ಬಿಗ್ ಬಾಸ್ ಫೇಮ್‌ನ Tejasswi Prakash Karan Kundrra ಅವರ ಫಸ್ಟ್ ಲವ್ ಅಲ್ಲ
ತೇಜಸ್ವಿ ಪ್ರಕಾಶ್ (Tejasswi Prakash) ಮತ್ತು ಕರಣ್ ಕುಂದ್ರಾ (Karan Kundrra) ರಿಯಾಲಿಟಿ ಟಿವಿ ಶೋ ಬಿಗ್ ಬಾಸ್‌ನ ಕೊನೆಯ ಸೀಸನ್ ಫೇಮಸ್ ಕಪಲ್. ಇವರು ಕಿರುತೆರೆ ಜಗತ್ತಿನ ‘ಐಟಿ’ ಜೋಡಿ ಎನಿಸಿಕೊಂಡಿದ್ದಾರೆ. ಇವರ ನಡುವಿನ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ತೇಜಸ್ವಿಯನ್ನು ಪ್ರೀತಿಸುವ ಮೊದಲು ಕರಣ್ ಅವರು ಇತರರ ಜೊತೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಹಾಗಾದರೆ ಕರಣ್ ಕುಂದ್ರಾ ಅವರ ಲವ್ ಲೈಫ್‌ನಲ್ಲ್ಲಿ ಕೇಳಿಬರುತ್ತಿರುವ ಹೆಸರುಗಳು ಯಾವುದು?

ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಇಬ್ಬರೂ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಭೇಟಿಯಾದರು. ಸ್ನೇಹಿತರಾದರು ಮತ್ತು ಅಂತಿಮವಾಗಿ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದ್ದರು.
ತೇಜಸ್ವಿ ಮತ್ತು ಕರಣ್, ಶೋ ಸಮಯದಿಂದ ಇಂದಿನ ವರೆಗೂ, ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹಂಚಿಕೊಳ್ಳುವ ರೋಮ್ಯಾಂಟಿಕ್ ಫೋಟೋಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿಪಡಿಸುತ್ತಾರೆ
ಆದರೆ ತೇಜಸ್ವಿ ಕರಣ್ ಅವರ ಮೊದಲ ಪ್ರೀತಿ ಅಲ್ಲ. ತೇಜಿಸ್ವಿ ಅವರನ್ನು ಪ್ರೀತಿಸುವ ಮೊದಲು ಕರಣ್ ಅವರ ಜೀವನದಲ್ಲಿ ಹಲವು ಮಹಿಳೆಯರ ಹೆಸರು ಕೇಳಿಬಂದಿತ್ತು. ಕರಣ್ ಕುಂದ್ರಾ ಜೊತೆ ಲಿಂಕಪ್ ಆದ ಮಹಿಳೆಯರು ಯಾರಾರು ಗೊತ್ತಾ?
ಮಧುರಾ ನಾಯ್ಕ್: ಶೋಬಿಜ್‌ನಲ್ಲಿ ಕರಣ್ ಕುಂದ್ರಾ ಅವರ ಮೊದಲ ಸಂಬಂಧವು ನಟಿ ಮಧುರಾ ನಾಯ್ಕ್ ಅವರೊಂದಿಗೆ ಎಂದು ಹೇಳಲಾಗುತ್ತದೆ. 2012 ರ ಸಮಯದಲ್ಲಿ, ಕರಣ್ ಆಗಷ್ಟೇ ದೂರದರ್ಶನ ಉದ್ಯಮಕ್ಕೆ ಸೇರಿದಾಗ, ಇಬ್ಬರೂ ಕ್ಲೋಸ್ ಆಗಿದ್ದರು. ಆದರೆ , ಕರಣ್ ನಂತರ ಮಧುರಾ ಜೊತೆ ಬ್ರೇಕಪ್ ಆದರು. ನಂತರ ಅವರು ಧಾರಾವಾಹಿಯಲ್ಲಿ ಅವಕಾಶ ಪಡೆದರು, ಅದರಲ್ಲಿ ಅವರು ಕೃತಿಕಾ ಕಮ್ರಾ ಅವರೊಂದಿಗೆ ಜೋಡಿಯಾದರು ಮತ್ತು ಅಲ್ಲಿಂದ ಅವರ ಆಗಿನ ಸಹನಟಿಯೊಂದಿಗೆ ಆಫೇರ್ ಪ್ರಾರಂಭಿಸಿದರು.
ಕೃತಿಕಾ ಕಮ್ರಾ: ಕರಣ್ ಕುಂದ್ರಾ ಮತ್ತು ಕೃತಿಕಾ ಕಮ್ರಾ ಹಿಂದಿನ ದಿನಗಳಲ್ಲಿ ಅತ್ಯಂತ ಪ್ರೀತಿಯ ದಂಪತಿಗಳಲ್ಲಿ ಒಬ್ಬರು. ಅವರ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಕೆಮಿಸ್ಟ್ರಿ ಎಲ್ಲರನ್ನು ಸೆಳೆದಿತ್ತು / ಕೃತಿಕಾ ಮತ್ತು ಕರಣ್ ಕೂಡ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ , ಅವರ ಸಂಬಂಧವು ಉಳಿಯಲು ಸಾಧ್ಯವಾಗಲಿಲ್ಲ.
ಅನುಷ್ಕಾ ದಾಂಡೇಕರ್: ನಟ ಫರ್ಹಾನ್ ಅಖ್ತರ್ ಅವರ ಪತ್ನಿ ಶಿಬಾನಿ ದಾಂಡೇಕರ್ ಅವರ ಸಹೋದರಿ ವಿಜೆ ಅನುಷಾ ದಾಂಡೇಕರ್ ಕರಣ್ ಕುಂದ್ರಾ ಅವರ ದೀರ್ಘಕಾಲದ ಗೆಳತಿಯಾಗಿದ್ದರು. ಇಬ್ಬರೂ ಕೆಲವು ವರ್ಷಗಳ ಕಾಲ ಸಂಬಂಧದಲ್ಲಿದ್ದರು ಆದರೆ ಅಂತಿಮವಾಗಿ ಬೇರೆಯಾದರು.
ತೇಜಸ್ವಿ ಪ್ರಕಾಶ್: ಕರಣ್ ಕುಂದ್ರಾ ಅವರು ಬಿಗ್ ಬಾಸ್ ಸೆಟ್‌ನಲ್ಲಿ ಭೇಟಿಯಾದ ತೇಜೆಸ್ವಿ ಪ್ರಕಾಶ್ ಅವರೊಂದಿಗೆ ಪ್ರಸ್ತುತ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ, ತೇಜಸ್ವಿ ಹೊಸ ಕಾರನ್ನು ತೆಗೆದುಕೊಳ್ಳುವಾಗ ಕರಣ್ ಸಹ ಅವರ ಜೊತೆ ಶೋರೂಮ್‌ನಲ್ಲಿ ಕಾಣಿಸಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.