- Home
- Entertainment
- TV Talk
- Bhagyalakshmi Serial: ಒಳ್ಳೆಯ ಹೆಂಡ್ತಿಗೆ ಚಿತ್ರಹಿಂಸೆ ಕೊಟ್ಟಿದ್ದಕ್ಕೆ ತಾಂಡವ್ ಗತಿ ಅಧೋಗತಿ!
Bhagyalakshmi Serial: ಒಳ್ಳೆಯ ಹೆಂಡ್ತಿಗೆ ಚಿತ್ರಹಿಂಸೆ ಕೊಟ್ಟಿದ್ದಕ್ಕೆ ತಾಂಡವ್ ಗತಿ ಅಧೋಗತಿ!
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳನ್ನು ಸಿಲುಕಿಸಬೇಕು ಎಂದು ಶ್ರೇಷ್ಠ ಮಹಾ ಪ್ಲ್ಯಾನ್ ಮಾಡಿದ್ದಳು. ಹೀಗಾಗಿ ಅವಳು ತಾಂಡವ್‌ಗೆ ವಿಷ ಕುಡಿಸಿದ್ದಳು. ಮೊದಲ ಹೆಂಡತಿ ಟಾರ್ಚರ್ ಕೊಟ್ಟಳು ಎಂದು ತಾಂಡವ್ ವಿಷ ಕುಡಿದಿದ್ದಾನೆ ಎಂದು ಬಿಂಬಿಸಿದ್ದಳು.

ಗಂಡನಿಗೆ ವಿಷ ಹಾಕಿದಳು
ತಾಂಡವ್‌ಗೆ, ಶ್ರೇಷ್ಠಗೆ ಭಾಗ್ಯಳನ್ನು ಕಂಡರೆ ಆಗೋದಿಲ್ಲ. ಅವಕಾಶ ಸಿಕ್ಕಾಗೆಲ್ಲ ಭಾಗ್ಯಳನ್ನು ತುಳಿಯಲು ನೋಡುತ್ತಿರುತ್ತಾರೆ. ಇನ್ನೊಂದು ಕಡೆ ಭಾಗ್ಯಳನ್ನು ಜೈಲಿಗೆ ಕಳಿಸಬೇಕು ಎಂದು ಶ್ರೇಷ್ಠ ಮಹಾ ಪ್ಲ್ಯಾನ್ ಮಾಡಿದ್ದಳು. ತಾಂಡವ್ ಊಟಕ್ಕೆ ಅವಳು ವಿಷ ಹಾಕಿದ್ದಳು, ಇದು ಅವನಿಗೆ ಗೊತ್ತೇ ಇರಲಿಲ್ಲ.
ನೋಡಲು ಯಾರೂ ಬರಲಿಲ್ಲ
ಆದೀಶ್ವರ್ ಕಾಮತ್ ಹಾಗೂ ಅವನ ತಂದೆ ಸಹಾಯದಿಂದ ಭಾಗ್ಯ ನಿರಪರಾಧಿ ಎಂದು ಗೊತ್ತಾಯಿತು. ಭಾಗ್ಯ ಜೈಲಿನಿಂದ ಮನೆಗೆ ಬಂದಳು. ಆದರೆ ತಾಂಡವ್ ವಿಷ ಕುಡಿದ ಎಂದು ಹೇಳಿದರೂ ಕೂಡ ಯಾರೂ ಅವನ ಮನೆಯಿಂದ ನೋಡೋಕೆ ಬರಲೇ ಇಲ್ಲ.
ತಾಂಡವ್‌ಗೆ ಒಂದಲ್ಲ ಒಂದು ಕಷ್ಟ
ಭಾಗ್ಯ ಒಳ್ಳೆಯವಳು, ಅವಳನ್ನು ಅರ್ಥ ಮಾಡಿಕೊ, ತಪ್ಪು ತಿದ್ದಿಕೋ ಎಂದು ಬುದ್ಧಿ ಹೇಳಿದರೂ ಕೂಡ ತಾಂಡವ್ ಮಾತ್ರ ಯಾರು ಮಾತು ಕೇಳ್ತಿಲ್ಲ, ಶ್ರೇಷ್ಠ ಜೊತೆ ಸೇರಿಕೊಂಡು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾನೆ.
ಜೈಲಿಗೆ ಹೋದ ತಾಂಡವ್
ಈಗ ಕಾಮತ್ ಕಂಪೆನಿಯಲ್ಲಿ ಶ್ರೇಷ್ಠ ಫೋರ್ಜರಿ ಮಾಡಿದ್ದಳು. ಇದನ್ನು ಇಟ್ಟುಕೊಂಡು ಕಾಮತ್ ಕುಟುಂಬಸ್ಥರು ಕಂಪೆನಿಯಲ್ಲಿ ದೂರು ನೀಡಿದ್ದರು. ಹೀಗಾಗಿ ತಾಂಡವ್‌ನನ್ನು ಅರೆಸ್ಟ್ ಮಾಡಿದ್ದಾರೆ. ಸುಮ್ಮನಿರೋದು ಬಿಟ್ಟು, ಶ್ರೇಷ್ಠ ಸಮಸ್ಯೆ ಮಾಡಲು ಮುಂದಾದಳು, ಇದರಿಂದಲೇ ತಾಂಡವ್ ಜೈಲಿಗೆ ಹೋದನು. ಇದು ಕೂಡ ತಾಂಡವ್‌ಗೆ ಅರ್ಥ ಆಗಿದೆ.
ಮುಂದೆ ಏನಾಗುವುದು?
ತಾಂಡವ್ ಜೈಲಿನಲ್ಲಿದ್ದಾನೆ, ಅವನನ್ನು ಬಿಡಿಸೋಕೆ ಶ್ರೇಷ್ಠ ಕೂಡ ಬಂದಿಲ್ಲ. ಆದರೆ ತಂದೆಯ ಆರೋಗ್ಯ ಕೇಳೋಣ ಎಂದು ತನ್ವಿ ಫೋನ್ ಮಾಡಿದ್ದಾಳೆ. ಮಗಳ ಫೋನ್ ಬಂದಿರೋದು ನೋಡಿ ತಾಂಡವ್ ಎಮೋಶನಲ್ ಆಗಿದ್ದಾನೆ. ಒಟ್ಟಿನಲ್ಲಿ ತಾಂಡವ್‌ಗೆ ಯಾವಾಗ ಬುದ್ಧಿ ಬರುತ್ತದೆಯೋ ಇಲ್ಲವೋ? ಇನ್ನೊಂದು ಕಡೆ ಭಾಗ್ಯ ತನ್ನ ಪ್ರೀತಿಯನ್ನು ಒಪ್ಪಿದರೆ ಮಾತ್ರ ಮದುವೆ ಆಗ್ತೀನಿ ಎಂದು ಆದೀಶ್ವರ್ ಕಾಮತ್ ಪಟ್ಟು ಹಿಡಿದು ಕೂತಿದ್ದಾನೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

