- Home
- Entertainment
- TV Talk
- ತಂಗಿ ಮದ್ವೆ ಹರಕೆ ತೀರಿಸೋಕೆ ಕಾಶಿಗೆ ಹೊರಟ್ರಾ ಭಾಗ್ಯ?: ಈಗಲೇ ಕಾಶಿ ಯಾತ್ರೆನಾ ಎಂದ ನೆಟ್ಟಿಗರು
ತಂಗಿ ಮದ್ವೆ ಹರಕೆ ತೀರಿಸೋಕೆ ಕಾಶಿಗೆ ಹೊರಟ್ರಾ ಭಾಗ್ಯ?: ಈಗಲೇ ಕಾಶಿ ಯಾತ್ರೆನಾ ಎಂದ ನೆಟ್ಟಿಗರು
ಭಾಗ್ಯಲಕ್ಷ್ಮಿ ಸೀರಿಯಲ್ ನಾಯಕಿ ಭಾಗ್ಯ ಅಂದ್ರೆ ನಟಿ ಸುಷ್ಮಾ ರಾವ್, ತಾವು ಕಾಶಿಯಲ್ಲಿರುವ ವಿಡೀಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರು ಇಷ್ಟು ಬೇಗ ಕಾಶಿ ಯಾತ್ರೆನಾ ಎಂದು ಕೇಳಿದ್ದಾರೆ.

ಅಕ್ಕ ತಂಗಿಯರ ಕಥೆಯನ್ನು ಹೊತ್ತು ತಂದಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರೋದಂತೂ ನಿಜ. ಅದರಲ್ಲೂ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್ ತಮ್ಮ ನಟನೆ ಮೂಲಕ ಜನಕ್ಕೆ ಇಷ್ಟಆಗಿದ್ದಾರೆ. ಇದೀಗ ಭಾಗ್ಯಾ ಆಲಿಯಾಸ್ ಸುಷ್ಮಾ ರಾವ್ ಕಾಶಿ (Sushma Rao in Kashi Yatra) ಯಾತ್ರೆಯಲ್ಲಿದ್ದಾರೆ.
ತಾವು ಕಾಶಿಯಲ್ಲಿ ಇರುವ ವಿಡಿಯೋವನ್ನು ಸುಷ್ಮಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಶನ್ ಹಾಕಿ ಲಡ್ಡು ಮದುವೆ ಹರಕೆ ತೀರಿಸೋಕೆ ಕಾಶಿ ಯಾತ್ರೆ ಎಂದು ಬರೆದಿದ್ದಾರೆ ಈಗ ಬೆಳಗ್ಗೆ 4 ಗಂಟೆ, ಕಾಶಿಯಲ್ಲಿದ್ದೇನೆ, ತುಂಬಾ ಚಳಿ ಇದೆ, ಗಂಗಾ ನದಿಯಲ್ಲಿ ಸ್ನಾನ ಮಾಡ್ಬೇಕು ಅಂತಾ ಹೊರಟಿದ್ದೇನೆ ಎಂದು ಹೇಳಿದ್ದಾರೆ.
ಶೂಟಿಂಗ್‌ನಿಂದ ಕೆಲವು ದಿನಗಳ ಕಾಲ ಬ್ರೇಕ್ ಪಡೆದಿರುವ ನಟಿ ಸುಷ್ಮಾ ರಾವ್ ಸದ್ಯಕ್ಕೆ ಕಾಶಿಯಾತ್ರೆಯಲ್ಲಿ ಬ್ಯುಸಿ ಇದ್ದಾರೆ. ತಾವು ಉಳಿದುಕೊಂಡಿರುವ ರೂಮ್ ನಿಂದ ಒಬ್ಬರೇ ಬೆಳಗ್ಗೆ 4 ಗಂಟೆಗೆ ಹೊರಟಿರುವ ಸುಷ್ಮಾ, ತಾವು ವಾರಣಾಸಿಯ ಮನ್ ಮಂದಿರ್ ಘಾಟ್ ನಲ್ಲಿ ನೀರಿನಲ್ಲಿ ಮೂರು ಸಲ ಮುಳುಗಿ ಮತ್ತೆ ದೇವಿ ದೇವಸ್ಥಾನಕ್ಕೆ ಹೋಗೋದಾಗಿ ತಿಳಿಸಿದ್ದಾರೆ.
ಬಳಿಕ ರೂಮ್ ಗೆ ತೆರಳಿ ಅಲ್ಲಿಂದ ಕಾಶಿ ವಿಶ್ವನಾಥನ (Kashi Vishwanath) ದರ್ಶನ ಪಡೆಯುವುದಾಗಿ ಸುಷ್ಮಾ ತಮ್ಮ ವಿಡೀಯೋದಲ್ಲಿ ತಿಳಿಸಿದ್ದಾರೆ. ಅಲ್ಲದೆ ನೀರು ಎಷ್ಟು ತಣ್ಣಗಿದೆ ಅನ್ನೋದು ಗೊತ್ತಿಲ್ಲ, ಧೈರ್ಯ ಮಾಡಿ ಹೊರಟಿದ್ದೇನೆ ಎಂದಿದ್ದಾರೆ. ಅಲ್ಲದೇ ಈಗಾಗಲೇ ಅವರು ತ್ರಿವೇಣಿ ಸಂಗಮಕ್ಕೂ ಹೋಗಿರೋದಾಗಿ ತಿಳಿಸಿದ್ದಾರೆ.
ಇನ್ನು ಕರಿಯರ್ ವಿಚಾರಕ್ಕೆ ಬಂದ್ರೆ 2003 ರಲ್ಲಿ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಗುಪ್ತಗಾಮಿನಿ' ಧಾರಾವಾಹಿ ಮೂಲಕ ಜನರಿಗೆ ಪರಿಚಿತರಾದ ಸುಷ್ಮಾ, ನಟಿಯಾಗಿ ಮಾತ್ರವಲ್ಲದೆ ನಿರೂಪಕಿಯಾಗಿ, ಭರತನಾಟ್ಯ ಕಲಾವಿದೆಯಾಗಿ (Bharatanatya Dancer) ಕೂಡಾ ಗುರುತಿಸಿಕೊಂಡಿದ್ದಾರೆ.
ಹತ್ತು ವರ್ಷ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಸುಷ್ಮಾ, ಇದೀಗಾ ಭಾಗ್ಯ ಲಕ್ಷ್ಮೀ ಸೀರಿಯಲ್ (Bhagyalakshmi serial) ಮೂಲಕ ಕಮ್ ಬ್ಯಾಕ್ ಮಾಡಿದ್ದು, ಇದು ಅಕ್ಕ ತಂಗಿಯರ ಕಥೆಯಾಗಿದೆ. ತಂದೆ ತಾಯಿ ಇಲ್ಲದ ಚಿಕ್ಕಪ್ಪನ ಮಗಳನ್ನು ಸ್ವಂತ ಮಗಳಂತೆ ಬೆಳೆಸುವ ಭಾಗ್ಯ, ತಂಗಿ ಲಕ್ಷ್ಮೀ ಪಾಲಿಗೆ ಅಕ್ಕಮ್ಮ. ಗಂಡನ ಮೂದಲಿಕೆಯ ನಡುವೆಯೂ, ಮನೆಯನ್ನು ಎಲ್ಲರನ್ನೂ ಪ್ರೀತಿಯಿಂದ ಸಂಭಾಳಿಸಿಕೊಂಡು ಹೋಗುವ ಭಾಗ್ಯ ಪಾತ್ರ ಜನಮನ ಗೆದ್ದಿದೆ.