MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ತಾಂಡವ್​ಗೆ ಅವನದ್ದೇ ಮನೆಗೆ ಆಹ್ವಾನ ಕೊಟ್ಟ ಆದಿ! ರೋಚಕ ತಿರುವಿನಲ್ಲಿ Bhagyalakshmi Serial

ತಾಂಡವ್​ಗೆ ಅವನದ್ದೇ ಮನೆಗೆ ಆಹ್ವಾನ ಕೊಟ್ಟ ಆದಿ! ರೋಚಕ ತಿರುವಿನಲ್ಲಿ Bhagyalakshmi Serial

ತಾಂಡವ್​ನೇ ಭಾಗ್ಯಳ ಪತಿ ಎನ್ನುವ ಸತ್ಯ ಗೊತ್ತಿಲ್ಲದೇ ತಾಂಡವ್​ ಎದುರೇ ಭಾಗ್ಯಳನ್ನು ಸಿಕ್ಕಾಪಟ್ಟೆ ಹೊಗಳ್ತಾ ಇರೋ ಆದಿ, ಈಗ ಅವನದ್ದೇ ಮನೆಗೆ ಆಹ್ವಾನ ಕೊಟ್ಟಿದ್ದಾನೆ. ಮುಂದೇನಾಗುತ್ತೆ? 

2 Min read
Suchethana D
Published : Aug 13 2025, 03:41 PM IST
Share this Photo Gallery
  • FB
  • TW
  • Linkdin
  • Whatsapp
17
ತಾಂಡವ್​ಗೆ ಅವನದ್ದೆ ಮನೆಗೆ ಆಹ್ವಾನ ಕೊಟ್ಟ ಆದಿ
Image Credit : instagram

ತಾಂಡವ್​ಗೆ ಅವನದ್ದೆ ಮನೆಗೆ ಆಹ್ವಾನ ಕೊಟ್ಟ ಆದಿ

ತಾಂಡವ್​ನೇ ಭಾಗ್ಯಳ ಪತಿ ಎನ್ನುವ ಸತ್ಯ ಗೊತ್ತಿಲ್ಲದೇ ತಾಂಡವ್​ ಎದುರೇ ಭಾಗ್ಯಳನ್ನು ಸಿಕ್ಕಾಪಟ್ಟೆ ಹೊಗಳ್ತಾ ಇದ್ದಾನೆ ಆದಿ. ಇದನ್ನು ಕೇಳಿ ತಾಂಡವ್​ಗೆ ಮೈಯೆಲ್ಲಾ ಉರಿ ಹೊತ್ತಿಕೊಂಡರೂ, ಆದಿ ತನ್ನ ಬಾಸ್​ ಆಗಿರೋ ಕಾರಣ ಏನೂ ಹೇಳದ ಸ್ಥಿತಿಯಲ್ಲಿ ಇದ್ದಾನೆ. ಇದರ ನಡುವೆಯೇ ದುಬಾರಿ ಗಿಫ್ಟ್​ ಕೊಡುವ ಬಗ್ಗೆಯೂ ಆದಿ ತಾಂಡವ್​ ಬಳಿಯೇ ಡಿಸಕ್​ಸ್​ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾನೆ.

27
ತಾಂಡವ್​ಗೆ ಇನ್ನೊಂದು ಧರ್ಮ ಸಂಕಟ
Image Credit : instagram

ತಾಂಡವ್​ಗೆ ಇನ್ನೊಂದು ಧರ್ಮ ಸಂಕಟ

ಇದೀಗ ತಾಂಡವ್​ಗೆ ಇನ್ನೊಂದು ಧರ್ಮ ಸಂಕಟ ಎದುರಾಗಿದೆ. ಭಾಗ್ಯಳ ಮನೆಗೆ ವರಮಹಾಲಕ್ಷ್ಮಿ ಹಬ್ಬಕ್ಕೆಂದು ಆದಿ ಕುಟುಂಬ ಎಲ್ಲಾ ಬಂದಿದೆ. ಆದಿ ತನ್ನದೇ ಮನೆ ಅನ್ನೋ ರೀತಿಯಲ್ಲಿ ತಾಂಡವ್​ ಮತ್ತು ಶ್ರೇಷ್ಠಾಳಿಗೂ ಇನ್ವಿಟೇಷನ್​ ಕೊಟ್ಟಿದ್ದಾನೆ. ಇದ್ಯಾಕೋ ಸ್ವಲ್ಪ ಅತಿಯಾಯಿತು ಎಂದು ಅಂದುಕೊಳ್ಳುತ್ತಿದ್ದಾರೆ ವೀಕ್ಷಕರು. ಆದರೂ ಇದೊಂಥರಾ ಮಜಾ ಇದೆ ಎಂದೂ ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ.

Related Articles

Related image1
ಭಾಗ್ಯ-ಆದಿ ಮದ್ವೆಗೆ ಫ್ಯಾನ್ಸ್​ ಕಾತರ... ಇಬ್ಬರು ಮಕ್ಕಳ ಮುದ್ದಿನ ಅಪ್ಪನ ರಿಯಲ್​ ಪತ್ನಿ ಇವ್ರೇ ನೋಡಿ!
Related image2
ನಾವಿಬ್ರೂ ದೇವಸ್ಥಾನದಲ್ಲಿ ಹಾರ ಹಾಕಿದ್ದು ನಿಜ, ಆದ್ರೆ...Bharjari Bachelors ಸುನಿಲ್​- ಅಮೃತಾ ಹೇಳಿದ್ದೇನು?
37
ತಾಂಡವ್​ ಮತ್ತು ಶ್ರೇಷ್ಠಾಳನ್ನು ನೋಡಿ ಶಾಕ್​!
Image Credit : instagram

ತಾಂಡವ್​ ಮತ್ತು ಶ್ರೇಷ್ಠಾಳನ್ನು ನೋಡಿ ಶಾಕ್​!

ತಾಂಡವ್​ ಮತ್ತು ಶ್ರೇಷ್ಠಾಳನ್ನು ನೋಡಿ ಎಲ್ಲರಿಗೂ ಶಾಕ್​ ಆಗಿದೆ. ತಾಂಡವ್​ ಅಪ್ಪ ಮತ್ಯಾಕೆ ಇಲ್ಲಿ ಬಂದಿ ಎಂದು ಬೈದಿದ್ದಾನೆ. ಆದರೆ ಇದನ್ನು ಆದಿ ತಪ್ಪಾಗಿ ತಿಳಿದಿದ್ದಾನೆ. ತನ್ನ ಮನೆಯಲ್ಲಿ ಅಂದು ಆದ ಘಟನೆಯಿಂದ ಹೀಗೆ ಅವರು ಹೇಳ್ತಿರೋದು ಅಂದುಕೊಂಡು ಅದನ್ನು ಕ್ಷಮಿಸಿ, ನಾನೇ ತಾಂಡವ್​ ಮತ್ತು ಶ್ರೇಷ್ಠಾರನ್ನು ಮನೆಗೆ ಕರೆದಿರುವುದಾಗಿ ತಿಳಿಸಿದ್ದಾನೆ.

47
ಆದಿ ಮತ್ತು ಭಾಗ್ಯ ಒಂದಾಗಬೇಕೆನ್ನುವ ವೀಕ್ಷಕರು
Image Credit : instagram

ಆದಿ ಮತ್ತು ಭಾಗ್ಯ ಒಂದಾಗಬೇಕೆನ್ನುವ ವೀಕ್ಷಕರು

ಸತ್ಯ ಹೇಳಲೂ ಆಗದೇ, ಬಿಡಲೂ ಆಗದ ಸ್ಥಿತಿ ತಾಂಡವ್​ ಮನೆಯವರದ್ದು. ಒಟ್ಟಿನಲ್ಲಿ ಸೀರಿಯಲ್​ ವಿಚಿತ್ರ, ಕುತೂಹಲದ ತಿರುವಿನಲ್ಲಿ ಸಾಗಿದೆ. ಅದೇನೇ ಆದರೂ ಭಾಗ್ಯ ಮತ್ತು ಆದಿ ಒಂದಾಗಬೇಕು ಎನ್ನುವ ಕಿಚ್ಚು ವೀಕ್ಷಕರಲ್ಲಿ ಹೆಚ್ಚಾಗ್ತಿದೆ.

57
ಆದಿ ಮತ್ತು ಭಾಗ್ಯ ಒಂದಾಗಬೇಕೆನ್ನುವ ವೀಕ್ಷಕರು
Image Credit : instagram

ಆದಿ ಮತ್ತು ಭಾಗ್ಯ ಒಂದಾಗಬೇಕೆನ್ನುವ ವೀಕ್ಷಕರು

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಆದಿಯ ಎಂಟ್ರಿ ಆದಾಗಿನಿಂದಲೂ ಭಾಗ್ಯ ಮತ್ತು ಆದಿ ಮದುವೆಯಾಗಬೇಕು, ತಾಂಡವ್​ಗೆ ಹೊಟ್ಟೆ ಉರಿಯಬೇಕು, ತಾಂಡವ್​ ಎದುರು ಭಾಗ್ಯ ಮತ್ತು ಆದಿ ಒಂದಾಗಿ ಬಾಳಬೇಕು ಎಂದೆಲ್ಲಾ ಆಶಿಸ್ತಿರೋರೇ ಹಲವರು.  

67
ಭಾಗ್ಯಳಿಗೆ ಇನ್ನೊಂದು ಮದುವೆ
Image Credit : jiohotstar

ಭಾಗ್ಯಳಿಗೆ ಇನ್ನೊಂದು ಮದುವೆ

. ರಿಯಲ್​ ಲೈಫ್​ನಲ್ಲಿ ಇಷ್ಟು ದೊಡ್ಡ ಮಕ್ಕಳು ಇದ್ದಾಕೆ ಮದುವೆಯಾಗಲು ಹೊರಟರೆ ಒಪ್ಪುತ್ತಾರೋ ಅಥ್ವಾ ಮದ್ವೆಯಾದ್ರೆ ಏನು ಕೊಂಕು ಮಾತನಾಡುತ್ತಾರೋ, ಮದುವೆಯಾದರೆ ಚೆನ್ನಾಗಿ ಸಂಸಾರ ನಡೆಸಲು ಕೊಡುತ್ತಾರೋ ಗೊತ್ತಿಲ್ಲ... ಆದ್ರೆ ರೀಲ್​ ಲೈಫ್​ನಲ್ಲಿ ಭಾಗ್ಯಳ ಸಂಕಷ್ಟ, ಆದಿಯ ಕ್ರೌರ್ಯ ನೋಡಿದವರು ಮಾತ್ರ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸುವ ಕಾತರದಿಂದ ಇದ್ದಾರೆ.

77
ಸೊಸೆಗೆ ಇನ್ನೊಂದು ಮದುವೆ
Image Credit : jiohotstar

ಸೊಸೆಗೆ ಇನ್ನೊಂದು ಮದುವೆ

ಅದೇ ಇನ್ನೊಂದೆಡೆ ಭಾಗ್ಯಳ ಅತ್ತೆ ಕುಸುಮಾ ಕೂಡ ಸೊಸೆಗೆ ಇನ್ನೊಂದು ಮದುವೆ ಮಾಡಿಸಲು ಕಾಯುತ್ತಿರುವುದರಿಂದ ಆದಿ ಮತ್ತು ಭಾಗ್ಯಳ ಮದುವೆ ಗ್ಯಾರೆಂಟಿ ಎನ್ನೋದು ಎಲ್ಲರಿಗೂ ತಿಳಿದಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by Colors Kannada Official (@colorskannadaofficial)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಕನ್ನಡ ಧಾರಾವಾಹಿ
ಕಲರ್ಸ್ ಕನ್ನಡ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved