- Home
- Entertainment
- Sandalwood
- Ganesh Chaturthi: ಹೊಸ ಮನೆಯಲ್ಲಿ 'ಭಾಗ್ಯಲಕ್ಷ್ಮೀ' ಸುದರ್ಶನ್ ರಂಗಪ್ರಸಾದ್, ಸಂಗೀತಾ ಭಟ್ ಮೊದಲ ಹಬ್ಬ
Ganesh Chaturthi: ಹೊಸ ಮನೆಯಲ್ಲಿ 'ಭಾಗ್ಯಲಕ್ಷ್ಮೀ' ಸುದರ್ಶನ್ ರಂಗಪ್ರಸಾದ್, ಸಂಗೀತಾ ಭಟ್ ಮೊದಲ ಹಬ್ಬ
ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಹಾಗೂ ಸಂಗೀತಾ ಭಟ್‌ಗೆ ಇಂದು ಹಬ್ಬದ ಸಂಭ್ರಮ ಡಬಲ್ ಎನ್ನಬಹುದು.

ಹೊಸ ಮನೆಯಲ್ಲಿ ಮೊದಲ ಹಬ್ಬ
ನಟಿ ಸಂಗೀತಾ ಭಟ್ ಹಾಗೂ ಸುದರ್ಶನ್ ರಂಗಪ್ರಸಾದ್ ಅವರು ಇತ್ತೀಚೆಗೆ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹೀಗಾಗಿ ಹೊಸ ಮನೆಯಲ್ಲಿ ಇವರಿಗೆ ಮೊದಲ ಗಣೇಶ ಹಬ್ಬ.
ಗಣೇಶನ ಪೂಜೆ
ಹೊಸ ಮನೆಯಲ್ಲಿ ಈ ದಂಪತಿ ಶಾಸ್ತ್ರೋಕ್ತವಾಗಿ ಹಬ್ಬವನ್ನು ಆಚರಿಸಿದ್ದಾರೆ. ಈ ಮೂಲಕ ವಿಘ್ನ ವಿನಾಯಕನ ಸ್ಮರಣೆ ಮಾಡಿದ್ದಾರೆ.
ಸೀರಿಯಲ್, ಸಿನಿಮಾಗಳಲ್ಲಿ ಬ್ಯುಸಿ
ಭಾಗ್ಯಲಕ್ಷ್ಮೀ ಧಾರಾವಾಹಿ ಸೇರಿದಂತೆ ಸುದರ್ಶನ್ ರಂಗಪ್ರಸಾದ್ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಟ, ನಿರ್ದೇಶಕ ಜೊತೆಗೆ ಖಾಸಗಿ ಕಂಪೆನಿಯಲ್ಲಿಯೂ ಕೆಲಸ ಮಾಡುತ್ತ ಸಂಪೂರ್ಣ ಬ್ಯುಸಿ ಆಗಿದ್ದಾರೆ.
ಹೊಸ ಮನೆಯ ದೇವರ ಕೋಣೆ
ಸಂಗೀತಾ ಭಟ್ ಅವರು ಸರಳವಾಗಿ, ಸಾಂಪ್ರದಾಯಿಕ ಸ್ಟೈಲ್‌ನಲ್ಲಿ ದೇವರ ಕೋಣೆ ಮಾಡಿಸಿರೋದು ವಿಶೇಷವಾಗಿದೆ.
ಪ್ರೀತಿಸಿ ಮದುವೆಯಾಗಿರುವ ಜೋಡಿ
‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾದಲ್ಲಿ ಸಂಗೀತಾ ಭಟ್, ಸುದರ್ಶನ್ ರಂಗಪ್ರಸಾದ್ ಅವರು ನಟಿಸಿದ್ದರು. ಅಲ್ಲಿಂದ ಶುರುವಾದ ಸ್ನೇಹ ಇಂದು ದಂಪತಿಗಳಾಗುವವರೆಗೆ ತಂದು ನಿಲ್ಲಿಸಿದೆ.
ಸುಖ-ದುಃಖದಲ್ಲಿ ಸಾಥ್
ಈ ಜೋಡಿ ಮದುವೆಯಾಗಿ 10 ವರ್ಷಗಳು ಉರುಳಿವೆ. ವೃತ್ತಿ ಜೀವನದಲ್ಲಿ ಸಾಕಷ್ಟು ಏರುಪೇರುಗಳು ಬಂದಾಗಲೂ ಈ ಜೋಡಿ ಒಟ್ಟಿಗೆ ಪರಸ್ಪರ ಬೆಂಬಲ ಕೊಡುತ್ತ ಬಂದಿದೆ.