- Home
- Entertainment
- TV Talk
- Bhagyalakshmi Serial: ಭಾಗ್ಯಳಿಗೆ ಮುಗಿಯದ ಶತ್ರುಗಳ ಕಾಟ… ಹೊಸ ವಿಲನ್ ಎಂಟ್ರಿ ನೋಡಿ ವೀಕ್ಷಕರು ಕಂಗಾಲು…
Bhagyalakshmi Serial: ಭಾಗ್ಯಳಿಗೆ ಮುಗಿಯದ ಶತ್ರುಗಳ ಕಾಟ… ಹೊಸ ವಿಲನ್ ಎಂಟ್ರಿ ನೋಡಿ ವೀಕ್ಷಕರು ಕಂಗಾಲು…
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಒಬ್ಬರ ನಂತರ ಒಬ್ಬರಂತೆ ವಿಲನ್ ಗಳು ಎಂಟ್ರಿ ಕೊಡುತ್ತಿದ್ದು, ಈಗ ಮತ್ತೊಬ್ಬ ಶತ್ರುವನ್ನು ನೋಡಿ ವೀಕ್ಷಕರು ಕಂಗಾಲಾಗಿದ್ದು, ಮುಂದೆ ಟ್ರಂಪ್ ಬಂದ್ರೂ ಅಚ್ಚರಿ ಇಲ್ಲ ಎಂದಿದ್ದಾರೆ.

ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi serial) ಆರಂಭವಾಗಿದ್ದೇ ಭಾಗ್ಯಾಳ ಬಾಳಲ್ಲಿ ಶತ್ರುವಾದ ಗಂಡ ತಾಂಡವ್ ನಿಂದ, ಅಲ್ಲಿಂದ ಇಲ್ಲಿವರೆಗೆ ಸೀರಿಯಲ್ ನಲ್ಲಿ ಬಂದ ಶತ್ರುಗಳ ಲಿಸ್ಟ್ ಗೇನು ಕಡಿಮೆ ಇಲ್ಲ. ಅಂದಿನಿಂದ ಇಂದಿನವರೆಗೂ ಶತ್ರುಗಳ ಮೇಲೆ ಶತ್ರುಗಳ ಎಂಟ್ರಿಯಾಗುತ್ತಲೇ ಇದೆ.
ಆರಂಭದಲ್ಲಿ ತಾಂಡವ್, ಅವನ ಜೊತೆಗೆ ಶ್ರೇಷ್ಠಾ, ಅದಾದ ಮೇಲೆ ತನ್ವಿ ಕೂಡ ಅಮ್ಮನ ಬಾಳಲ್ಲಿ ವಿಲನ್ ಆಗಿದ್ಲು, ಅವರ ನಂತ್ರ ಎಂಟ್ರಿ ಕೊಟ್ಟಿದ್ದು, ಮತ್ತೆ ಕನ್ನಿಕಾ ಬಂದ್ಲು, ಅವರ ಅಣ್ಣ ಬಂದ್ರು, ಈಗ ಮತ್ತೊಬ್ಬ ವಿಲನ್ ಎಂಟ್ರಿಯಾಗಿದೆ. ಇದನ್ನೆಲ್ಲಾ ನೋಡಿ ವೀಕ್ಷಕರು ಮಾತ್ರ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ತನ್ನ ಅಣ್ಣನ ಜೊತೆ ಪೂಜಾ ಮದುವೆ ನಿಶ್ಚಿತಾರ್ಥ ಫಿಕ್ಸ್ ಆಗಿರೋದು ಕನ್ನಿಕಾಗೆ ಸಹಿಸೋದಕ್ಕೆ ಆಗಿಲ್ಲ. ಅದಕ್ಕಾಗಿ ಅಣ್ಣನನ್ನು ಕರಿಸಿದ್ದಾರೆ. ಅಣ್ಣ ಎಂಟ್ರಿಯಾಗ್ತಿದ್ದಂತೆ ಭಾಗ್ಯಗೆ ಸವಾಲೊಡ್ಡಲು ಶುರು ಮಾಡಿದ್ದಾನೆ. ಭಾಗ್ಯಾ ಫ್ಯಾಮಿಲಿನೆ ಸರಿ ಇಲ್ಲ ಎಂದು ಸದ್ಯ ತಂಗಿ ಜೊತೆ ಸೇರಿ ತಾನೂ ನಿಶ್ಚಿತಾರ್ಥ ಮುರಿಯೋದಕ್ಕೆ ತುದಿ ಗಾಲಲ್ಲಿ ನಿಂತಿದ್ದಾನೆ.
ಈಗಾಗಲೇ ಇಬ್ಬರು ವಿಲನ್ ಗಳು (villains)ಎಂಟ್ರಿ ಕೊಟ್ಟು ಭಾಗ್ಯ ಬಾಳಲ್ಲು ಹಾಳು ಮಾಡ್ತಿದ್ದಾರೆ ಅಂದ್ರೆ, ಇದೀಗ ಇನ್ನೊಬ್ಬ ವಿಲನ್ ಎಂಗೇಜ್ ಮೆಂಟ್ ಮುರಿಯೋದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬೇರೆ ಯಾರೂ ಅಲ್ಲ, ನಟಿ ಭವ್ಯಶ್ರೀ ರೈ. ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ವಿಲನ್ ಗಳು ಬರೋದು ನೋಡಿ, ಇನ್ನು ಟ್ರಂಪ್ ಕರೆಸೋದೊಂದು ಬಾಕಿ, ಮತ್ತೆಲ್ಲಾ ಬಂದಾಯ್ತು ಎಂದು ಟೀಕೆ ಮಾಡಿದ್ದಾರೆ.
ಯಾವ ಯಾವ ಬಿಲದಿಂದ ಇನ್ನೂ ಏನೆನ್ನು ಎದ್ದು ಬರುತ್ತವೋ ಈ ಸೀರಿಯಲ್ ಅಲ್ಲಿ, ಮುಂದಿನ ಎಪಿಸೋಡಲ್ಲಿ ಅಮೇರಿಕದ ಟ್ರಂಪ್ (Trump) ಬಂದು ಈ ಎಂಗೇಜ್ಮೆಂಟ್ ಮುಂದುವರೆಸುತ್ತಾರೆ, ಅಯ್ಯೋ ಏನಪ್ಪಾ ದಿನಕ್ಕೊಬ್ಬ ಹೊಸ ಎಂಟ್ರಿ ಕೊಡ್ತಿದ್ದಾರಲ್ಲ ಎಂದು ತಲೆ ಕೆರೆದುಕೊಂಡಿದ್ದಾರೆ ಕೆಲವು ವೀಕ್ಷಕರು.
ಇನ್ನೂ ಒಂದಷ್ಟು ಜನರು ಎಲ್ಲಿಂದ ಬರುತ್ತಾರೆ ಎಲ್ಲ ನೆಗೆಟಿವ್ ರೋಲ್ , ಅವರ ಕ್ಯಾರೆಕ್ಟರ್ ಗೆ ಫುಲ್ ಎಫರ್ಟ್ ಕೊಡುತ್ತಾ ಇದ್ದಾರೆ , ಜನರಿಗೆ ಇಷ್ಟ ಆಗುವ ತರ ಸ್ಟೋರಿ ಬರೆಯಿರಿ, ಸದ್ಯ ಸೀರಿಯಲ್ ನಲ್ಲಿ ಪೂಜಾನೆ ಹೈಲೈಟ್, ತಾಂಡವ್-ಶ್ರೇಷ್ಠಾ ಕಥೆಯೇ ಇಲ್ಲ. ಭಾಗ್ಯಳನ್ನೂ ಎಲ್ಲಾ ಕಡೆಯಿಂದ ಸೋಲಿಸುತ್ತೀರಿ. ಈ ಎಂಗೇಜ್ಮೆಂಟ್ ನಿಲ್ಲಿಸುವುದಕ್ಕಿಂತ ಈ ಧಾರವಾಹಿಯನ್ನೇ ನಿಲ್ಸಿಬಿಡಿ ಎಂದು ಕಿಡಿ ಕಾರಿದ್ದಾರೆ ಜನರು.
ಅಂದ ಹಾಗೇ ಭಾಗ್ಯ ಜೀವನದ ನೋವಿನ ಕಥೆಯನ್ನು ಹೊತ್ತ ಭಾಗ್ಯಲಕ್ಷ್ಮಿ ಧಾರಾವಾಹಿ ಕಳೆದ ಎರಡೂ ವರೆ ವರ್ಷಗಳಿಂದ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಸುಷ್ಮಾ ರಾವ್ (Sushma Rao), ಪದ್ಮಜಾ, ಆಶಾ ಅಯ್ಯನಾರ್, ಕಾವ್ಯಾ ಗೌಡ, ಸುದರ್ಶನ್ ರಂಗಪ್ರಸಾದ್, ಸೇರಿ ದೊಡ್ಡ ಕಲಾವಿದರ ಬಳಗವೇ ಇದೆ. ಇದೀಗ ಹೊಸದಾಗಿ ಹರೀಶ್ ರಾಜ್, ಸುಕೃತಾ ನಾಗ್, ಭವ್ಯಶ್ರೀ ರೈ ಸೇರಿಕೊಂಡಿದ್ದಾರೆ.