ಬಿಗ್ ಬಾಸ್ ಮನೆಯೊಳಗೆ ಹೋಗಿ ಸಣ್ಣ ಆಗಿದಕ್ಕೆ ಇಷ್ಟೊಂದು ಆಫರ್ ಸಿಗುತ್ತಿದೆ ಎಂದ ನಟಿ ತೇಜಸ್ವಿ ಪ್ರಕಾಶ್!
ಬಿಗ್ ಬಾಸ್ ಸೀಸನ್ 15ರ ಟ್ರೋಫಿ ಕೈ ಸೇರುತ್ತಿದ್ದಂತೆ ನಾಗಿಣಿ 6 ಆಫರ್ ಪಡೆದುಕೊಂಡ ತೇಜಸ್ವಿ ಪ್ರಕಾಶ್ ಸಣ್ಣ ಅಗಿರುವುದಕ್ಕೆ ಖುಷಿ ವ್ಯಕ್ತ ಪಡಿಸಿದ್ದಾರೆ.
ಬಿಗ್ ಬಾಸ್ ಸೀಸನ್ 15ರ ವಿಜೇತೆ ತೇಜಸ್ವಿ ಪ್ರಕಾಶ್ (Tejasswi Prakash) ಮನೆಯೊಳಗೆ ಊಟ ಇಲ್ಲದೆ ಸಣ್ಣ ಅಗಿರುವುದಕ್ಕೆ ನನಗೆ ನಾಗಿಣಿ 6 ಆಫರ್ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
'ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿದ್ದ ಟಾಸ್ಕ್ ಮತ್ತು ಕೆಲಸಗಳಿಂದ ನನಗೆ ಸರಿಯಾಗಿ ಊಟ ಮಾಡಲು ಆಗುತ್ತಿರಲಿಲ್ಲ. ಈ ಸಮಯದಲ್ಲಿ ನಾನು ತುಂಬಾನೇ ಸಣ್ಣಗಾದೆ'
'ನಾನು ಸಣ್ಣ ಆಗಿದಕ್ಕೆ ನಾಗಿಣಿ ಧಾರಾವಾಹಿ ಆಫರ್ ಮಾಡಿದ್ದಾರೆ. ನಾಗಿಣಿ ತುಂಬಾನೇ ಫಿಟ್ ಆಂಡ್ ಗ್ಲಾಮ್ ಆಗಿರಬೇಕು. ಈಗ ನಾನಿರುವ ಗ್ಲಾಮ್‌ನ ಜನರು ಇಷ್ಟ ಪಡುತ್ತಿದ್ದಾರೆ'
ಬಿಗ್ ಬಾಸ್ ಟ್ರೋಫಿ, ನಾಗಿಣಿ ಧಾರಾವಾಹಿ ಜೊತೆಗೆ ತೇಜಸ್ವಿ ಪ್ರಕಾಶ್ ಅವರು ಕರಣ್ ಕುಂದ್ರಾ ಪ್ರೀತಿ ಕೂಡ ಪಡೆದುಕೊಂಡಿದ್ದಾರೆ. ಪ್ಯಾಪರಾಜಿಗಳ ಕಣ್ಣಿಗೆ ಪದೇ ಪದೇ ಕಾಣಿಸಿಕೊಳ್ಳುತ್ತಾರೆ.
'ನಮ್ಮಿಬ್ಬರ ಕೆಲಸದಿಂದ ಸಮಯ ಹೆಚ್ಚಿಗೆ ಸಿಗುವುದಿಲ್ಲ.ಆದರೆ ಜನರು ನಮಗೆ ತೋರಿಸುತ್ತಿರುವ ಪ್ರೀತಿ ಮತ್ತು attentionನ ಯಾಕೆ ಬೇಡ ಅಂತ ಹೇಳಬೇಕು'
'ನಮ್ಮ ಕೆಲಸ ಇರುವುದೇ ಜನರಿಗೆ ಕನೆಕ್ಟ್ ಆಗುವುದಕ್ಕೆ ನಾವು ಯಾಕೆ ನಮ್ಮ ಪ್ರೈವಸಿ ಅಂತ ಹೇಳಿ ಹೇಳಿ ಜನರಿಂದ ದೂರ ಉಳಿಯಬೇಕು' ಎಂದು ತೇಜಸ್ವಿ ಹೇಳಿದ್ದಾರೆ.