ್ಲಿ ಎಲ್ಲವೂ ಕನ್ಫ್ಯೂಸ್ ಆಗಿ ಮುಂದೇನು ಎನ್ನುವುದು ನೋಡಬೇಕಿದೆ. ಇವರಿಬ್ಬರ ಮದುವೆ ಮಾಡಿಸುವ ಕುಸುಮಾ ಕನಸು ನನಸಾಗತ್ತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

