ತನ್ನ ಯಶಸ್ಸಿನ ಹಿಂದಿನ ರೂವಾರಿಯನ್ನು ಪರಿಚಯಿಸಿದ ಬಿಗ್ಬಾಸ್ ರಕ್ಷಿತಾ ಶೆಟ್ಟಿ
ಬಿಗ್‌ಬಾಸ್ ರನ್ನರ್ ಆಫ್ ಖ್ಯಾತಿಯ ಮಂಗಳೂರಿನ ರಕ್ಷಿತಾ ಶೆಟ್ಟಿ, ತಮ್ಮ ಯಶಸ್ಸಿನ ಹಿಂದಿರುವ ನಿಜವಾದ ರೂವಾರಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಶೇ.60ರಷ್ಟು ತೆರೆಮರೆಯಲ್ಲಿ ಕೆಲಸ ಮಾಡುವ ಅವರನ್ನು ರಕ್ಷಿತಾ ಪರಿಚಯಿಸಿದ್ದಾರೆ.

ಇತಿಹಾಸ ಬದಲಿಸಿದ ಮಂಗಳೂರಿನ ಬಾಲೆ
ಮಂಗಳೂರು ಬೆಡಗಿ ಬಿಗ್ಬಾಸ್ ರನ್ನರ್ ಆಫ್ ರಕ್ಷಿತಾ ಶೆಟ್ಟಿ ಈಗ ತಮ್ಮ ಯಶಸ್ಸಿನ ಹಿಂದಿನ ರೂವಾರಿಯನ್ನು ಪರಿಚಯಿಸಿದ್ದಾರೆ. ಬಿಗ್ಬಾಸ್ ಗೆದ್ದ ನಂತರ ಅವರು ಕೇವಲ ಮಂಗಳೂರಿಗೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಜನಪ್ರಿಯರಾಗಿದ್ದಾರೆ. ಅವರ ನಿಷ್ಕಲ್ಮಶ ಮುಗ್ಧ ಮಾತುಗಳು, ಪ್ರಬುದ್ಧತೆ, ಎಲ್ಲರ ಗಮನ ಸೆಳೆಯಿತು. ಇದೇ ಕಾರಣಕ್ಕೆ ಮಂಗಳೂರಿನಲ್ಲಿ ಅವರಿಗೆ ಬಿಗ್ಬಾಸ್ ಗೆದ್ದ ನಂತರ ಭವ್ಯ ಸ್ವಾಗತ ಸಿಕ್ಕಿತು. ಸಾಮಾನ್ಯವಾಗಿ ಮಂಗಳೂರಿನ ಜನ ಯಾವ ಸೆಲೆಬ್ರಿಟಿಗಳಿಗೂ ಮುಗಿ ಬೀಳುವುದಿಲ್ಲ, ಇದೇ ಕಾರಣಕ್ಕೆ ಮಂಗಳೂರಿಗೆ ಬಂದರೆ ಸೆಲೆಬ್ರಿಟಿ ಅನಿಸೋದೇ ಇಲ್ಲ ಎಂದು ಕೆಲ ಸೆಲೆಬ್ರಿಟಿಗಳು ಹೇಳುವುದನ್ನು ನೋಡಬಹುದು. ಸಿನಿಮಾ ನಟರಿಗೆ, ಟಿವಿ ತಾರೆಯರಿಗೆ ಫೋಟೋ ಸೆಲ್ಫಿಗಾಗಿ ಮಂಗಳೂರಿಗರು ಮುಗಿ ಬೀಳೋದು ತೀರಾ ಕಡಿಮೆ. ಆದರೆ ರಕ್ಷಿತಾ ವಿಷಯದಲ್ಲಿ ಹಾಗಾಗಲಿಲ್ಲ. ರಕ್ಷಿತಾ ರನ್ನರ್ ಆಫ್ ಆಗಿ ಮಂಗಳೂರಿಗೆ ಬರುತ್ತಿದ್ದಂತೆ ಆಕೆಗೆ ಭವ್ಯ ಸ್ವಾಗತ ಸಿಕ್ಕಿತ್ತು. ದಾರಿ ತುಂಬಾ ಅಭಿಮಾನಿಗಳು ಆಕೆಯನ್ನು ಸ್ವಾಗತಿಸಿ ಸೆಲ್ಫಿ ತೆಗೆದುಕೊಂಡರು.
ತನ್ನ ಯಶಸ್ಸಿನ ಹಿಂದಿನ ರೂವಾರಿಯ ಪರಿಚಯಿಸಿದ ರಕ್ಷಿತಾ
ಆದರೆ ಕನ್ನಡ ಬಿಗ್ಬಾಸ್ ರನ್ನರ್ ಆಫ್ ಗೆದ್ದ ರಕ್ಷಿತಾ ಶೆಟ್ಟಿ ಅದಕ್ಕೂ ಮೊದಲು ತಮ್ಮ ಯೂಟ್ಯೂಬ್ ಬ್ಲಾಗ್‌ಗಳ ಮೂಲಕ ಫೇಮಸ್ ಆಗಿದ್ದವರು. ತಮ್ಮ ಎಂದಿನಿ ಕನ್ನಡ ತುಳು ಹಿಂದಿ ಮಿಶ್ರಿತ ಭಾಷೆಯಿಂದ ಅವರು ಎಲ್ಲರ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಕರಾವಳಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಆದರೆ ಅವರು ಈಗ ತಮ್ಮ ಈ ಯಶಸ್ಸಿನ ಹಿಂದಿನ ರೂವಾರಿ ಒಬ್ಬರನ್ನು ಜನರಿಗೆ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದು, ಆ ವೀಡಿಯೋ ಈಗ ಸಾಷ್ಟು ವೈರಲ್ ಆಗ್ತಿದೆ.
ತೆರೆ ಹಿಂದಿದ್ದವರನ್ನು ಮುಂದೆ ಕರೆಸಿದ ರಕ್ಷಿತಾ
ತಮ್ಮನ್ನು ಸ್ವಾಗತಿಸಿದ ಕಾರ್ಯಕ್ರಮವೊಂದರಲ್ಲಿ ತೆರೆಯ ಹಿಂದೆ ನಿಂತಿದ್ದ ಆ ವ್ಯಕ್ತಿಯ ಕೈ ಹಿಡಿದು ಎಳೆದು ವೇದಿಕೆ ಮುಂದೆ ತಂದು ರಕ್ಷಿತಾ ಶೆಟ್ಟಿ ಇವರು ನನ್ನ ಯಶಸ್ಸಿನ ಹಿಂದಿನ ದೊಡ್ಡ ರೂವಾರಿ ಎಂದು ಪರಿಚಯಿಸಿದ್ದಾರೆ. ಇವರ ಹೆಸರು ವಿಕಾಸ್ ಅಂತ, ನಾನು ನನ್ನ ಯೂಟ್ಯೂಬ್ ಚಾನೆಲ್‌ಗಾಗಿ 40 ಶೇಕಡಾ ಕೆಲಸ ಮಾಡಿದರೆ, ಶೇಕಡಾ 60ರಷ್ಟು ಕೆಲಸ ಮಾಡುವುದು ಇವರು. ನನ್ನ ಕೆಲಸ ಜಸ್ಟ್ ಈಗ ಹೇಗೆ ಮಾತಾಡ್ತೇನೋ ಹಾಗೆ ಮಾತನಾಡುವುದು. ಆದರೆ ನನ್ನ ಬ್ಲಾಗ್ ಹಿಂದಿನ ಬಹುತೇಕ ಕೆಲಸವನ್ನು ಇವರು ಮಾಡುವುದು.
ಇದನ್ನೂ ಓದಿ: ರಾಮಕುಂಜದಲ್ಲಿ ತಂದೆಗೆ ಇರಿದು ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿಯೇ ಮಗನ ಕೊಲೆ ಮಾಡಿದ್ದಾರೆ ಎಂದ ಪತ್ನಿ
ಇವರೇ ನೋಡಿ ರಕ್ಷಿತಾ ಯಶಸ್ಸಿನ ಹಿಂದಿನ ರೂವಾರಿ
ಉದಾಹರಣೆಗೆ ಎಲ್ಲಾ ಸೆಟ್ ಮಾಡಿ ಇಡುವುದು. ಅಂದರೆ ಅಡುಗೆ ಕಾರ್ಯಕ್ರಮವಾದರೆ ಒಲೆಗೆ ಸೌದೆ ಇಡುವುದು ಬೆಂಕಿ ಹಚ್ಚುವುದು ಎಲ್ಲಾ ಇವರೇ ಮಾಡ್ತಾರೆ. ನಾನು ಕೇವಲ ಮೇಲೆ ಪಾತ್ರೆ ಇಡ್ತೇನೆ ಅಷ್ಟೇ. ಆದರೆ ಬೆಂಕಿ ಹಾಕುವುದಕ್ಕೆ ಎಷ್ಟು ಕಷ್ಟ ಉಂಟು, ಆ ಕಷ್ಟ ಯಾರಿಗೂ ಕಾಣಿಸುವುದಿಲ್ಲ, ಇವರು ನಿಜವಾಗಿಯೂ ಒಬ್ಬರು ಯಾವುದೇ ಸ್ವಾರ್ಥ ಇಲ್ಲದ ವ್ಯಕ್ತಿ, ನಾನು ಕೂಡ ಎಲ್ಲಾ ಕಡೆ ಕಾಣಿಸಬೇಕು ಎಂಬ ಯಾವ ಆಸೆಯೂ ಅವರಿಗೆ ಇಲ್ಲ, ಇವರೇ ನನ್ನ ಯಶಸ್ಸಿನ ಹಿಂದಿರುವ ದೊಡ್ಡ ವ್ಯಕ್ತಿ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ಸಿಂಗಲ್ ಪೆಂಗ್ವಿನ್‌ಗಾಗಿ ಮರುಗಿದ ನೆಟ್ಟಿಗರು: ವೈರಲ್ ಸ್ಟೋರಿಯ ಅಸಲಿಯತ್ತು?
ರಕ್ಷಿತಾ ಗುಣಕ್ಕೆ ನೆಟ್ಟಿಗರ ಮೆಚ್ಚುಗೆ
ಈ ವೇಳೆ ವೇದಿಕೆ ಕೆಳಗಿದ್ದವರು ವಿಕಾಸ್‌ಗೆ ಜೈ ಎಂದು ಕೂಗಿದ್ದು, ಈ ವೇಳೆ ರಕ್ಷಿತಾ ಶೆಟ್ಟಿ ಕೂಡ ಜೈ ಜೈ ಜೈ ಅಂತಾ ವೇದಿಕೆ ಮೇಲೆ ಕೈ ಎತ್ತಿ ತಮ್ಮ ಎಂದಿನ ಜೋಷ್‌ನಲ್ಲಿ ಕೂಗಿದ್ದಾರೆ. ರಕ್ಷಿತಾ ಹೀಗೆ ತನ್ನ ಯಶಸ್ಸಿನ ಹಿಂದಿನ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ಅನೇಕರು ಖುಷಿಯಾಗಿದ್ದು, ರಕ್ಷಿತಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಜೀವನದಲ್ಲಿ ಯಾರು ನಮಗೆ ಸಹಾಯ ಮಾಡತಾರೋ ಅವರನ್ನು ಎಂದಿಗೂ ಮರಿಯಬಾರದು ಅನ್ನೋದಿಕೆ ರಕ್ಷಿತಾ ಅವರು ಸಾಕ್ಷಿ ಎಂದು ಒಬ್ಬರು ಬರೆದಿದ್ದಾರೆ. ನಿಜವಾದ ಕೃತಜ್ಞತಾ ಮೂರ್ತಿ ರಕ್ಷಿತಾ... ವಿಕಾಸ್ ಅಷ್ಟು ಪ್ರಚಾರ ಪ್ರಿಯರಲ್ಲ..ಅವರು ಮುಂದೆ ಕರೆದರೂ ಬರುವಂತಹ ಮನುಷ್ಯನಲ್ಲ..ಹತ್ತಿದ ಏಣಿಯನ್ನು ಎಂದಿಗೂ ಮರೆಯಬಾರದು ಎನ್ನುವವರಿಗೆ ರಕ್ಷಿತಾ ಒಂದು ಮಾದರಿ ಹೆಸರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

